ಪಂತ್ ಬಳಗಕ್ಕೆ ಇಂದು ನಿರ್ಣಾಯಕ ಪಂದ್ಯ: ಹೇಗಿದೆ ವಿಶಾಖಪಟ್ಟಣ ಮೈದಾನದ ಪಿಚ್ ರಿಪೋರ್ಟ್
Team Udayavani, Jun 14, 2022, 4:43 PM IST
ವಿಶಾಖಪಟ್ಟಣ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಭಾರತ ತಂಡ ಇಂದು ಮೂರನೇ ಸಮರಕ್ಕೆ ಸಿದ್ದವಾಗಿದೆ. ವಿಶಾಖಪಟ್ಟಣದಲ್ಲಿ ನಡೆಯಲಿರುವ ಟಿ20 ಪಂದ್ಯ ಗೆದ್ದು ಸರಣಿ ಜೀವಂತವಿಡಲು ಪಂತ್ ಪಡೆ ತಯಾರಿಯಲ್ಲಿದೆ.
ವಿಶಾಖಪಟ್ಟಣದ ವೈ..ಎಸ್.ರಾಜಶೇಖರ ರೆಡ್ಡಿ ಮೈದಾನದಲ್ಲಿ ಇದುವರೆಗೆ ಕೇವಲ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದೆ. ವಿಶೇಷವೆಂದರೆ ಎರಡೂ ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ.
ಕಡಿಮೆ ಮೊತ್ತಕ್ಕೆ ಹೆಸರಾದ ಕ್ರೀಡಾಂಗಣದಲ್ಲಿ ಬೌಲರ್ ಗಳೇ ಪಾರುಪತ್ಯ ಸಾಧಿಸಿದ್ದಾರೆ. ಇಲ್ಲಿನ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತು ಕೇವಲ 104 ರನ್. ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಮೊತ್ತ 127 ರನ್.
ಇದನ್ನೂ ಓದಿ:ಐಪಿಎಲ್ ಡಿಜಿಟಲ್ ಪ್ರಸಾರದ ಹಕ್ಕು ಗೆದ್ದ ಮಕೇಶ್ ಅಂಬಾನಿ ಒಡೆತನದ ಸಂಸ್ಥೆ
2019ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ಏಳು ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದರೆ, ಚೇಸ್ ಮಾಡಿದ್ದ ಆಸೀಸ್ ಕೂಡಾ ಏಳು ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.
2016ರಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಟಿ20 ಪಂದ್ಯವಾಡಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ ಕೇವಲ 82 ರನ್ ಗೆ ಆಲೌಟಾಗಿತ್ತು. ಭಾರತ ತಂಡ ಈ ಸುಲಭ ಗುರಿಯನ್ನು 13.5 ಓವರ್ ಗಳಲ್ಲಿ ತಲುಪಿತ್ತು.
ಸಂಭಾವ್ಯ ತಂಡಗಳು
ಭಾರತ: ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ನಾ & ವಿ.ಕೀ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್/ ರವಿ ಬಿಷ್ಣೋಯಿ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಅವೇಶ್ ಖಾನ್/ ಅರ್ಶ್ ದೀಪ್ ಸಿಂಗ್
ದ.ಆಫ್ರಿಕಾ: ಟೆಂಬಾ ಬವುಮಾ (ನಾ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡ್ಯುಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿ.ಕೀ), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ಅನ್ರಿಚ್ ನೋರ್ಜೆ, ತಬ್ರೈಜ್ ಶಮ್ಸಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.