ಸಚಿನ್ ಮತ್ತೊಂದು ವಿಶ್ವದಾಖಲೆ ಮುರಿಯಲಿದ್ದಾರೆ ವಿರಾಟ್ ಕೊಹ್ಲಿ
Team Udayavani, Mar 11, 2020, 12:16 PM IST
ಮುಂಬೈ: ವಿಶ್ವದಾಖಲೆಗಳ ಮೇಲೆ ವಿಶ್ವದಾಖಲೆ ನಿರ್ಮಿಸಿ ಸಚಿನ್ ತೆಂಡುಲ್ಕರ್ ಅವರ ಎಲ್ಲ ದಾಖಲೆಗಳನ್ನು ನಿರ್ನಾಮ ಮಾಡುತ್ತಿರುವ ವಿರಾಟ್ ಕೊಹ್ಲಿ, ಹೊಸತೊಂದು ವಿಶ್ವದಾಖಲೆ ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಇನ್ನು 133 ರನ್ ಬಾರಿಸಿದರೆ, ಅತ್ಯಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಏಕದಿನದಲ್ಲಿ 12,000 ರನ್ ಗಡಿಮುಟ್ಟಿದ ದಾಖಲೆ ಸಾಧಿಸಲಿದ್ದಾರೆ. ಸದ್ಯ ಅವರು 239 ಇನಿಂಗ್ಸ್ ಆಡಿದ್ದಾರೆ. ದ.ಆಫ್ರಿಕಾ ವಿರುದ್ಧ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಇಲ್ಲಿ ಅವರಿಗೆ 133 ರನ್ ಗಳಿಕೆ ಕಷ್ಟವಲ್ಲ ಎಂದು ಭಾವಿಸಲಾಗಿದೆ.
ಸಚಿನ್ ತೆಂಡುಲ್ಕರ್ 12,000 ರನ್ ಗಳಿಸುವಾಗ 300 ಇನಿಂಗ್ಸ್ ಆಡಿದ್ದರು. ಅವರಿಗಿಂತ ಬಹಳ ಮುನ್ನವೇ ಈ ಗಡಿಯನ್ನು ದಾಟಲಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಕೊಹ್ಲಿ ಸದ್ಯ ಅತ್ಯಂತ ಕಳಪೆ ಲಯದಲ್ಲಿದ್ದಾರೆ. ಹಿಂದಿನ ನ್ಯೂಜಿಲೆಂಡ್‌ನ ಇಡೀ ಪ್ರವಾಸದಲ್ಲಿ 218 ರನ್ ಮಾತ್ರ ಅವರ ಗಳಿಕೆ. ದ.ಆಫ್ರಿಕಾ ವಿರುದ್ಧ ಸಿಡಿದೆದ್ದು ಅವರು ಲಯದ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್ ಬುಮ್ರಾ ಹೆಸರು
First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್ ಡ್ರಾ
ದಕ್ಷಿಣ ಭಾರತದ ಕುಸ್ತಿ ಚಾಂಪಿಯನ್‌ಶಿಪ್: ಚಿನ್ನ ಗೆದ್ದ ಧಾರವಾಡದ ಹಳ್ಳಿ ಪೈಲ್ವಾನ್
INDvAUS; ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದ ಹೆಡ್ ವಿಚಿತ್ರ ಸೆಲೆಬ್ರೇಶನ್: ಇದರ ಅರ್ಥವೇನು?
INDvsAUS; ಮಾನಸಿಕವಾಗಿ ಕಾಡುತ್ತಿದೆ..: ಮೆಲ್ಬೋರ್ನ್ ಸೋಲಿನ ಬಳಿಕ ನಾಯಕ ರೋಹಿತ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.