ಪತಿ, ಪತ್ನಿ ಸಂಬಂಧದ ಬಗ್ಗೆ ಸೆಹವಾಗ್ ಸ್ವಾರಸ್ಯಕರ ಟ್ವೀಟ್
Team Udayavani, Jul 30, 2017, 8:00 AM IST
ಹೊಸದಿಲ್ಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ಟ್ವೀಟರ್ನಲ್ಲಿ ಏನಾದರೊಂದು ವಿಷಯದ ಬಗ್ಗೆ ಸದಾ ಚರ್ಚಿಸುತ್ತಲೇ ಇರುತ್ತಾರೆ. ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ. ಸದ್ಯ ಟ್ವೀಟರ್ನಲ್ಲಿ ಪತಿ, ಪತ್ನಿ ಸಂಬಂಧದ ಬಗ್ಗೆ ಸೆಹವಾಗ್ ತಿಳಿ ಹಾಸ್ಯದ ಮೂಲಕ ವೀರು ಸ್ವಾರಸ್ಯಕರ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ಸೆಹವಾಗ್ ಟ್ವೀಟ್ನಲ್ಲೇನಿದೆ?:ಪತಿ ಕುಟುಂಬದ ತಲೆ ಇದ್ದ ಹಾಗೆ, ಪತ್ನಿ ಕುತ್ತಿಗೆ ಇದ್ದಂತೆ. ಕುತ್ತಿಗೆ ತಲೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸುತ್ತದೆ ಇದು ಸೆಹವಾಗ್ ಮಾಡಿರುವ ಟ್ವೀಟ್. ಈ ಟ್ವೀಟ್ ಪ್ರಕಟಿಸಿದ ಕೆಲವೇ ನಿಮಿಷಗಳಲ್ಲಿ ಭಾರೀ ಪ್ರತಿಕ್ರಿಯೆ ಬಂದಿವೆ. ಟ್ವೀಟ್ ಮಾಡಿದ ನಾಲ್ಕು ಗಂಟೆಯಲ್ಲಿಯೇ 1500 ರೀಟ್ವೀಟ್, 15 ಸಾವಿರ ಲೈಕ್ಗಳು ಬಂದಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.