ಜಿಂಬಾಬ್ವೆ ತಂಡದಲ್ಲಿ ಬ್ರಿಯಾನ್ ವೆಟೋರಿ
Team Udayavani, Feb 6, 2018, 6:20 AM IST
ಹರಾರೆ: ಅಫ್ಘಾನಿಸ್ಥಾನ ವಿರುದ್ಧ ಆಡಲಾಗುವ ಟಿ20 ಹಾಗೂ ಏಕದಿನ ಸರಣಿಗಾಗಿ ಎಡಗೈ ಪೇಸ್ ಬೌಲರ್ ಬ್ರಿಯಾನ್ ವೆಟರಿ ಜಿಂಬಾಬ್ವೆ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.
ವೆಟರಿ 2016ರ ನವಂಬರ್‌ನಲ್ಲಿ ಕೊನೆಯ ಸಲ ಜಿಂಬಾಬ್ವೆಯನ್ನು ಪ್ರತಿನಿಧಿಸಿದ್ದರು. ಕ್ರಮವಲ್ಲದ ಬೌಲಿಂಗ್ ಶೈಲಿಯಿಂದಾಗಿ ವೆಟರಿಗೆ ಸ್ವಲ್ಪ ಕಾಲ ನಿಷೇಧ ವಿಧಿಸಲಾಗಿತ್ತು. ಆದರೀಗ ವೆಟರಿ ಬೌಲಿಂಗ್ ವಿಧಾನವನ್ನು ಸರಿಪಡಿಸಿಕೊಂಡಿದ್ದು, ಇವರ ಶೈಲಿಗೆ ಐಸಿಸಿ ಹಸಿರು ನಿಶಾನೆ ನೀಡಿದೆ.
ವೆಟರಿ ಓರ್ವ ನಿಜವಾದ ಹೋರಾಟಗಾರ, ಅವರು ತಂಡಕ್ಕೆ ಮರಳಿರುವುದು ಸಂತಸದ ಸಂಗತಿ ಎಂದು ನಾಯಕ ಗ್ರೇಮ್ ಕ್ರೆಮರ್ ಪ್ರತಿಕ್ರಿಯಿಸಿದ್ದಾರೆ.
ಫೆ. 5ರಿಂದ 2 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಅನಂತರ 5 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಜಿಂಬಾಬ್ವೆ ತಂಡ: ಗ್ರೇಮ್ ಕ್ರೆಮರ್ (ನಾಯಕ), ಹ್ಯಾಮಿಲ್ಟನ್ ಮಸಕಝ, ಕ್ರೆಗ್ ಇರ್ವಿನ್, ಬ್ರೆಂಡನ್ ಟಯ್ಲರ್, ಮಾಲ್ಕಂ ವಾಲರ್, ರಿಯಾನ್ ಬರ್ಟ್, ಪೀಟರ್ ಮೂರ್, ಸಿಕಂದರ್ ರಾಜ, ಸೊಲೊಮನ್ ಮೈರ್, ಬ್ಲೆಸ್ಸಿಂಗ್ ಮುಜರಬನಿ, ಕೈಲ್ ಜಾರ್ವಿಸ್, ಟೆಂಡೈ ಚಟಾರ, ಬ್ರಿಯಾನ್ ವೆಟೋರಿ, ಟೆಂಡೈ ಕಿಸೊರೊ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.