ಕೊಹ್ಲಿ ದಾಖಲೆ ದ್ವಿಶತಕ
Team Udayavani, Dec 4, 2017, 6:10 AM IST
ಹೊಸದಿಲ್ಲಿ: ಪ್ರವಾಸಿ ಶ್ರೀಲಂಕಾ ವಿರುದ್ಧ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತೆ ದ್ವಿಶತಕ ಬಾರಿಸಿ ದಾಖಲೆ ನಿರ್ಮಿಸಿದರು. ಇದೇ ವೇಳೆ ವಾಯುಮಾಲಿನ್ಯದ ಕಾರಣ ನೀಡಿ ಶ್ರೀಲಂಕಾ ಆಟಗಾರರು ಮೂರು ಬಾರಿ ಪಂದ್ಯ ಸ್ಥಗಿತಗೊಳಿಸಿದರಲ್ಲದೇ ಆಟಗಾರರು ಮಾಸ್ಕ್ ಧರಿಸಿ ಫೀಲ್ಡಿಂಗ್ ನಡೆಸಿದ ಘಟನೆಯೂ ನಡೆಯಿತು.
ಊಟದ ವಿರಾಮದ ಬಳಿಕವೂ ಶ್ರೀಲಂಕಾ ಆಟಗಾರರು ವಾಯುಮಾಲಿನ್ಯದ ಕಾರಣಕ್ಕಾಗಿ 26 ನಿಮಿಷ ಪಂದ್ಯವನ್ನು ಸ್ಥಗಿತಗೊಳಿಸಿದ್ದರಿಂದ ಭಾರತವು ಕೊನೆಗೆ 7 ವಿಕೆಟಿಗೆ 536 ಇದ್ದಲ್ಲಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆದರೆ ಭಾರತೀಯರು ಫೀಲ್ಡಿಂಗ್‌ಗೆ ಬಂದಾಗ ಯಾರು ಕೂಡ ವಾಯುಮಾಲಿನ್ಯದ ಬಗ್ಗೆ ದೂರು ನೀಡಿಲ್ಲ.
ಭಾರತೀಯರ ಬಿಗು ದಾಳಿಗೆ ಆರಂಭದಲ್ಲಿಯೇ ಆಘಾತ ಅನುಭವಿಸಿದ ಶ್ರೀಲಂಕಾ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿದೆ. ಒಂದು ವೇಳೆ ಶರ್ಮ ಬೌಲಿಂಗ್‌ನಲ್ಲಿ ಮ್ಯಾಥ್ಯೂಸ್ ನೀಡಿದ ಕ್ಯಾಚನ್ನು ಕೊಹ್ಲಿ ಪಡೆಯುತ್ತಿದ್ದರೆ ಪ್ರವಾಸಿ ತಂಡ ಇನ್ನಷ್ಟು ಕುಸಿತಕ್ಕೆ ಒಳಗಾಗುತ್ತಿತ್ತು. ಆದರೆ ಕೊಹ್ಲಿ ಕ್ಯಾಚ್ ಕೈಚೆಲ್ಲಿದ ಲಾಭ ಪಡೆದ ಶ್ರೀಲಂಕಾ ತಂಡ ಮುರಿಯದ ನಾಲ್ಕನೇ ವಿಕೆಟಿಗೆ ಈಗಾಗಲೇ 56 ರನ್ ಪೇರಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ಶ್ರೀಲಂಕಾ ಇನ್ನೂ 406 ರನ್ ಗಳಿಸಬೇಕಾಗಿದೆ. ಮ್ಯಾಥ್ಯೂಸ್ 57 ಮತ್ತು ದಿನೇಶ್ ಚಂಡಿಮಾಲ್ 25 ರನ್ನುಗಳಿಂದ ಆಡುತ್ತಿದ್ದಾರೆ.
ಕೊಹ್ಲಿ ದ್ವಿಶತಕ
156 ರನ್ನಿನಿಂದ ದಿನದಾಟ ಆರಂಭಿಸಿದ ಕೊಹ್ಲಿ ಅವರು ತನ್ನ ಆರನೇ ದ್ವಿಶತಕ ಬಾರಿಸಿ ಸಂಭ್ರಮಿಸಿದರು. ಆರು ದ್ವಿಶತಕ ಬಾರಿಸಿದ ಮೊದಲ ನಾಯಕರೆಂಬ ಗೌರವಕ್ಕೆ ಪಾತ್ರರಾದ ಅವರು ವೆಸ್ಟ್‌ಇಂಡೀಸ್‌ನ ಬ್ರ್ಯಾನ್ ಲಾರಾ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಲಾರಾ 5 ದ್ವಿಶತಕ ಹೊಡೆದಿದ್ದರು.
ಇದು ಕೊಹ್ಲಿ ಅವರ ವೈಯಕ್ತಿಕ ಗರಿಷ್ಠ ಮೊತ್ತವೂ ಆಗಿದೆ. ಕಳೆದ ವರ್ಷ ಮುಂಬಯಿಯಲ್ಲಿ ಇಂಗ್ಲೆಂಡ್ ವಿರುದ್ಧ 235 ರನ್ ಹೊಡೆದಿದ್ದು ಅವರ ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು. ಗರಿಷ್ಠ ಸಂಖ್ಯೆಯ ದ್ವಿಶತಕ ಬಾರಿಸಿದವರಲ್ಲಿ ಅವರು ತೆಂಡುಲ್ಕರ್ ಮತ್ತು ಸೆಹವಾಗ್ ಜತೆ ಸೇರಿಕೊಂಡರು. ಸತತ ಎರಡು ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ ಸಾಧನೆಯನ್ನು ಕೂಡ ಅವರು ಮಾಡಿದ್ದಾರೆ. ನಾಗ್ಪುರದಲ್ಲಿ ನಡೆದ ಈ ಹಿಂದಿನ ಪಂದ್ಯದಲ್ಲಿ ಕೊಹ್ಲಿ 213 ರನ್ ಹೊಡೆದಿದ್ದರು.
ಒಟ್ಟಾರೆ 287 ಎಸೆತ ಎದುರಿಸಿದ್ದ ಅವರು 25 ಬೌಂಡರಿ ನೆರವಿನಿಂದ 243 ರನ್ ಹೊಡೆದರು. ಶ್ರೀಲಂಕಾ ಆಟಗಾರರು ವಾಯುಮಾಲಿನ್ಯದ ದೂರು ಹೇಳಿ ಆಗಾಗ್ಗೆ ಪಂದ್ಯ ಸ್ಥಗಿತಗೊಳಿಸಿದ್ದರಿಂದ ಗಮನ ಕೇಂದ್ರಿಕರಿಸಲು ವಿಫಲರಾದ ಕೊಹ್ಲಿ ಅಂತಿಮವಾಗಿ ಸಂದಕನ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು.
ಕೊಹ್ಲಿ ಅವರು ರೋಹಿತ್ ಶರ್ಮ ಜತೆ ಐದನೇ ವಿಕೆಟಿಗೆ 135 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ರೋಹಿತ್ 65 ರನ್ ಗಳಿಸಿ ಔಟಾದರು.
ಶ್ರೀಲಂಕಾ ಆಟಗಾರರು ಮತ್ತು ವ್ಯವಸ್ಥಾಪಕ ಅಸಾಂಕ ಗುರುಸಿನ್ಹ ಅವರು ವಾಯುಮಾಲಿನ್ಯದಿಂದ ಫೀಲ್ಡಿಂಗ್ ಮಾಡಲು ಸಾಧ್ಯವಿಲ್ಲವೆಂದು ಅಂಪಾಯರ್ ಅವರಿಗೆ ತಿಳಿಸಿದ್ದರಿಂದ ಅಂತಿಮವಾಗಿ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.
ಲಂಕೆಗೆ ಆರಂಭಿಕ ಆಘಾತ
ಮೊಹಮ್ಮದ್ ಶಮಿ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲಿ ಕರುಣರತ್ನೆ ಔಟಾದ ಕಾರಣ ಶ್ರೀಲಂಕಾ ಆಘಾತಕ್ಕೆ ಒಳಗಾಯಿತು. ಧನಂಜಯ ಡಿಸಿಲ್ವ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲರಾದರು. ದಿಲುÅವಾನ್ ಪೆರೆರ ಮತ್ತು ಮ್ಯಾಥ್ಯೂಸ್ ಮೂರನೇ ವಿಕೆಟಿಗೆ 61 ರನ್ ಪೇರಿಸಿ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಲು ಪ್ರಯತ್ನಿಸಿದರು. ಈ ನಡುವೆ ಮ್ಯಾಥ್ಯೂಸ್ ಅವರು ಕೊಹ್ಲಿ ಕೈಯಲ್ಲಿ ಜೀವದಾನವೊಂದನ್ನು ಪಡೆದರು. ಉತ್ತಮವಾಗಿ ಆಡುತ್ತಿದ್ದ ಪೆರೆರ ಅವರನ್ನು ಜಡೇಜ ಎಲ್‌ಬಿ ಮೂಲಕ ಕೆಡಹಿದರು.
ಸ್ಕೋರುಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
(ಮೊದಲ ದಿನ 4 ವಿಕೆಟಿಗೆ 371)
ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಸಂದಕನ್ 243
ರೋಹಿತ್ ಶರ್ಮ ಸಿ ಡಿಕ್ವೆಲ್ಲ ಬಿ ಸಂದಕನ್ 65
ಆರ್. ಅಶ್ವಿನ್ ಸಿ ಪೆರೆರ ಬಿ ಗಾಮಗೆ 4
ವೃದ್ಧಿಮಾನ್ ಸಾಹ ಔಟಾಗದೆ 9
ರವೀಂದ್ರ ಜಡೇಜ ಔಟಾಗದೆ 5
ಇತರ: 8
ಒಟ್ಟು (7 ವಿಕೆಟಿಗೆ) 536
ವಿಕೆಟ್ ಪತನ: 5-500, 6-519, 7-523
ಬೌಲಿಂಗ್:
ಸುರಂಗ ಲಕ್ಮಲ್ 21.2-2-80-0
ಲಹಿರು ಗಾಮಗೆ 25.3-7-95-2
ದಿಲುÅವಾನ್ ಪೆರೆರ 31.1-0-145-1
ಲಕ್ಷಣ ಸಂದಕನ್ 33.5-1-167-4
ಧನಂಜಯ ಸಿಲ್ವ 16-0-48-0
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್
ದಿಮುತ್ ಕರುಣರತ್ನೆ ಸಿ ಸಾಹ ಬಿ ಶಮಿ 0
ದಿಲುÅವಾನ್ ಪೆರೆರ ಎಲ್‌ಬಿಡಬ್ಲ್ಯು ಬಿ ಜಡೇಜ 42
ಧನಂಜಯ ಸಿಲ್ವ ಎಲ್‌ಬಿಡಬ್ಲ್ಯು ಬಿ ಶರ್ಮ 1
ಎ. ಮ್ಯಾಥ್ಯೂಸ್ ಬ್ಯಾಟಿಂಗ್ 57
ದಿನೇಶ್ ಚಂಡಿಮಾಲ್ ಬ್ಯಾಟಿಂಗ್ 25
ಇತರ: 6
ಒಟ್ಟು (3 ವಿಕೆಟಿಗೆ) 131
ವಿಕೆಟ್ ಪತನ: 1-0, 2-14, 3-75
ಬೌಲಿಂಗ್:
ಮೊಹಮ್ಮದ್ ಶಮಿ 11-3-30-1
ಇಶಾಂತ್ ಶರ್ಮ 10-4-44-1
ರವೀಂದ್ರ ಜಡೇಜ 14.3-6-24-1
ಆರ್. ಅಶ್ವಿನ್ 9-3-28-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.