ಟೆಸ್ಟ್: ಬ್ಯಾಟಿಂಗ್ ರ್‍ಯಾಂಕಿಂಗ್ ಲಾರಾಗಿಂತ ಕೊಹ್ಲಿ ಮುಂದೆ
Team Udayavani, Jan 30, 2018, 6:25 AM IST
ದುಬಾೖ: ಟೀಮ್ ಇಂಡಿಯಾ ನಾಯಕ, ಐಸಿಸಿ ವರ್ಷದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರೀಗ ಸಾರ್ವಕಾಲಿಕ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್‍ಯಾಂಕಿಂಗ್ ಅಂಕಗಳ ಯಾದಿಯಲ್ಲಿ ಕೆರಿಬಿಯನ್ ಲೆಜೆಂಡ್ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ಒಟ್ಟು 912 ಅಂಕಗಳೊಂದಿಗೆ “ಆಲ್ ಟೈಮ್’ ಸಾಧಕರ ಪಟ್ಟಿಯಲ್ಲಿ 26ನೇ ಸ್ಥಾನ ಅಲಂಕರಿಸಿದ್ದಾರೆ.
ವಿರಾಟ್ ಕೊಹ್ಲಿ 900 ಅಂಕಗಳೊಂದಿಗೆ ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯವನ್ನು ಆಡಲಿಳಿದಿದ್ದರು. ಇಲ್ಲಿ ಕ್ರಮವಾಗಿ 54 ಮತ್ತು 41 ರನ್ ಹೊಡೆದು 12 ಅಂಕ ಸಂಪಾದಿಸಿದರು. ಇದರಿಂದ 31ನೇ ಸ್ಥಾನದಿಂದ 26ನೇ ಸ್ಥಾನಕ್ಕೆ ನೆಗೆದರು. ಈ ಸಂದರ್ಭದಲ್ಲಿ ಬ್ರಿಯಾನ್ ಲಾರಾ (911), ಕೆವಿನ್ ಪೀಟರ್‌ಸನ್ (909), ಹಾಶಿಮ್ ಆಮ್ಲ (907), ಶಿವನಾರಾಯಣ್ ಚಂದರ್‌ಪಾಲ್ (901) ಮತ್ತು ಮೈಕಲ್ ಕ್ಲಾರ್ಕ್ (900) ಅವರನ್ನು ಹಿಂದಿಕ್ಕಿದರು.
ವಿರಾಟ್ ಕೊಹ್ಲಿ ಇನ್ನು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಅವರನ್ನು ಮೀರಿ ನಿಲ್ಲುವ ಹಾದಿಯಲ್ಲಿದ್ದಾರೆ. ಗಾವಸ್ಕರ್ 1979ರ ಓವಲ್ ಟೆಸ್ಟ್ ಬಳಿಕ 916 ಅಂಕ ಸಂಪಾದಿಸಿದ್ದರು.
ಬ್ರಾಡ್‌ಮನ್ ಈಗಲೂ ನಂ.1
ಕ್ರಿಕೆಟಿನ ಧ್ರುವತಾರೆ ಡಾನ್ ಬ್ರಾಡ್‌ಮನ್ 961 ಅಂಕಗಳೊಂದಿಗೆ ಈ ಯಾದಿಯ ಅಗ್ರಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ. ಈಗಿನ ನಂ.1 ಟೆಸ್ಟ್ ಬ್ಯಾಟ್ಸ್‌ಮನ್, ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ 947 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.
ಜೊಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ಬಳಿಕ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ ಪ್ರಮುಖರೆಂದರೆ ಹಾಶಿಮ್ ಆಮ್ಲ (7ನೇ ಸ್ಥಾನ), ಡೀನ್ ಎಲ್ಗರ್ (12ನೇ ಸ್ಥಾನ) ಮತ್ತು ಅಜಿಂಕ್ಯ ರಹಾನೆ (18ನೇ ಸ್ಥಾನ). ಇವರು ಪ್ರಮವಾಗಿ 1, 2 ಹಾಗೂ 5 ಸ್ಥಾನ ಮೇಲೇರಿದರು. ಇದೇ ವೇಳೆ ಫಾ ಡು ಪ್ಲೆಸಿಸ್, ಕ್ವಿಂಟನ್ ಡಿ ಕಾಕ್, ಐಡನ್ ಮಾರ್ಕ್‌ರಮ್, ಕೆ.ಎಲ್. ರಾಹುಲ್ ಮೊದಲಾದವರು ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ.
ಬೌಲಿಂಗ್, ಆಲ್‌ರೌಂಡ್ ರ್‍ಯಾಂಕಿಂಗ್
ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ನ ಮೊದಲ 5 ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆ್ಯಂಡರ್ಸನ್, ರಬಾಡ, ಜಡೇಜ, ಹ್ಯಾಝಲ್‌ವುಡ್ ಮತ್ತು ಅಶ್ವಿನ್ ಈ ಸ್ಥಾನ ಉಳಿಸಿಕೊಂಡಿದ್ದಾರೆ. ಟಾಪ್-10 ಯಾದಿ ಪ್ರವೇಶಿಸಿದ ಏಕೈಕ ಬೌಲರ್ ಮಾರ್ನೆ ಮಾರ್ಕೆಲ್ (9). ಮೊಹಮ್ಮದ್ ಶಮಿ ಜೀವನಶ್ರೇಷ್ಠ 15ನೇ ಸ್ಥಾನ ಅಲಂಕರಿಸಿದ್ದಾರೆ. ಭುವನೇಶ್ವರ್ ಕುಮಾರ್ ಮೊದಲ ಬಾರಿಗೆ ಟಾಪ್-20 ಯಾದಿಗೆ ಬಂದಿದ್ದಾರೆ (20ನೇ ಸ್ಥಾನ).
ಭುವನೇಶ್ವರ್ ಮತ್ತು ಶಮಿ ಅವರ ಆಲ್‌ರೌಂಡ್ ರ್‍ಯಾಂಕಿಂಗ್‌ನಲ್ಲೂ ಪ್ರಗತಿ ಆಗಿದೆ. ಭುವಿ 8 ಸ್ಥಾನಗಳ ನೆಗೆತದೊಂದಿಗೆ ರಬಾಡ ಜತೆ 12ನೇ ಸ್ಥಾನದಲ್ಲಿದ್ದರೆ, ಶಮಿ 27ರಿಂದ 17ಕ್ಕೆ ಜಿಗಿದರು. ಶಕಿಬ್ ಅಲ್ ಹಸನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
Siddapura: ಕಂಟೇನರ್ ಲಾರಿ ಒಳರಸ್ತೆಗೆ ಬರದಿದ್ದಕ್ಕೆ ಚಾಲಕನಿಗೆ ಹಲ್ಲೆ
Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು
Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್ ಪತ್ನಿ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.