ಅಯರ್‌ಲ್ಯಾಂಡ್ ವಿರುದ್ಧ ಆಯ್ಕೆವಿರಾಟ್ ಕೊಹ್ಲಿ ಕೌಂಟಿ ಆಟ ಅನಿಶ್ಚಿತ
Team Udayavani, May 11, 2018, 6:05 AM IST
ಹೊಸದಿಲ್ಲಿ: ಇತ್ತೀಚೆಗಷ್ಟೇ ಭಾರತ ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಗಳ ಆಯ್ಕೆ ನಡೆದಿದೆ. ಆಯ್ಕೆಯ ಅನಂತರ ಅನೇಕ ಗೊಂದಲಗಳು ಹುಟ್ಟಿಕೊಂಡಿವೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಅಯರ್‌ಲ್ಯಾಂಡ್ ವಿರುದ್ಧ 2 ಪಂದ್ಯಗಳ ಟಿ20 ಸರಣಿಯನ್ನು ಆಡುವುದಿಲ್ಲವೆಂದು ಮುಂಚಿತವಾಗಿಯೇ ತಿಳಿಸಿದ್ದರೂ ಅವರನ್ನು ಆ ತಂಡಕ್ಕೆ ಆಯ್ಕೆ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಬಿಸಿಸಿಐನಲ್ಲಿ ಎರಡು ಗುಂಪುಗಳಾಗಿದ್ದು, ಈ ಒಳಜಗಳವೇ ಈ ಆಯ್ಕೆಗೆ ಕಾರಣವೆನ್ನಲಾಗಿದೆ.
ಅಯರ್‌ಲ್ಯಾಂಡ್ ವಿರುದ್ಧ ಜೂನ್ 27 ಮತ್ತು 29ರಂದು ಎರಡು ಟಿ20 ಪಂದ್ಯ ನಡೆಯಲಿವೆ. ಇದಕ್ಕೂ ಮುನ್ನವೇ ವಿರಾಟ್ ಕೊಹ್ಲಿ, ಇಂಗ್ಲೆಂಡ್‌ನ ಕೌಂಟಿ ತಂಡ ಸರ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಜೂನ್ ತಿಂಗಳಿಡೀ ತಿಂಗಳು ಆ ತಂಡದ ಪರ ಆಡುವುದಾಗಿ ತಿಳಿಸಿದ್ದರು. ಇದನ್ನು ಸರ್ರೆ ವೆಬ್‌ಸೈಟ್‌ನಲ್ಲಿ ಮುಂಚೆಯೇ ಪ್ರಕಟಿಸಲಾಗಿತ್ತು. ಆ ಪ್ರಕಾರ ಕೊಹ್ಲಿ ಜೂ .25ರಿಂದ 28ರ ತನಕ ಸರ್ರೆ ಪರ ಯಾರ್ಕ್‌ಶೈರ್ ವಿರುದ್ಧ ಕೌಂಟಿ ಪಂದ್ಯವಾಡಲಿದ್ದಾರೆ. ಮುಂದೆ ಇಂಗ್ಲೆಂಡ್ ಪ್ರವಾಸವಿರುವುದರಿಂದ ಅದಕ್ಕೆ ಸಿದ್ಧವಾಗಲಿಕ್ಕಾಗಿಯೇ ಕೊಹ್ಲಿ ಈ ವ್ಯವಸ್ಥೆ ಮಾಡಿಕೊಂಡಿದ್ದರು.
ಒಳಜಗಳವೇ ಕಾರಣ?
ವಿರಾಟ್ ಕೊಹ್ಲಿಯ ನಿರ್ಧಾರ ಬಿಸಿಸಿಐಗೆ ಗೊತ್ತಿದ್ದರೂ ಅಯರ್‌ಲ್ಯಾಂಡ್ ವಿರುದ್ಧ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿರುವುದು ಅನೇಕ ಪ್ರಶ್ನೆಗಳನ್ನು ಮೂಡಿಸಿವೆ. ಮೂಲಗಳ ಪ್ರಕಾರ ಕೊಹ್ಲಿಯನ್ನು ಹೀಗೆ ಆಯ್ಕೆ ಮಾಡುವುದಕ್ಕೆ ಒಳಜಗಳ ಕಾರಣ ಎನ್ನಲಾಗಿದೆ. ಜೂ. 14ರಿಂದ ಬೆಂಗಳೂರಿನಲ್ಲಿ ಆಫ್ಘಾನಿಸ್ಥಾನದ ಪಾದಾರ್ಪಣೆ ಟೆಸ್ಟ್ ಪಂದ್ಯ ನಡೆಯಲಿದೆ. ಇದರಲ್ಲಿ ಆಡದಿರಲು ಕೊಹ್ಲಿ ನಿರ್ಧರಿಸಿದ್ದಾರೆ. ಇದನ್ನು ಬಿಸಿಸಿಐನ ಒಂದು ಬಣ ವಿರೋಧಿಸಿದೆ. ಮತ್ತೂಂದು ಬಣ ಬೆಂಬಲಿಸಿದೆ. ಈ ಜಗಳ ಅವರನ್ನು ಅಯರ್‌ಲ್ಯಾಂಡ್‌ಗೆ ಆಯ್ಕೆ ಮಾಡುವುದರೊಂದಿಗೆ ಮುಕ್ತಾಯವಾಗಿದೆ ಎಂದು ಹೇಳಲಾಗಿದೆ.
ಕೊಹ್ಲಿ ಆಡುತ್ತಾರೆ: ಬಿಸಿಸಿಐ ಸ್ಪಷ್ಟನೆ
ಈ ಗೊಂದಲಗಳ ಕುರಿತು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರನ್ನು ಪ್ರಶ್ನಿಸಿದಾಗ, ಎಲ್ಲವೂ ಸರಿಯಾಗಿದೆ ಎಂದು ಉತ್ತರಿಸಿದ್ದಾರೆ.
ವಿರಾಟ್ ಕೊಹ್ಲಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆಂದರೆ ಅವರು ಯಾರ್ಕ್‌ಶೈರ್ ವಿರುದ್ಧ ಕೌಂಟಿ ಆಡುವುದಿಲ್ಲವೆಂದು ಅರ್ಥ. ಇದು ಯಾರೋ ಒಬ್ಬರ ನಿರ್ಧಾರವಲ್ಲ. ಕೌಂಟಿ ಒಪ್ಪಂದವನ್ನು ಪರಿಶೀಲಿಸಿಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೊಹ್ಲಿ ಅಯರ್‌ಂಡ್ ವಿರುದ್ಧ ಆಡುತ್ತಾರೆಂದರೆ ಅವರಿಗೆ ಕೇವಲ 2 ಕೌಂಟಿ ಪಂದ್ಯ ಮಾತ್ರ ಸಿಗುತ್ತದೆ ಎಂದರ್ಥ’ ಎಂದು ಅಮಿತಾಭ್ ಚೌಧರಿ ಹೇಳಿದ್ದಾರೆ. ಆದರೆ ಈ ಆಯ್ಕೆಯ ಹಿಂದೆ ಕೊಹ್ಲಿ ಒಪ್ಪಿಗೆಯಿದೆಯೇ ಎನ್ನುವುದು ಖಚಿತವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.