ವಿಶ್ವನಾಥನ್ ಆನಂದ್ ಆತ್ಮಚರಿತ್ರೆ “ಮೈಂಡ್ ಮಾಸ್ಟರ್’ ಬಿಡುಗಡೆ
Team Udayavani, Dec 14, 2019, 11:40 PM IST
ಚೆನ್ನೈ: ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರ ಆತ್ಮಚರಿತ್ರೆ “ಮೈಂಡ್ ಮಾಸ್ಟರ್’ ಬಿಡುಗಡೆಗೊಂಡಿದೆ. ಚೆನ್ನೈಯ ಹೊಟೇಲ್ ತಾಜ್ ಕೋರಮಂಡಲ್‌ನಲ್ಲಿ ನಡೆದ ಸಮಾರಂಭದಲ್ಲಿ ಟಿಎಚ್‌ಜಿ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್‌ನ ಚೇರ್ಮನ್ ಎನ್. ರಾಮ್ ಬಿಡುಗಡೆಗೊಳಿಸಿದರು.
ಕ್ರೀಡಾ ಪತ್ರಕರ್ತ ಸುಶಾನ್ ನಿನಾಲ್ ಈ ಪುಸ್ತಕದ ಸಹ ಲೇಖಕರಾಗಿದ್ದಾರೆ. ಚೆಸ್ ಲೆಜೆಂಡ್ ಆನಂದ್ ಅವರು ಎನ್. ರಾಮ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಚೆಸ್ ಬಾಳ್ವೆಯ ಪಯಣದ ವೇಳೆ ಘಟಿಸಿದ ಅವಿಸ್ಮರಣೀಯ ನೆನಪುಗಳ ಸರಮಾಲೆಯನ್ನು ಇದರಲ್ಲಿ ತೆರೆದಿಟ್ಟಿದ್ದಾರೆ.
ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ರಾಮ್, “ಇದೊಂದು ಕ್ರೀಡೆಯ ಕ್ಲಾಸಿಕ್ ಪುಸ್ತಕವಾಗಿದೆ. ಉನ್ನತ ಚೆಸ್ ಆಟಗಾರರು, ಚೆಸ್ ಆಟ ತಿಳಿಯದವರು, ಉದಯೋನ್ಮುಖ ಚೆಸ್ ಓದುಗರು ಆಸಕ್ತಿಯಿಂದ ಓದಬಹುದಾದ ಉಪಯುಕ್ತ ಪುಸ್ತಕವಾಗಿದೆ’ ಎಂದರು.
ನೋಟ್ ಬರೆಯುವ ಹವ್ಯಾಸ
“ತಾಯಿ ಸುಶೀಲಾ ಅವರ ಸಲಹೆ ಮೇರೆಗೆ ಚಿಕ್ಕ ಪ್ರಾಯದಲ್ಲಿರುವಾಗಲೇ ಪುಸ್ತಕದಲ್ಲಿ ನೋಟ್ ಬರೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಒಮ್ಮೆ ಸೀನಿಯರ್ ಗ್ರ್ಯಾನ್ ಮಾಸ್ಟರ್ ಲುಬೊಮಿರ್ ಲುಬೊಜೆವಿಕ್ ದಿನಂಪ್ರತಿ ಡೈರಿ ಬರೆಯುವುದನ್ನು ರೂಢಿ ಮಾಡಿಕೊಳ್ಳಬೇಕೆಂದು ಹೇಳಿದ್ದರು. ಇದರ ಫಲವಾಗಿ ಈ ಮೈಂಡ್ ಮಾಸ್ಟರ್ ಹೊರಬಂದಿದೆ’ ಎಂದು ಆನಂದ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.