ಆನಂದ್ “ವಿಶ್ವನಾಥನ್”
Team Udayavani, Dec 30, 2017, 6:10 AM IST
ರಿಯಾಧ್ (ಸೌದಿ): ಬೂದಿಯಿಂದ ಮೇಲೆದ್ದ ಫೀನಿಕ್ಸ್‌ನಂತೆ ಎಂಬ ವಾಕ್ಯವನ್ನು ವಿಶೇಷಣವಾಗಿ ಆಗಾಗ ಬಳಸುತ್ತಾರೆ. ದೀರ್ಘಕಾಲ ಸೋಲು ಕಂಡೋ ಅಥವಾ ಬೇರೆ ಯಾವುದೋ ಕಾರಣಕ್ಕೆ ತೆರೆ ಮರೆಗೆ ಸರಿದಿದ್ದ ವ್ಯಕ್ತಿಗಳು ದಿಢೀರನೆ ಅತ್ಯದ್ಭುತ ಸಾಧನೆಯೊಂದಿಗೆ ಮತ್ತೆ ಜಗತ್ತಿನೆದುರು ಪ್ರತ್ಯಕ್ಷವಾದರೆ ಅಂತಹವರನ್ನು ಹೀಗೆಂದು ಕರೆಯಲಾಗುತ್ತದೆ. ಹಾಗೆ ಫೀನಿಕ್ಸ್‌ನಂತೆ ಈಗ ಮೇಲೆದ್ದಿರುವುದು 48 ವರ್ಷದ ಚೆಸ್ ತಾರೆ ವಿಶ್ವನಾಥನ್ ಆನಂದ್. ಸೌದಿ ಅರೇಬಿಯಾದ ರಿಯಾಧ್‌ನಲ್ಲಿ ನಡೆದ ರಾಪಿಡ್ ಚೆಸ್ ಕೂಟದಲ್ಲಿ ವಿಶ್ವ ಚಾಂಪಿಯನ್ ಆಗಿ ಆನಂದ್ ಮೇಲೆದ್ದು ಬಂದಿದ್ದಾರೆ. ಇನ್ನೇನು ಆನಂದ್ ವೃತ್ತಿಜೀವನ ಮುಗಿಯಿತು, ನಿವೃತ್ತಿ ಹೇಳುವುದೇ ಸರಿ ಎಂಬ ಖಚಿತ ಅಭಿಪ್ರಾಯ ಬರುತ್ತಿದ್ದಾಗಲೇ ಅತಿವೇಗದ ಚೆಸ್‌ನಲ್ಲಿ ಅವರು ಚಾಂಪಿಯನ್.
ಈಗ 48 ವರ್ಷದ ವಿಶ್ವನಾಥನ್ ಆನಂದ್ 2014ರಲ್ಲಿ ತನಗಿಂತ ಬಹಳ ಕಿರಿಯ ಹುಡುಗ ನಾರ್ವೆಯ ಮ್ಯಾಗ್ನಸ್ ಕಾಲ್ಸìನ್ ವಿರುದ್ಧ ಸೋತಾಗ ಅವರ ಚೆಸ್ ಭವಿಷ್ಯ ಮುಗಿಯಿತು ಎಂದು ಭಾವಿಸಿದ್ದರು. ಆಗಲೂ ಅವರು ನಿವೃತ್ತಿಯ ತೀರ್ಮಾನ ತೆಗೆದುಕೊಂಡಿರಲಿಲ್ಲ. ಕ್ರೀಡಾರಂಗದ ಮಟ್ಟಿಗೆ ವೃದ್ಧಾಪ್ಯವೆಂದೇ ಭಾವಿಸಲಾಗಿರುವ 48ರ ವಯಸ್ಸಿನಲ್ಲಿ ಆನಂದ್ ಗೆದ್ದಿರುವುದು ಚೆಸ್ ಜಗತ್ತಿನ ಅಚ್ಚರಿಗಳಲ್ಲೊಂದೆಂದು ಹೊಗಳಲಾಗಿದೆ.
ವೇಗದ ಚೆಸ್‌ಗೆ ಮತ್ತೆ ದೊರೆ: ಮಾಮೂಲಿ ಚೆಸ್‌ನಲ್ಲಿ ಆಟಗಾರನಿಗೆ ಯೋಚಿಸಲು ಬಹಳ ಸಮಯವಿರುತ್ತದೆ. ರಾಪಿಡ್ ಚೆಸ್‌ನಲ್ಲಿ ಅತೀ ಕಡಿಮೆ ಅವಕಾಶವಿರುತ್ತದೆ. ಚೆಸ್ ಮಟ್ಟಿಗೆ ಊಹಾತೀತ ವೇಗದಲ್ಲಿ ಆಟಗಾರ ಮುನ್ನುಗ್ಗಬೇಕಾಗುತ್ತದೆ. ಇಂತಹ ರಿಯಾಧ್ ಕೂಟದಲ್ಲಿ ಆನಂದ್ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಆನಂದ್ ಈ ಕೂಟದ ಆರಂಭದಲ್ಲಿ ಚೆಸ್‌ನ ವಿಸ್ಮಯ ಎಂದು ಕರೆಸಿಕೊಂಡಿರುವ ಮ್ಯಾಗ್ನಸ್ ಕಾಲ್ಸìನ್‌ರನ್ನು ಸೋಲಿಸಿದರು. ಆಗ ಜಗತ್ತು ಹೊಸ ಕೌತುಕದಿಂದ ಆನಂದ್‌ರನ್ನು ಗಮನಿಸಿತ್ತು. ಅಂತಿಮವಾಗಿ ಆನಂದ್ 10.5 ಅಂಕಗಳೊಂದಿಗೆ ಜಂಟಿ ಅಗ್ರಸ್ಥಾನಿಯಾದರು. ಈ ಹಂತದಲ್ಲಿ ರಷ್ಯಾದ ಇನ್ನಿಬ್ಬರು ಆಟಗಾರರಾದ ವ್ಲಾಡಿಮಿರ್ ಫೆಡೆಯೆಸೊವ್ ಮತ್ತು ಇಯಾನ್ ನೆಪೊಮ್‌ನಿಯಾಚ್ಚಿ ಕೂಡ ಅಷ್ಟೇ ಅಂಕಗಳಿಸಿದ್ದರು. ವಿಜೇತರನ್ನು ಟೈಬ್ರೇಕರ್‌ನಲ್ಲೇ ನಿರ್ಧರಿಸಬೇಕಾದ ಪರಿಸ್ಥಿತಿ ಬಂತು. ಆಗ ಸತತ ಎರಡು ಪಂದ್ಯಗಳಲ್ಲಿ ಫೆಡೆಯೆಸೊವ್‌ರನ್ನು ಸೋಲಿಸಿ ಆನಂದ್ ವಿಶ್ವಚಾಂಪಿಯನ್‌ಶಿಪ್ ಪಟ್ಟಕ್ಕೇರಿದರು.
ಆನಂದ್ ವಿಶ್ವಕಿರೀಟಗಳು
2000-ವಿಶ್ವ ಚಾಂಪಿಯನ್
2007-ವಿಶ್ವಚಾಂಪಿಯನ್
2008-ವಿಶ್ವ ಚಾಂಪಿಯನ್
2010-ವಿಶ್ವ ಚಾಂಪಿಯನ್
2012-ವಿಶ್ವ ಚಾಂಪಿಯನ್
2003-ರಾಪಿಡ್ ವಿಶ್ವ ಚಾಂಪಿಯನ್
2017-ರಾಪಿಡ್ ವಿಶ್ವ ಚಾಂಪಿಯನ್
ದಾಖಲೆಗಳು, ಗೌರವಗಳು
ಮೊದಲ ಗ್ರ್ಯಾನ್‌ಮಾಸ್ಟರ್-1988ರಲ್ಲಿ ಆನಂದ್‌ಗೆ ಭಾರತದ ಮೊದಲ ಚೆಸ್ ಗ್ರ್ಯಾನ್‌ಮಾಸ್ಟರ್ ಹೆಗ್ಗಳಿಕೆ.
2800 ಅಂಕ-ಚೆಸ್‌ನಲ್ಲಿ 2800 ಇಎಲ್‌ಒ ಅಂಕಗಳನ್ನು ದಾಟಿದ ವಿಶ್ವದ ನಾಲ್ಕನೇ ಆಟಗಾರ
ವಿಶ್ವ ನಂ.1-ಇಪ್ಪತ್ತೂಂದು ತಿಂಗಳ ತಿಂಗಳ ಕಾಲ ಚೆಸ್ ವಿಶ್ವ ನಂ.1 ಆಟಗಾರ. ವಿಶ್ವದಲ್ಲೇ 6ನೇ ಗರಿಷ್ಠ ಅವಧಿ.
ರಾಪಿಡ್ -ಬ್ಲೆ„ಂಡ್ ದಿಗ್ಗಜ: ಅಂಬೆರ್ ಕೂಟದ ಬ್ಲೆ„ಂಡ್‌ಫೋಲ್ಡ್ ಮತ್ತು ರ್ಯಾಪಿಡ್ ಎರಡೂ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ವಿಶ್ವದ ಮೊದಲಿಗ
ಅತಿಶೀಘ್ರ ಜಯ: 2012ರ ವಿಶ್ವಚಾಂಪಿಯನ್‌ಶಿಪ್‌ನ 8ನೇ ಪಂದ್ಯದಲ್ಲಿ ಗೆಲ್ಫಾಂಡ್ ವಿರುದ್ಧ ಕೇವಲ 17 ನಡೆಯಲ್ಲಿ ಗೆದ್ದರು, ಇದು ಚೆಸ್ ಇತಿಹಾಸದ ಅತಿ ಶೀಘ್ರ ಜಯ.
ಮೊದಲ ರ್ಯಾಪಿಡ್ ಚಾಂಪಿಯನ್: 2003ರಲ್ಲಿ ಮೊದಲ ರಾಪಿಡ್ ಚೆಸ್ ವಿಶ್ವಚಾಂಪಿಯನ್‌ಶಿಪ್ ನಡೆಯಿತು. ಅದನ್ನು ಆನಂದ್ ಗೆದ್ದರು.
ಮೊದಲ ಖೇಲ್ ರತ್ನ: 1991-92ರಲ್ಲಿ ಆರಂಭವಾದ ರಾಜೀವ್ ಖೇಲ್ ರತ್ನಕ್ಕೆ ಆಯ್ಕೆಯಾದ ಮೊದಲ ಕ್ರೀಡಾಪಟು.
ಪದ್ಮವಿಭೂಷ ಗೌರವ: 2007ರಲ್ಲಿ ದೇಶದ ಎರಡನೇ ಪ್ರತಿಷ್ಠಿತ ಗೌರವ ಪದ್ಮವಿಭೂಷಣಕ್ಕೆ ಆಯ್ಕೆ.
ತಾಯಿಯೇ ಮೊದಲ ಚೆಸ್ ಗುರು
1969ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ವಿಶ್ವನಾಥನ್ ಆನಂದ್ ಜನಿಸಿದರು. ಕೇವಲ 6ನೇ ವಯಸ್ಸಿನಲ್ಲೇ ಅವರು ಚೆಸ್ ಕಲಿಕೆ ಆರಂಭಿಸಿದರು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಅವರಿಗೆ ಚೆಸ್ ಕಲಿಸಿದ್ದು ಯಾರು ಗೊತ್ತಾ? ತಾಯಿ ಸುಶೀಲಾ. ಬಹುತೇಕ ಭಾರತೀಯ ಹೆಣ್ಣುಮಕ್ಕಳಂತೆ ಸುಶೀಲಾ ಅವರು ಗೃಹಿಣಿ ಪಾತ್ರಕ್ಕೆ ಸೀಮಿತವಾಗಿದ್ದವರು. ಅವರು ಆನಂದ್‌ಗೆ ಚೆಸ್‌ನ ಮೊದಲ ಪಾಠ ಮಾಡಿದರು.
2013ರಿಂದ ವೃತ್ತಿಬದುಕಿನ ಹೀನಾಯ ದಿನ
ವಿಶ್ವನಾಥನ್ ಆನಂದ್‌ಗೆ 2013ರಿಂದ ಚೆಸ್ ಕ್ರೀಡೆಯಲ್ಲಿ ಬಹಳ ಇಕ್ಕಟ್ಟಿನ ದಿನಗಳು ಎದುರಾದವು. ಕೇವಲ 23 ವರ್ಷದ ಮ್ಯಾಗ್ನಸ್ ಕಾಲ್ಸìನ್ ಎದುರು ಅವರು ವಿಶ್ವ ಚಾಂಪಿಯನ್ ಪಟ್ಟ ಕಳೆದುಕೊಂಡು ರನ್ನರ್ ಅಪ್ ಎನಿಸಿಕೊಂಡರು. 2014ರಲ್ಲಿ ಮತ್ತೆ ಫೈನಲ್‌ಗೇರಿದರು. ಆಗಲೂ ಫಲಿತಾಂಶ ಪುನರಾವರ್ತನೆಗೊಂಡಿತು. ಆಗ ನೇರವಾಗಿಯೇ ನೀವು ನಿವೃತ್ತಿ ಹೊಂದಬಹುದಲ್ಲ ಎಂಬ ಪ್ರಶ್ನೆ ಕೇಳಿಬಂತು. ಇಲ್ಲ ಮುಂದುವರಿಯುತ್ತೇನೆ ಎಂದು ಹೇಳಿದಾಗ ಚೆಸ್ ಜಗತ್ತು ಅಚ್ಚರಿಗೊಂಡಿತ್ತು. ಅಲ್ಲಿಂದ ನಿರಂತರವಾಗಿ ಸಣ್ಣಪುಟ್ಟ ಕೂಟಗಳಲ್ಲೂ ಸೋಲುತ್ತಾ ಬಂದರು. ಅವರ ಭವಿಷ್ಯ ಮುಗಿದೇ ಹೋಯಿತು ಎಂಬ ಘಟ್ಟದಲ್ಲಿ ರಾಪಿಡ್‌ನಲ್ಲಿ ಗೆದ್ದರು.
ಏನಿದು ರಾಪಿಡ್ ವಿಶ್ವಚಾಂಪಿಯನ್‌ಶಿಪ್?
ಚೆಸ್ ಅನ್ನು ಅತ್ಯಂತ ಜನಪ್ರಿಯಗೊಳಿಸುವುದಕ್ಕೆ ಬಂದ ಮಾದರಿಯಿದು. ಅತ್ಯಂತ ವೇಗವಾಗಿ ನಡೆಗಳನ್ನು ನಡೆಸಬೇಕು. ಒಬ್ಬ ಆಟಗಾರನಿಗೆ ಒಟ್ಟಾರೆ ಪಂದ್ಯದಲ್ಲಿ ಕೇವಲ 15 ನಿಮಿಷ ಅವಧಿಯಿರುತ್ತದೆ. ಪ್ರತಿನಡೆಗೆ ಹೆಚ್ಚುವರಿ 10 ಸೆಕೆಂಡ್‌ಗಳಿರುತ್ತವೆ. ಇಷ್ಟೇ ಅವಧಿಯಲ್ಲಿ ಪಂದ್ಯವನ್ನು ಜಯಿಸಬೇಕು.
40 ಗಂಟೆ ರಸ್ತೆ ಪ್ರಯಾಣ, ನಂತರ ವಿಶ್ವ ಕಿರೀಟ
2010ರ ವಿಶ್ವ ಚಾಂಪಿಯನ್‌ಶಿಪ್ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯಿತು. ಆ ಕೂಟದಲ್ಲಿ ಆನಂದ್ ಗೆದ್ದರು. ಅದಕ್ಕೂ ಮೊದಲು ಅವರು ಅತ್ಯಂತ ದುಸ್ತರ ಪರಿಸ್ಥಿತಿ ಎದುರಿಸಿದರು. ಐಸ್‌ಲ್ಯಾಂಡ್‌ನಲ್ಲಿ ಜ್ವಾಲಾಮುಖೀಯೆದ್ದು ಅದು ಇಡೀ ಯುರೋಪ್‌ನಲ್ಲಿ ಬಿಕ್ಕಟ್ಟಿನ ಸ್ಥಿತಿ ನಿರ್ಮಿಸಿತು. ಆದ್ದರಿಂದ ಅವರ ವಿಮಾನ ಟಿಕೆಟ್ ರದ್ದಾಗಿ ಫ್ರಾಂಕ್‌ಫರ್ಟ್‌ನಲ್ಲೇ ಉಳಿಯಬೇಕಾಯಿತು. ಕಡೆಗೆ ರಸ್ತೆ ಪ್ರಯಾಣದ ನಿರ್ಧಾರ ಮಾಡಿ ಸತತ 40 ಗಂಟೆ ಪ್ರಯಾಣಿಸಿ ಬಲ್ಗೇರಿಯಾ ತಲುಪಿದರು. ಏ.19ರಿಂದ ಆರಂಭವಾಗಬೇಕಾದ ಪಂದ್ಯ 20ಕ್ಕೆ ಆರಂಭವಾಯಿತು. ಆದರೂ ಅವರು ಪಟ್ಟುಬಿಡದೇ ಆಡಿ ಕಿರೀಟ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.