ಟ್ವೀಟರ್ನಲ್ಲಿ ಕೊಹ್ಲಿ ಈಗ ತಮಾಷೆಯ ವಸ್ತು..!
Team Udayavani, Jun 25, 2017, 3:45 AM IST
ನವದೆಹಲಿ: ಚಾಂಪಿಯನ್ಸ್ ಟ್ರೋಫಿನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋಲಿನ ಬಿಸಿ ಇನ್ನೂ ತಣ್ಣಗಾದಂತಿಲ್ಲ. ಕೊಹ್ಲಿ ಮಾಡಿಕೊಂಡಿರುವ ಕುಂಬ್ಳೆ ಜತೆಗಿನ ವಿವಾದವೂ ಬಿಸಿತುಪ್ಪದಂತಿದೆ.
ಸದ್ಯ ನಾಯಕ ವಿರಾಟ್ ಕೊಹ್ಲಿ ಎಲ್ಲವನ್ನೂ ಮರೆತು ವಿಂಡೀಸ್ನಲ್ಲಿ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿರಬಹುದು. ಆದರೆ ಅಭಿಮಾನಿಗಳು ಮಹಾ ಸೋಲಿನ ಅವಮಾನವನ್ನು ಇನ್ನೂ ಮರೆತ್ತಿಲ್ಲ ಎನ್ನುವುದು ಅಷ್ಟೇ ನಿಜ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಸಿಗಬೇಕೆಂದರೆ ನೀವು ಟ್ವೀಟರ್ಗೆ ಹೋಗಲೇಬೇಕು. ಹೌದು, ಅಲ್ಲಿ ಕೊಹ್ಲಿ ಫೋಟೋವೊಂದನ್ನು ತಮಾಷೆಯಾಗಿ ಬಳಸಲಾಗಿದೆ.
ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಗೆ ರದ್ದಾದ ಸಂದರ್ಭದಲ್ಲಿ ಅಭಿಮಾನಿಗಳು ಈ ಫೋಟೋ ಬಳಸಿಕೊಂಡು ವ್ಯಂಗ್ಯವಾಡಿದ್ದಾರೆ. ಇದು ಆಸೀಸ್ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಟೀವಿ ಸ್ಕ್ರೀನ್ ಶಾಟ್. ಕೊಹ್ಲಿ ಡ್ರೆಸಿಂಗ್ ರೂಮ್ ಒಳಗಡೆಯ ಕಿಂಡಿಯೊಂದರಲ್ಲಿ ಇಣುಕು ದೃಶ್ಯ. ಇದನ್ನು ಉಪಯೋಗಿಸಿ ಬಗೆ ಬಗೆಯ ಜೋಕ್ಗಳನ್ನು ಅಭಿಮಾನಿಗಳು ರಸವತ್ತಾಗಿ ಚರ್ಚಿಸಿದ್ದಾರೆ. “ಒಳಗೆ ಅನುಷ್ಕಾ ಇದ್ದಾರಾ?’, “ಕುಂಬ್ಳೆ ಬರುತ್ತಿದ್ದಾರೆ ಟೀವಿ ಬಂದ್ ಮಾಡಿ’, “ಜಡೇಜಾ ಬೇಗ ಬಾ ಪಾಂಡ್ಯ ಯಾಕೋ ಮಾತನಾಡುತ್ತಿಲ್ಲ’ ಎಂಬಿತ್ಯಾದಿ ಜೋಕ್ಗಳನ್ನು ಕೊಹ್ಲಿಯೇ ಹೇಳುತ್ತಿರುವ ರೀತಿಯಲ್ಲಿ ಅಭಿಮಾನಿಗಳು ಕಥೆ ಕಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.