ಕೊಹ್ಲಿ ಆಡದಿರುವುದಕ್ಕೆ ಸ್ಟಾರ್ ನ್ಪೋರ್ಟ್ಸ್ ಅಸಮಾಧಾನ
Team Udayavani, Sep 18, 2018, 10:00 AM IST
ಹೊಸದಿಲ್ಲಿ: ಏಶ್ಯ ಕಪ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವುದಕ್ಕೆ ಕೂಟದ ನೇರ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ನ್ಪೋರ್ಟ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೊಹ್ಲಿ ಆಡದಿದ್ದರೆ ಕೂಟದ ಆಕರ್ಷಣೆ ಕಡಿಮೆಯಾಗುತ್ತದೆ ಎನ್ನುವುದು ಟಿವಿ ವಾಹಿನಿಯ ಆತಂಕ. ಇದಕ್ಕೆ ಬಿಸಿಸಿಐ ಖಾರದ ಪ್ರತ್ಯುತ್ತರ ನೀಡಿದೆ. ತಂಡದ ಆಯ್ಕೆಯಲ್ಲಿ ಮೂಗು ತೂರಿಸುವುದಕ್ಕೆ ಹೊರಗಿನವರಿಗೆ ಅವಕಾಶವಿಲ್ಲ ಎಂದು ಕಟುವಾಗಿ ಹೇಳಿದೆ.
ಇಂಗ್ಲೆಂಡ್ ಪ್ರವಾಸ ನಡೆಸಿದ ಬಳಿಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ರೋಹಿತ್ ಶರ್ಮಗೆ ನಾಯಕತ್ವ ನೀಡಲಾಗಿದೆ ಎಂದು ಏಶ್ಯ ಕಪ್ ಆರಂಭಕ್ಕೂ ಮೊದಲು ಬಿಸಿಸಿಐ ಪ್ರಕಟನೆ ಹೊರಡಿಸಿತ್ತು. ಇದೀಗ ಕೂಟ ಆರಂಭವಾಗಿದೆ. ಬೆನ್ನಲ್ಲೇ ಸಂಘಟಕ ಎಸಿಸಿಗೆ ಸ್ಟಾರ್ ನ್ಪೋರ್ಟ್ಸ್ ದೂರು ನೀಡಿದ್ದು, ಕೊಹ್ಲಿಗೆ ವಿಶ್ರಾಂತಿ ನೀಡಿದ್ದರಿಂದ ಟಿಆರ್‌ಪಿಗೆ ಹೊಡೆತ ಬಿದ್ದಿದೆ ಎಂದು ಹೇಳಿತ್ತು.
ಇದನ್ನು ಎಸಿಸಿ, ಬಿಸಿಸಿಐ ಗಮನಕ್ಕೆ ತಂದಿತ್ತು. ಇದಕ್ಕೆ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಖಡಕ್ ಉತ್ತರ ನೀಡಿದ್ದಾರೆ. ಬಿಸಿಸಿಐಗೆ ಅತ್ಯುತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅಧಿಕಾರವಿದೆ. ಇದರಲ್ಲಿ ಹೊರಗಿನವರಿಗೆ ಮೂಗು ತೂರಿಸಲು ಅಥವಾ ಪ್ರಶ್ನಿಸಲು ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.