ಮತ್ತೆ ಸೆಹವಾಗ್-ಮಾರ್ಗನ್ ನಡುವೆ ಟ್ವೀಟರ್ ಚಕಮಕಿ
Team Udayavani, Jul 25, 2017, 7:15 AM IST
ನವೆದಹಲಿ: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಸೋಲಿಸಿ ಇಂಗ್ಲೆಂಡ್ ಚಾಂಪಿಯನ್ ಆಗಿದೆ. ಇದರಿಂದ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ ಮತ್ತು ಬ್ರಿಟಿಷ್ ಪತ್ರಕತ್ರ ಪಯರ್ಸ್ ಮಾರ್ಗನ್
ನಡುವಿನ ಟ್ವೀಟರ್ ವಾರ್ ಮತ್ತೆ ಆರಂಭವಾಗಿದೆ.
“2017ರ ವಿಶ್ವಕಪ್ ಫೈನಲ್ ಬಗ್ಗೆ ಸೆಹವಾಗ್ ಏನು ಹೇಳುತ್ತೀರಿ’ ಎಂದು ಮಾರ್ಗನ್ ಟ್ವೀಟರ್‌ನಲ್ಲಿ ಸೆಹವಾಗ್‌ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೆಹವಾಗ್ “ನಮ್ಮ ತಂಡ ಅತ್ಯುತ್ತಮವಾಗಿ ಹೋರಾಟ ಮಾಡಿರುವುದಕ್ಕೆ ನಾನು ಮತ್ತು ನನ್ನ ದೇಶ ಹೆಮ್ಮೆಪಡುತ್ತಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇಬ್ಬರ ನಡುವಿನ ಟ್ವೀಟರ್ ವಾರ್ 2016ರ ರಿಯೋ ಒಲಿಂಪಿಕ್ಸ್‌ನಿಂದ ಆರಂಭವಾಗಿದೆ. ಪಿ.ವಿ.ಸಿಂಧು ಬೆಳ್ಳಿ ಗೆದ್ದಿದ್ದಕ್ಕೆ ಇಡೀ ದೇಶಾದ್ಯಂತ ಸಂಭ್ರಮ ನಡೆದಿತ್ತು. ಆಗ ಒಂದು ಬೆಳ್ಳಿಗೆ ಅಷ್ಟೊಂದು ಸಂಭ್ರಮವೇ ಎಂದು ಮಾರ್ಗನ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೆಹವಾಗ್”ಕ್ರಿಕೆಟ್ ಜನಕರಾದ ನೀವು ಪುರುಷರ ವಿಭಾಗದಲ್ಲಿ ಒಂದೇ ಒಂದು ವಿಶ್ವಕಪ್ ಗೆದ್ಲಿಲ್ಲ ಎನ್ನುವುದನ್ನು ನೆನಪಡಿ’ ಎಂದು ತಿರುಗೇಟು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.