ವಿರಾಟ್ ಕೊಹ್ಲಿ ದೇಶದ ಶ್ರೀಮಂತ ಕ್ರೀಡಾಪಟು
Team Udayavani, Dec 23, 2017, 10:06 AM IST
ನವದೆಹಲಿ: ಮೊನ್ನೆಯಷ್ಟೇ ದೇಶದ ತಾರೆಯರ ಬ್ರ್ಯಾಂಡ್ ಮೌಲ್ಯದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರನ್ನೂ ಹಿಂದಿಕ್ಕಿ ನಂ.1 ಎನಿಸಿಕೊಂಡ ವಿರಾಟ್ ಕೊಹ್ಲಿ, ಈಗ ವರ್ಷದ ಶ್ರೀಮಂತ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಈ ವರ್ಷ ಗರಿಷ್ಠ ಗಳಿಕೆ ಮಾಡಿದ ಭಾರತೀಯ ಕ್ರೀಡಾಪಟುಗಳ ಪಟ್ಟಿಯೊಂದನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, 100.72 ಕೋಟಿ ರೂ. ಗಳಿಸಿರುವ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಒಟ್ಟಾರೆ 4ನೇ ಸ್ಥಾನ ಪಡೆದಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಮಹಿಳಾ ಸಾಧಕಿಯರ ಪೈಕಿ ನಂ.1 ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ಸಚಿನ್ ತೆಂಡುಲ್ಕರ್ ಶ್ರೀಮಂತ ಕ್ರೀಡಾಪಟುಗಳ ಪೈಕಿ 2ನೇ ಸ್ಥಾನದಲ್ಲಿದ್ದಾರೆ. 63.77 ಕೋಟಿ ರೂ. ಗಳಿಸಿದ ಎಂ.ಎಸ್ .ಧೋನಿ 3ನೇ ಸ್ಥಾನ ಪಡೆದಿದ್ದಾರೆ. ಇನ್ನೂ ಗಮನಾರ್ಹ ಸಂಗತಿಯೆಂದರೆ ರೋಹಿತ್ ಶರ್ಮ (30.82 ಕೋಟಿ ರೂ.), ರವೀಂದ್ರ ಜಡೇಜ (34.58 ಕೋಟಿ ರೂ.), ಆರ್.ಅಶ್ವಿನ್ (34.52 ಕೋಟಿ ರೂ.) ಅವರಂತಹ ಕ್ರಿಕೆಟ್ ತಾರೆಯರನ್ನು ಮೀರಿಸಿ ಪಿ.ವಿ.ಸಿಂಧು ಹಣ ಗಳಿಕೆ ಮಾಡುತ್ತಿರುವುದು!
180 ರಿಂದ 63 ಕೋಟಿ ಗಿಳಿದ ಧೋನಿ ಒಂದು ಕಾಲದಲ್ಲಿ ಭಾರತದ ಕ್ರೀಡಾಪಟುಗಳ ಪೈಕಿ ಅತ್ಯಂತ ಶ್ರೀಮಂತ ಗುಲಾಬಿ ಉಡುಗೊರೆ
ಎನಿಸಿಕೊಂಡಿದ್ದ ಧೋನಿ ವಿಶ್ವದಲ್ಲೇ 22ನೇ ಶ್ರೀಮಂತ ಕ್ರೀಡಾಪಟು ಎಂಬ ಮಟ್ಟಕ್ಕೇರಿದ್ದರು. ಆಗ ಅವರ ಗಳಿಕೆ 180 ಕೋಟಿ ರೂ. ಆಸುಪಾಸು. ಆ ಮಟ್ಟಿಗೆ ಇಲ್ಲಿಯವರೆಗೆ ಭಾರತದ ಯಾವುದೇ ಕ್ರೀಡಾಪಟು ಹಣಗಳಿಸಿ. ಅಂತಹ ಧೋನಿಯ ವಾರ್ಷಿಕ ಗಳಿಕೆಯೀಗ 63 ಕೋಟಿ ರೂ.ಗಿಳಿದಿದೆ! ಇವರು ಕಳೆದುಕೊಂಡಿದ್ದನ್ನೆಲ್ಲ ಕೊಹ್ಲಿ ಗಳಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.
ಇನ್ನೂ ಕುಸಿದಿಲ್ಲ ಸಚಿನ್ ಮಾರುಕಟ್ಟೆ
ಸಚಿನ್ ತೆಂಡುಲ್ಕರ್ ತಮ್ಮ ಕ್ರಿಕೆಟ್ ಜೀವನದ ಉತ್ತುಂಗದಲ್ಲಿ ಗರಿಷ್ಠ ಹಣ ಗಳಿಸುವ ಭಾರತೀಯ ಆಟಗಾರರಾಗಿದ್ದರು. ಮುಂದೆ ಆ ಸ್ಥಾನವನ್ನು
ಧೋನಿ ತುಂಬಿದರು. ಇದೀಗ ತೆಂಡುಲ್ಕರ್ ನಿವೃತ್ತಿಯಾಗಿ 4 ವರ್ಷ ಕಳೆದಿದೆ. ಆದರೂ ಅವರ ಜನಪ್ರಿಯತೆ ಕುಸಿದಿಲ್ಲ. ಅವರ ಗಳಿಕೆ 82.50
ಕೋಟಿ ರೂ. ಇದು ಧೋನಿಗಿಂತ ಬಹಳ ಜಾಸ್ತಿ
ಕೊಹ್ಲಿ-ಅನುಷ್ಕಾಗೆಮೋದಿ ಗುಲಾಬಿ ಉಡುಗೊರೆ
ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ-ಬಾಲಿವುಡ್ ನಟಿ ಅನುಷ್ಕಾ ಶರ್ಮ ಆರತಕ್ಷತೆ ದಿಲ್ಲಿಯ ಸ್ಟಾರ್ ಹೋಟೆಲ್‌ವೊಂದರಲ್ಲಿ ಶುಕ್ರವಾರ ನಡೆಯಿತು. ಇದರಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕೊಹ್ಲಿ-ಅನುಷ್ಕಾಗೆ ತಲಾ ಒಂದೊಂದು ಗುಲಾಬಿ ನೀಡಿ ಮಾದರಿಯಾದರು. ಈ ಹಿಂದೊಮ್ಮೆ ದೊಡ್ಡ ಬೊಕೆಗಳನ್ನು ನೀಡಿ ವ್ಯರ್ಥ ಮಾಡುವುದರ ಬದಲು ಪುಸ್ತಕ ನೀಡಿ ಅಥವಾ ಒಂದೊಂದು ಗುಲಾಬಿ ನೀಡಿ
ಸಾಕು ಎಂದು ಮೋದಿ ಹೇಳಿದ್ದರು. ಸ್ವತಃ ತಾವು ಅದನ್ನು ಪಾಲಿಸುವುದರ ಮೂಲಕ ಮಾದರಿಯಾಗಿದ್ದಾರೆ. ಮೋದಿ ಭರ್ಜರಿ ಉಡುಗೊರೆ ನೀಡುತ್ತಾರೆ ಎಂದು ಎಲ್ಲರು ತದೇಕಚಿತ್ತದಿಂದ ಕಾಯುತ್ತಿದ್ದ ವೇಳೆ ಅವರು ನೀಡಿದ ಈ ಕೊಡುಗೆ ವಧೂವರರಿಗೂ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.