ಟ್ರಾಫಿಕ್ ದಂಡದ ಬಳಿಕ ವಿಶ್ವದ ಶ್ರೀಮಂತ ಕ್ರಿಕೆಟ್‌ಗನ ಸ್ಥಿತಿ !
Team Udayavani, Sep 6, 2019, 6:30 AM IST
ಯಾರು ಬೇಕಾದರೂ ತಮಾಷೆ ಮಾಡಬಹುದು, ಯಾರು ಬೇಕಾದರೂ ತಮಾಷೆಗೆ ವಸ್ತುವಾಗಬಹುದು. ಸಾಮಾಜಿಕ ತಾಣಗಳು ಬಂದಮೇಲಂತೂ ಹಾಸ್ಯ ಮಾಡುವುದು, ಅಪಹಾಸ್ಯ ಮಾಡುವುದು, ಕಡೆಗೆ ವೈಯಕ್ತಿಕ ನಿಂದನೆ ಮಾಡುವುದು ಎಗ್ಗುಸಿಗ್ಗಿಲ್ಲದೇ ನಡೆಯುತ್ತಿದೆ. ಈಗ ಸಾಮಾಜಿಕ ತಾಣಗಳಲ್ಲಿ ಹಾಸ್ಯಕ್ಕೊಳಗಾಗುವ ಸರದಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯದ್ದು.
ಸದ್ಯಕ್ಕೆ ಇದೆಲ್ಲ ಸದಭಿರುಚಿಯದ್ದು ಎನ್ನುವುದು ಸಮಾಧಾನಕರ ಸಂಗತಿ. ಆಗಿದ್ದಿಷ್ಟೇ: ಕೊಹ್ಲಿ ಗುರುವಾರ ಟ್ವೀಟರ್‌ನಲ್ಲಿ ಅಂಗಿಯಿಲ್ಲದೇ, ಬರಿಯ ಚೆಡ್ಡಿಯಲ್ಲಿ ಬೀದಿಯೊಂದರಲ್ಲಿ ಕುಳಿತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ನಮ್ಮ ಹೊರಗೆ ನೋಡುವುದಕ್ಕಿಂತ ನಮ್ಮೊಳಗೆ ನೋಡಿಕೊಂಡರೆ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಯೊಬ್ಬರು, ವಿಶ್ವದ ಶ್ರೀಮಂತ ಕ್ರಿಕೆಟಿಗನಿಗೆ ಟ್ರಾಫಿಕ್ ದಂಡಕ್ಕೊಳಗಾದ ನಂತರ ಬಂದಸ್ಥಿತಿಯಿದು ಎಂದು ಹಾಸ್ಯ ಮಾಡಿದ್ದಾರೆ.
ಇನ್ನೊಬ್ಬರೂ, ಟ್ರಾಫಿಕ್ ದಂಡ ಹಾಕಿಸಿಕೊಂಡ ಮೇಲೆ ನಮಗೂ ಹೀಗೆ ಆಗಬಹುದು ಎಂದು ವಿಡಂಬಿಸಿದ್ದಾರೆ. ಜನರು ಟ್ರಾಫಿಕ್ ದಂಡನೆಯನ್ನೇ ತಮ್ಮ ಹಾಸ್ಯಕ್ಕೆ ವಸ್ತುವಾಗಿಸಿಕೊಳ್ಳಲು ಕಾರಣ ಇತ್ತೀಚೆಗೆ ಕೇಂದ್ರಸರ್ಕಾರ ಜಾರಿ ಮಾಡಿರುವ ಹೊಸ ಸಂಚಾರಿನಿಯಮ. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ಹೇರುತ್ತಿರುವುದರಿಂದ ಜನ ತಮ್ಮ ಸೃಜನಶೀಲತೆ ಹಾಗೂ ಸಿಟ್ಟನ್ನು ಪ್ರಕಟಿಸಲು ಇದನ್ನೇ ಬಳಸಿಕೊಳ್ಳುತ್ತಿದ್ದಾರೆ.
As long as we look within, we won’t need to seek anything outside. ? pic.twitter.com/CvUVElZwjm
— Virat Kohli (@imVkohli) September 5, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Melbourne Cricket Club; ಸಚಿನ್ ತೆಂಡುಲ್ಕರ್‌ಗೆ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.