ಕೊಹ್ಲಿ ಹೆಸರನ್ನು ತಪ್ಪಾಗಿ ಬರೆದ ಇಂಗ್ಲೆಂಡ್ ಆಟಗಾರ್ತಿಗೆ ಮುಜುಗರ
Team Udayavani, Sep 13, 2017, 7:10 AM IST
ಲಂಡನ್: ಭಾರತ ತಂಡದ ಸ್ಫೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಹೆಸರನ್ನು ವಿರಾಟ್ “ಖೋಲಿ’ ಎಂದು ಬರೆದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಈಕೆ ಈ ಹಿಂದೆ ತನ್ನನ್ನು ಮದುವೆಯಾಗು ಎಂದು ಕೊಹ್ಲಿಗೆ ಬಹಿರಂಗ ಆಹ್ವಾನ ನೀಡಿ ಸುದ್ದಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇತ್ತೀಚೆಗೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಅನಂತರ ಕೊಹ್ಲಿ ವ್ಯಾಟ್ಗೆ ಬ್ಯಾಟೊಂದನ್ನು ಕಾಣಿಕೆಯಾಗಿ ನೀಡಿದ್ದರು. ಅದರ ಚಿತ್ರವನ್ನು ಟ್ವೀಟರ್ನಲ್ಲಿ ಪ್ರಕಟಿಸಿರುವ ವ್ಯಾಟ್, ಬ್ಯಾಟ್ನ ತುದಿಯಲ್ಲಿ ವಿರಾಟ್ ಖೋಲಿ ಎಂದು ಬರೆದಿದ್ದಾರೆ. ಕೊಹ್ಲಿಯನ್ನು ಇಂಗ್ಲಿಷ್ನಲ್ಲಿ ಬರೆಯುವಾಗ ಎಚ್ ಅಕ್ಷರ ಅದಲುಬದಲಾಗಿದೆ.
ಮೊದಲಿನಿಂದಲೂ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿರುವ ವ್ಯಾಟ್ ಬೆಂಬಲಕ್ಕೆ ಅಭಿಮಾನಿಗಳು ಧಾವಿಸಿದ್ದಾರೆ. ಇಲ್ಲಿ ಅಕ್ಷರಗಳಿಗಿಂತ ಅಭಿಮಾನ ಮುಖ್ಯ ಎಂದಿದ್ದಾರೆ. 2014ರ ಟಿ-20 ವಿಶ್ವಕಪ್ ವೇಳೆ ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿದ್ದರು. ಅದೇ ವೇಳೆ ತನ್ನನ್ನು ಮದುವೆಯಾಗು ವ್ಯಾಟ್ ಆಹ್ವಾನ ನೀಡಿದ್ದರು. ಅದಕ್ಕೆ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.