ಲಾರ್ಡ್ಸ್ ಪಿಚ್ ನಿನ್ನ ಮನೆಯ ಹಿತ್ತಲಲ್ಲ: ಆ್ಯಂಡರ್ಸನ್ ವಿರುದ್ಧ ರೇಗಿದ ವಿರಾಟ್
Team Udayavani, Aug 16, 2021, 11:07 AM IST
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಂತಿಮ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನದಾಟದಲ್ಲಿ ಪೂಜಾರ- ರಹಾನೆ ಬ್ಯಾಟಿಂಗ್ ಹೋರಾಟದ ನಡುವೆಯೂ ಟೀಂ ಇಂಡಿಯಾದ ಸ್ಥಿತಿ ಆತಂಕದಲ್ಲಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯ ಕೆಲವು ಸನ್ನಿವೇಶಗಳಿಗೆ ಕಾರಣವಾಗಿದೆ. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಜಸ್ಪ್ರೀತ್ ಬುಮ್ರಾರ ಸತತ ಬೌನ್ಸರ್ ಗಳಿಂದ ಆ್ಯಂಡರ್ಸನ್ ಕೆರಳಿದ್ದರು. ಇದಾದ ಬಳಿಕ ಭಾರತದ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ:121 ಮಕ್ಕಳ ಮನೆ ಅಂಗಳದಲ್ಲೇ ಅನುರಣಿಸಿದ ರಾಷ್ಟ್ರಗೀತೆ
ಆ್ಯಂಡರ್ಸನ್ ಬೌಲಿಂಗ್ ಮಾಡುವ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ಇಂಗ್ಲೆಂಡ್ ನ ಹಿರಿಯ ಬೌಲರ್ ನ ಮೇಳೆ ಕಿಡಿಕಾರಿದ್ದಾರೆ. “ನೀವು ನನ್ನ ರೇಗಿಸುತ್ತಿದ್ದೀರಾ? ಇದು ನಿಮ್ಮ ಮನೆಯ ಹಿತ್ತಲಲ್ಲ. ಇದೇನಾ ನಿನ್ನ ಹಿರಿತನ” ಎಂದು ರೇಗಿದ್ದಾರೆ.
what the hell wrong between kohli and anderson…
This could be reason of lapse of concentration for virat which eventually cast in big way…#virat #kohli #anderson #ENGvsIND #ENGvIND #jimmy #RohitSharma #pujara #LordsTest #markwood #bcci #rahane #cricket pic.twitter.com/L8kziQojNq— Dileep Kumar Sharma (@Dileep1607) August 15, 2021
ಕೊಹ್ಲಿ ವರ್ತನೆಗೆ ಪರ- ವಿರೋಧ ವ್ಯಕ್ತವಾಗಿದೆ. ಮಾತಿನ ಭರದಲ್ಲಿ ವಿರಾಟ್ ಕೊಹ್ಲಿ ನಿಂದನಾತ್ಮಕ ಪದ ಪ್ರಯೋಗ ಮಾಡಿದ್ದು, ಐಸಿಸಿ ಇದನ್ನು ಗಮನಿಸಬೇಕು ಎಂದು ಹಲವು ಅಭಿಪ್ರಾಯ ಪಟ್ಟಿದ್ದಾರೆ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಲಾರ್ಡ್ಸ್ ಟೆಸ್ಟ್ ಪಂದ್ಯದ 4ನೇ ದಿನ ತೀವ್ರ ಅಪಾಯಕ್ಕೆ ಸಿಲುಕಿದೆ. 6 ವಿಕೆಟಿಗೆ 181 ರನ್ ಗಳಿಸಿ ದಿನದಾಟ ಮುಂದುವರಿಸುತ್ತಿದ್ದು, ಕೇವಲ 154 ರನ್ನುಗಳ ಮುನ್ನಡೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.