ಅನುಷ್ಕಾ ನನಗಿಷ್ಟ, ಆಕೆ ಲೇಟು ಅನ್ನೋದೇ ಕಷ್ಟ!
Team Udayavani, Oct 5, 2017, 6:00 AM IST
ಮುಂಬೈ: ಅನುಷ್ಕಾ ಶರ್ಮಾ ಕಂಡರೆ ನನಗಿಷ್ಟ, ಆಕೆಯ ಪ್ರಾಮಾಣಿಕ ಪ್ರೀತಿ ಮತ್ತು ಆಕೆಯ ಮುತುವರ್ಜಿ ನನಗೆ ಖುಷಿ ಕೊಡುತ್ತವೆ. ಆದರೆ ಆಕೆಯ ಬಗ್ಗೆ ಇಷ್ಟಪಡದೇ ಇರುವ ಒಂದೇ ಒಂದು ಕಾರಣವೆಂದರೆ ಆಕೆ ಪ್ರತಿ ಸಾರಿಯೂ ಆರರಿಂದ ಏಳು ನಿಮಿಷ ಲೇಟ್…”
ಇದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮಾತು. ವಾಹಿನಿಯೊಂದರ ದೀಪಾವಳಿ ಕಾರ್ಯಕ್ರಮಕ್ಕಾಗಿ ಬಾಲಿವುಡ್ ನಟ ಅಮೀರ್ ಖಾನ್ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ಮುಖಾಮುಖೀಯಲ್ಲಿ ಈ ಅಂಶ ಬಯಲಾಗಿದೆ. ಇದಷ್ಟೇ ಅಲ್ಲ, ಇನ್ನೂ ಹಲವಾರು ವಿಷಯಗಳ ಬಗ್ಗೆ ಕೊಹ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.
ಅನುಷ್ಕಾ ಶರ್ಮಾ ಜತೆಗಿನ ಸಂಬಂಧ
ಆಕೆಯ ಪ್ರಾಮಾಣಿಕ ಪ್ರೀತಿ ಮತ್ತು ಮುಜುವರ್ಜಿ ನನಗಿಷ್ಟ. ಆಕೆಯನ್ನು ನಾನು ದ್ವೇಷಿಸುವುದೇ ಇಲ್ಲ, ಆದರೂ ಪ್ರತಿ ಬಾರಿಯೂ ಆಕೆ ಆರರಿಂದ ಏಳು ನಿಮಿಷ ಲೇಟಾಗಿ ಬರ್ತಾಳೆ ಎಂಬುದೇ ಕೋಪ. ಆಕೆ ನನ್ನ ಜತೆಯಲ್ಲೇ ಇರುತ್ತಾಳೆ ಮತ್ತು ನಾವಿಬ್ಬರೂ ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಕಳೆದ 3-4 ವರ್ಷದಿಂದ ನಾವಿಬ್ಬರು ಜತೆಯಾಗಿಯೇ ಇದ್ದು. ಈ ಅವಧಿಯಲ್ಲಿ ಆಕೆ ನನ್ನನ್ನು ಒಬ್ಬ ಮನುಷ್ಯನನ್ನಾಗಿ ರೂಪಿಸಿದ್ದಾಳೆ.
“ಚೀಕು’ ಅಡ್ಡ ಹೆಸರಿನ ಬಗ್ಗೆ
17 ವರ್ಷದೊಳಗಿನ ವರೆಗಿನ ಮ್ಯಾಚ್‌ಗಳಲ್ಲಿ ಆಡುತ್ತಿರುವಾಗ ನನ್ನ ದೊಡ್ಡದಾಗಿರುವ ಕಿವಿ ಕಾಣದಂತೆ ಕೂದಲನ್ನು ಉದ್ದವಾಗಿ ಬಿಟ್ಟಿರುತ್ತಿದ್ದೆ. ಆಗ ನನ್ನನ್ನು ಎಲ್ಲರೂ ಚೀಕು(ಮೊಲ)ವೆಂದು ಕರೆಯುತ್ತಿದ್ದರು. ಆದರೆ ಇದನ್ನು ನಂತರದಲ್ಲಿ ಶುರು ಮಾಡಿದ್ದು ಧೋನಿ. ಸ್ಟಂಪ್ ಹಿಂದೆ ನಿಂತು, ಚೀಕು ಎಂದು ಕೂಗುತ್ತಿದ್ದರು, ಆದರೆ ಸ್ಟಂಪ್‌ನಲ್ಲೇ ಇದ್ದ ಮೈಕ್ ಎಲ್ಲರಿಗೆ ಕೇಳುವಂತೆ ಮಾಡುತ್ತಿತ್ತು!
ಕೆ.ಎಲ್. ರಾಹುಲ್ ಬಗ್ಗೆ
ಈತನ ಬಗ್ಗೆ ಒಳ್ಳೆಯದ್ದು ಮತ್ತು ಕೆಟ್ಟದ್ದು ಎರಡೂ ಇದೆ. ಒಳ್ಳೆಯದು ಎಂದರೆ ಆತನ ಫಿಟ್‌ನೆಸ್, ಆಟದಲ್ಲಿ ಸುಧಾರಣೆ ಮತ್ತು ಹೆಚ್ಚಿನ ಜವಾಬ್ದಾರಿ. ಕೆಟ್ಟದ್ದೆಂದರೆ “ಪ್ರದರ್ಶನ’ವೆಂದರೆ ಭಾರಿ ಇಷ್ಟ, ರೂಂನಲ್ಲೇಲ್ಲಾ ಶರ್ಟ್ ತೆಗೆದು ಓಡಾಡುತ್ತಿರುತ್ತಾನೆ. ಯಾವಾಗಲೂ ಫೋನ್‌ಗೆà ಅಂಟಿಕೊಂಡಿರುತ್ತಾನೆ.
ಗುರ್ಮೀತ್ ರಾಮ್ ರಹೀಂ ಬಗ್ಗೆ
ಆತ ಒಬ್ಬ ತಮಾಷೆಯ ಮನುಷ್ಯ, ಆತ ಯಾವಾಗಲೂ “ಜಗಿªàಶ್ ನೆಹ್ರಾ’ ಮತ್ತು “ಜೋಸುಫ್ ಪಠಾಣ್’ ಎಂದೇ ಕರೆಯುತ್ತಿದ್ದರು…!!!
ಅಮೀರ್ ಖಾನ್ ಚಿತ್ರಗಳ ಬಗ್ಗೆ
ಜೋ ಜೀತಾ ವಹಿ ಸಿಕಂದರ್, ತ್ರಿ ಈಡಿಯಟ್ಸ್ ಮತ್ತು ಪೀಕೆ ಇಷ್ಟ. (ವಿಶೇಷವೆಂದರೆ ಪೀಕೆಯಲ್ಲಿ ಅನುಷ್ಕಾ ಶರ್ಮಾ ಅವರೇ ನಾಯಕಿ!)
2011ರ ವಿಶ್ವಕಪ್ ಫೈನಲ್ ಬಗ್ಗೆ
ಲಸಿತ್ ಮಾಲಿಂಗ ಯಾರ್ಕರ್ ಬಗ್ಗೆ ಆತಂಕವಿತ್ತು. ಮೊದಲೇ ನಾನು ನರ್ವಸ್ ಆಗಿದ್ದೆ… ನಂತರ 2-3 ಎಸೆತಗಳನ್ನು ಎದುರಿಸಿದ ಮೇಲೆ ಆಟಕ್ಕೆ ಕುದುರಿಕೊಂಡೆ.
ಕುಟುಂಬದ ಬಗ್ಗೆ
ನನ್ನ ತಂದೆಗೆ ನಾನು ಮೂರನೇ ಮಗ. ಹೀಗಾಗಿ ನಾನು ಎಲ್ಲಿಗೆ ಬೇಕಾದರೂ ಹೋಗಬಹುದಾಗಿತ್ತು. ಆಟಕ್ಕೆ ಬರುವಾಗ ನನ್ನ ಸಹೋದರ ಡ್ರಾಪ್ ಮಾಡುತ್ತಿದ್ದ. ನನ್ನ ಅಪ್ಪ ಮನೆಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು.
ಕೊಹ್ಲಿಗೆ ಕ್ಲಾಪ್‌ಬೋರ್ಡ್, ಅಮೀರ್‌ಗೆ ಜರ್ಸಿ
ಮುಖಾಮುಖೀಯ ಅಂತ್ಯದಲ್ಲಿ ಇಬ್ಬರೂ ಪರಸ್ಪರ ಗಿಫ್ಟ್ ವಿನಿಮಯ ಮಾಡಿಕೊಂಡಿದ್ದಾರೆ. ಅಮೀರ್ ಖಾನ್ ಅವರು ಕೊಹ್ಲಿಗೆ ತಮ್ಮ ದಂಗಲ್ ಸಿನಿಮಾದ ಕ್ಲಾಪ್‌ಬೋರ್ಡ್ ಕೊಟ್ಟರೆ, ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಜರ್ಸಿ ಕೊಟ್ಟಿದ್ದಾರೆ. ಇದಷ್ಟೇ ಅಲ್ಲ, ಕೊಹ್ಲಿಯ ಬಹುದೊಡ್ಡ ಅಭಿಮಾನಿಯಾಗಿರುವ ಅಮೀರ್ ಖಾನ್ ಪುತ್ರ ಆಜಾದ್‌ಗೆ ಆಟೋಗ್ರಾಫ್ ಹಾಕಿದ ಬ್ಯಾಕ್ ಅನ್ನು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.