ಅಪೌಷ್ಟಿಕತೆಯಿಂದ ಬಳಲುವ ದೇಶದ ಸುಮಾರು 10 ಸಾವಿರ ಮಕ್ಕಳಿಗೆ ಕೊಹ್ಲಿ ನೆರವು
Team Udayavani, Nov 18, 2020, 6:05 PM IST
ಹೊಸದಿಲ್ಲಿ: ಅಪೌಷ್ಟಿಕತೆಯಿಂದ ಬಳಲುವ ದೇಶದ ಸುಮಾರು 10 ಸಾವಿರದಷ್ಟು ಮಕ್ಕಳಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆಂಬಲವಾಗಿ ನಿಂತಿದ್ದಾರೆ. ವೈಝ್ ಕಂಪೆನಿಯ ಹೆಲ್ತ್‌ಕೇರ್ ಹಾಗೂ ಸ್ಯಾನಿಟೈಸೇಶನ್ ಉತ್ಪನ್ನಗಳ ರಾಯಭಾರಿಯಾಗಿರುವ ಕೊಹ್ಲಿ ಇದರ ಸಂಪೂರ್ಣ ಲಾಭವನ್ನು ಈ ಮಕ್ಕಳ ನೆರವಿಗೆ ನೀಡಲು ನಿರ್ಧರಿಸಿದ್ದಾರೆ.
ವೈಝ್ ಉತ್ಪನ್ನಗಳಿಂದ ಬರುವ ಎಲ್ಲ ಲಾಭವನ್ನು ವಿರಾಟ್ ಕೊಹ್ಲಿ “ರಾಹ್ ಫೌಂಡೇಶನ್’ ಎಂಬ ಚಾರಿಟಿ ಸಂಸ್ಥೆಗೆ ನೀಡಲಿದ್ದು, ಈ ಮೂಲಕ ಮಕ್ಕಳಿಗೆ ಸಹಾಯ ಮಾಡಲಿದ್ದಾರೆ. “ಅಪೌಷ್ಟಿಕತೆಯ ವಿರುದ್ಧ ಹೋರಾಟವನ್ನು ಮಾಡಲು ವೈಝ್ ನಿಂದ ಬರುವ ಆದಾಯವನ್ನು ಬಳಸಿಕೊಳ್ಳಲು ಸಂತಸವಾಗುತ್ತಿದೆ. ಈ ಹೋರಾಟದಲ್ಲಿ ಪಾಲುದಾರನಾಗಲು ಹೆಮ್ಮೆಯೆನಿಸುತ್ತಿದೆ’ ಎಂದಿದ್ದಾರೆ ಕೊಹ್ಲಿ.
“ಕ್ರೀಡಾಪಟುವಾಗಿ ನಾವು ಸಾಕಷ್ಟು ಪ್ರೀತಿ ಮತ್ತು ಆದರವನ್ನು ಸಂಪಾದಿಸಿಕೊಳ್ಳುತ್ತೇವೆ. ಆದರೆ ಕೊರಾನಾ ವೈರಸ್‌ನಂತಹ ಈ ಕಠಿನ ಸಂದರ್ಭದಲ್ಲಿ ಅನೇಕ ಹೀರೋಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೈಝ್ ಜತೆಗೆ ಭಾಗಿಯಾಗಿರುವುದಕ್ಕೆ ಸಂತಸವಾಗುತ್ತಿದೆ’ ಎಂದು ವಿರಾಟ್ ಕೊಹ್ಲಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.