ಕೃತಿ ರೂಪದಲ್ಲಿ ಆನಂದ್ ಜೀವನಗಾಥೆ
"ಮೈಂಡ್ ಮಾಸ್ಟರ್: ವಿನ್ನಿಂಗ್ ಲೆಸನ್ಸ್ ಫ್ರಮ್ ಎ ಚಾಂಪಿಯನ್ಸ್ ಲೈಫ್'
Team Udayavani, Oct 17, 2019, 9:28 PM IST
ಹೊಸದಿಲ್ಲಿ: ಚೆಸ್ ದಂತಕತೆ ವಿಶ್ವನಾಥನ್ ಆನಂದ್ ಅವರ ಜೀವನಗಾಥೆ ಪುಸ್ತಕ ರೂಪದಲ್ಲಿ ಬರಲಿದೆ. ಬದುಕುವುದು ಹೇಗೆ ಎನ್ನುವುದನ್ನು ಅವರು ಈ ಪುಸ್ತಕದಲ್ಲಿ ತನ್ನದೇ ಬದುಕಿನ ಕತೆಯ ಮೂಲಕ ಸ್ಫೂರ್ತಿಯುತವಾಗಿ ವಿವರಿಸಿದ್ದಾರೆ.
“ಮೈಂಡ್ ಮಾಸ್ಟರ್: ವಿನ್ನಿಂಗ್ ಲೆಸನ್ಸ್ ಫ್ರಮ್ ಎ ಚಾಂಪಿಯನ್ಸ್ ಲೈಫ್’ ಎಂಬ ಈ ಪುಸ್ತಕ ಪತ್ರಕರ್ತೆ ಸೂಸಾನ್ ನಿನಾನ್ ನಿರೂಪಣೆಯಲ್ಲಿ ಬಂದಿದೆ. ಹ್ಯಾಶೆಟ್ ಇಂಡಿಯಾ ಪ್ರಕಟಿಸಿದ್ದು, ಡಿ. 11ರಂದು ಬಿಡುಗಡೆಯಾಗಲಿದೆ.
ತಾನಾಡಿದ ಶ್ರೇಷ್ಠ ಪಂದ್ಯಗಳು, ಹೀನಾಯ ಸೋಲುಗಳು, ಜಗತ್ತಿನ ಅತ್ಯುತ್ತಮ ಚೆಸ್ ಪಟುಗಳ ಜತೆಗೆ ಆಡುವಾಗ ಆದ ಅನುಭವ, ನಿರಾಶೆಗಳನ್ನು ಮೆಟ್ಟಿ ನಿಂತ ಪರಿ, ಎಲ್ಲದಕ್ಕೂ ಮಿಗಿಲಾಗಿ ಸುದೀರ್ಘ ಕಾಲ ಪಂದ್ಯದಲ್ಲಿ ಉಳಿದಿರುವುದು… ಮೊದಲಾದ ವಿಚಾರಗಳನ್ನು ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
ಬರವಣಿಗೆಯ ಅನುಭವ
“ಆಟ ಮತ್ತು ಬದುಕಿನ ಅನೇಕ ಮಹತ್ವದ ಘಟನೆಗಳ ನೆನಪುಗಳು ನನ್ನಲ್ಲಿವೆ. ಅವುಗಳನ್ನೆಲ್ಲ ಅಕ್ಷರಕ್ಕಿಳಿಸಬೇಕೆಂದು ಅನ್ನಿಸಿದಾಗ ನೆನಪುಗಳನ್ನು ವ್ಯವಸ್ಥಿತವಾಗಿ ಜೋಡಿಸಬೇಕಾಗುತ್ತದೆ. ಅವುಗಳ ಬಗ್ಗೆ ವಿವರವಾಗಿ ಚಿಂತಿಸಬೇಕಾಗುತ್ತದೆ. ಬರವಣಿಗೆ ನನಗೆ ಹಲವು ಕುತೂಹಲಕಾರಿ ಕತೆಗಳನ್ನು ಮತ್ತು ಘಟನೆಗಳನ್ನು ಮೆಲುಕು ಹಾಕುವ ಅವಕಾಶ ನೀಡಿತು’ ಎಂದು ಬರವಣಿಗೆಯ ಅನುಭವವನ್ನು ವಿಶ್ವನಾಥನ್ ಆನಂದ್ ಹಂಚಿಕೊಂಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.