ಕೊಹ್ಲಿ ವಿಶ್ವಾಸ ಅಲ್ಲದಿದ್ರೆ ನಿವೃತ್ತನಾಗಿರುತ್ತಿದ್ದೆ: ಯುವರಾಜ್‌


Team Udayavani, Jan 20, 2017, 11:14 AM IST

Yuvraj-700.jpg

ಕಟಕ್‌ : ಕ್ಯಾನ್ಸರ್‌ ವಿರುದ್ಧದ ಹೋರಾಟದ ಬಳಿಕ ಒಂದು ಹಂತದಲ್ಲಿ ನಾನು ಕ್ರಿಕೆಟ್‌ನಿಂದಲೇ ನಿವೃತ್ತನಾಗಲು ಆಲೋಚಿಸಿದ್ದೆ; ಆದರೆ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನನ್ನ ಮೇಲಿಟ್ಟ ವಿಶ್ವಾಸದಿಂದಾಗಿ ನಾನು ಕ್ರಿಕೆಟ್‌ನಲ್ಲಿ ಮುಂದುವರಿಯುವಂತಾಗಿದೆ; ಕೊಹ್ಲಿ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಪ್ರತಿಯಾಗಿ ನಾನು ಮರಳಿ ಕಾಣಿಕೆ ನೀಡುವುದು ಅಗತ್ಯವಾಗಿದೆ’ ಎಂದು ಇಂಗ್ಲಂಡ್‌ ಎದುರಿನ ಎರಡನೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 150 ರನ್‌ ಗಳ ಅಮೋಘ ಕಾಣಿಕೆ ನೀಡಿರುವ ಯುವರಾಜ್‌ ಸಿಂಗ್‌ ಹೇಳಿದ್ದಾರೆ.

“ನಿಮಗೆ ತಂಡದ ಹಾಗೂ ನಾಯಕನ ಬೆಂಬಲ ಇರುವುದಾದಲ್ಲಿ ಸಹಜವಾಗಿಯೇ ಯಾವತ್ತೂ ನಿಮಗೆ ಆತ್ಮ ವಿಶ್ವಾಸ ಇರಬಲ್ಲುದು. ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನನ್ನ ಮೇಲೆ ಅಪಾರವಾದ ವಿಶ್ವಾಸವನ್ನು ಇರಿಸಿದ್ದಾರೆ. ಹಾಗೆಯೇ ತಂಡದ ಡ್ರೆಸ್ಸಿಂಗ್‌ ರೂಮ್‌ನಲ್ಲಿರುವ ಇತರರು ಕೂಡ ನನ್ನ ಮೇಲೆ ವಿಶ್ವಾಸ ಇರಿಸಿದ್ದಾರೆ. ಇದುವೇ ನನ್ನ ಆತ್ಮವಿಶ್ವಾಸವನ್ನು ಹಲವು ಪಟ್ಟು ಹೆಚ್ಚಿಸಿದೆ’ ಎಂದು ಯುವರಾಜ್‌ ಸಿಂಗ್‌ ಹೇಳಿದರು. 

ಯುವರಾಜ್‌ ಅವರ ಸೂಪರ್‌ ಶತಕದ ಬಲದಲ್ಲಿ  ಭಾರತ ನಿನ್ನೆಯ ಏಕದಿನ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತಲ್ಲದೆ 3 ಪಂದ್ಯಗಳ ಈ ಸರಣಿಯನ್ನು 2-0 ಅಂತರದಲ್ಲಿ ಗೆಲ್ಲುವ ಸಾಧನೆ ಮಾಡಿದೆ. 

“ನಾನು ಕ್ಯಾನ್ಸರ್‌ ಗೆದ್ದ ಸಂದರ್ಭದಲ್ಲಿ ಅಸಂಖ್ಯಾತ ಅಭಿಮಾನಿಗಳು ನನ್ನ ಬೆಂಬಲಕ್ಕೆ ನಿಂತಿದ್ದರು. ಅಭಿಮಾನಿಗಳ ಬೆಂಬಲ ಯಾವತ್ತೂ ನನ್ನ ಪಾಲಿಗಿತ್ತು. ಆದರೂ ಒಂದು ಸಂದರ್ಭದಲ್ಲಿ ನನ್ನನ್ನು ತಂಡದಿಂದ ಕೈಬಿಡಲಾಯಿತು. ಆಗ ನಾನು ಕ್ರಿಕೆಟ್‌ನಿಂದ ನಿವೃತ್ತನಾಗಲು ಆಲೋಚಿಸಿದ್ದೆ. ಆದರೂ ಅಪಾರ ಜನಬೆಂಬಲ ನನ್ನ ಪಾಲಿಗಿತ್ತು. ಹಾಗಾಗಿ ನಾನು ಸೋಲೊಪ್ಪುವ ಪ್ರಶ್ನೆಯೇ ಇರಲಿಲ್ಲ; ನಾನು ನನ್ನ ಕಠಿನ ಪರಿಶ್ರಮವನ್ನು ಮುಂದುವರಿಸುತ್ತಲೇ ಹೋದೆ; ಕಾಲ ಖಂಡಿತ ಬದಲಾಗುತ್ತದೆ ಎಂಬ ನನ್ನ ನಂಬಿಕೆಯೇ ಕೊನೆಗೆ ಸತ್ಯವಾಯಿತು’ ಎಂದು 35ರ ಹರೆಯದ ಯುವರಾಜ್‌ ಸಿಂಗ್‌ ಹೇಳಿದರು. 

2011ರಲ್ಲಿ ಚೆನ್ನೈನಲ್ಲಿ ನಡೆದಿದ್ದ ವಿಶ್ವ ಕಪ್‌ ಪಂದ್ಯದ ಬಳಿಕ ಸರಿ ಸುಮಾರು ಆರು ವರ್ಷಗಳ ಬಳಿಕ ಗ್ರೇಟ್‌ ಕಮ್‌ ಬ್ಯಾಕ್‌ ಮಾಡಿದ ಯುವರಾಜ್‌ ಸಿಂಗ್‌ ನಿನ್ನೆ ಗುರುವಾರದ ತಮ್ಮ 14ನೇ ಶತಕದ ಬಗ್ಗೆ ಅತ್ಯಂತ ಸಂತುಷ್ಟರಾಗಿದ್ದಾರೆ. 

“ಆರು ವರ್ಷಗಳ ಬಳಿಕ ಶತಕದೊಂದಿಗಿನ ಈ ಕಮ್‌ ಬ್ಯಾಕ್‌ ಬಗ್ಗೆ ನನಗೆ ಗ್ರೇಟ್‌ ಅನ್ನಿಸುತ್ತಿದೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಬಳಿಕದ 2 – 3 ವರ್ಷಗಳ ಕಾಲ ತುಂಬಾ ಕಷ್ಟವಾಯಿತು. ಫಿಟ್‌ನೆಸ್‌ಗಾಗಿ ಸಾಕಷ್ಟು ಬೆವರು ಹರಿಸಿದೆ. ಆದರೆ ಅದಾಗಲೇ ನಾನು ತಂಡದಿಂದ ಹೊರಬಿದ್ದಿದ್ದೆ. ಅನಂತರದಲ್ಲಿ ನನಗೆ ತಂಡದಲ್ಲಿ ಶಾಶ್ವತ ಸ್ಥಾನ ಪಡೆಯಲು ಸಾಧ್ಯವಾಗಲೇ ಇಲ್ಲ’ ಎಂದು ಯುವರಾಜ್‌ ಆತ್ಮಾವಲೋಕನ ಮಾಡಿದರು. 

“ನನ್ನ ಬಗ್ಗೆ ಯಾರು ಯಾವ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ; ನಾನು ಟಿವಿ ನೋಡುವುದಿಲ್ಲ; ಪೇಪರ್‌ ಓದುವುದಿಲ್ಲ; ನಾನು ನನ್ನ ಆಟದಲ್ಲಷ್ಟೇ ಮನಸ್ಸನ್ನು ಕೇಂದ್ರೀಕರಿಸುತ್ತೇನೆ. ಹಾಗಾಗಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಾನು ಈಗಲೇ ಅರ್ಹನಾಗಿ ಉಳಿದಿದ್ದೇನೆ; ನಿನ್ನೆಯದು ನಿಜಕ್ಕೂ ನನ್ನ ಪಾಲಿಗೆ ನನ್ನ ದಿನವೇ ಆದದ್ದು ನನಗೆ ಅತೀವ ಸಂತಸ ತಂದಿದೆ’ ಎಂದು ಯುವರಾಜ್‌ ತೃಪ್ತಿಯಿಂದ ಹೇಳಿದರು. 

ಟಾಪ್ ನ್ಯೂಸ್

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Bellary; poor food supply; Protest in SC, ST hostel

Bellary; ಕಳಪೆ ಆಹಾರ ಪೂರೈಕೆ; ಎಸ್‌ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.