ಅಣ್ಣನ ತ್ಯಾಗವನ್ನು ಸಾಕಾರಗೊಳಿಸಿದ ತಮ್ಮ: 2.6 ಕೋಟಿಗೆ ಹರಾಜಾದ ವಿವ್ರಾಂತ್ ಯಾರು ಗೊತ್ತಾ?
Team Udayavani, Dec 24, 2022, 4:23 PM IST
ಮುಂಬೈ: ಅಣ್ಣ ವಿಕ್ರಾಂತ್ ಅಂದು ತ್ಯಾಗ ಮಾಡದೇ ಹೋಗದೇ ಇದ್ದರೆ ಇಂದು ತಮ್ಮ 23 ವರ್ಷದ ಆಲ್ ರೌಂಡರ್ ವಿವ್ರಾಂತ್ ಶರ್ಮಾ ಅವರು ದೇಶೀಯ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ ಪ್ರಭಾವ ಬೀರಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಐಪಿಎಲ್ 2023 ರ ಹರಾಜಿನಲ್ಲಿ 2.6 ಕೋಟಿ ರೂಪಾಯಿಗಳ ಡೀಲ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ.
2020 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಸಹೋದರರು ತಮ್ಮ ತಂದೆಯನ್ನು ಕಳೆದುಕೊಂಡಾಗ, ವಿಕ್ರಾಂತ್ ಅವರು ವೃತ್ತಿಪರ ಕ್ರಿಕೆಟಿಗನಾಗುವ ತನ್ನ ಕನಸನ್ನು ತ್ಯಾಗ ಮಾಡಿ ಕುಟುಂಬದ ವ್ಯವಹಾರವನ್ನು ವಹಿಸಿಕೊಂಡರು. ವಿಕ್ರಾಂತ್ ಸ್ವತಃ ವೇಗದ ಬೌಲರ್ ಆಗಬೇಕೆಂಬ ಹಂಬಲ ಹೊಂದಿದ್ದರು, ರಾಜ್ಯದ ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ಆಡಿದ್ದರು.
ಅಣ್ಣನ ತ್ಯಾಗದ ಕಾರಣದಿಂದ ವಿವ್ರಾಂತ್ ಕ್ರಿಕೆಟ್ ನಲ್ಲಿ ಮಿಂಚಲು ಆರಂಭಿಸಿದರು. ಅವರು ಫೆಬ್ರವರಿ 2021 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ತಮ್ಮ ಚೊಚ್ಚಲ ಪಂದ್ಯವಾಡಿದರು. ಇದಾಗಿ 18 ತಿಂಗಳ ನಂತರ ಇದೀಗ ಕೊಚ್ಚಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ಖರೀದಿಸಿದ ಅತ್ಯಂತ ದುಬಾರಿ ಅನ್ ಕ್ಯಾಪ್ಡ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
20 ಲಕ್ಷ ರೂ ಮೂಲ ಬೆಲೆ ಹೊಂದಿದ್ದ ವಿವ್ರಾಂತ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 2.6 ಕೋಟಿ ರೂ ನೀಡಿ ಖರೀದಿ ಮಾಡಿತ್ತು.
ಇದನ್ನೂ ಓದಿ:ಚೀನ ಸೇರಿ ಹಲವು ದೇಶಗಳ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ವಿವ್ರಾಂತ್, ತನ್ನ ಎಲ್ಲಾ ಯಶಸ್ಸಿಗೆ ತನ್ನ ಸಹೋದರನಿಗೆ ಸಲ್ಲುತ್ತದೆ. ಹರಾಜಿನಲ್ಲಿ ಮಾರಾಟವಾದ ತಕ್ಷಣ ಸಹೋದರ ಮತ್ತು ತಾಯಿಗೆ ಕರೆ ಮಾಡಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದೇನೆ ಎಂದರು.
ಯುವರಾಜ್ ಫ್ಯಾನ್: ವಿವ್ರಾಂತ್ ಅವರು ವಿಶ್ವಕಪ್ ವಿಜೇತ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ದೊಡ್ಡ ಅಭಿಮಾನಿ. ವಿವ್ರಾಂತ್ ಅವರು ಹಿಂದೆ ಜಮ್ಮು ಕಾಶ್ಮೀರ ಕ್ರಿಕೆಟ್ ನೊಂದಿಗೆ ಕೆಲಸ ಮಾಡಿದ ಇರ್ಫಾನ್ ಪಠಾಣ್ ಅವರಿಂದಲೂ ಪ್ರಭಾವಿತರಾಗಿದ್ದಾರೆ ಎಂದು ಹೇಳಿದರು.
“ನಾನು ಬಾಲ್ಯದಿಂದಲೂ ಯುವರಾಜ್ ಅವರನ್ನು ಫಾಲೋ ಮಾಡಿ ಬರುತ್ತಿದ್ದೇನೆ; ಅವರು ಪಾಲಂನಲ್ಲಿ (ದೆಹಲಿ) ಆಡುತ್ತಿದ್ದಾಗ ಒಮ್ಮೆ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಮತ್ತು ನಾನು ಅವರೊಂದಿಗೆ ಫೋಟೋ ಕ್ಲಿಕ್ಕಿಸಿದೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ ವಿವ್ರಾಂತ್.
ನವೆಂಬರ್ ನಲ್ಲಿ ವಿಜಯ್ ಹಜಾರೆ ಪಂದ್ಯದಲ್ಲಿ 6 ಸಿಕ್ಸರ್‌ಗಳು ಮತ್ತು 18 ಬೌಂಡರಿಗಳನ್ನು ಬಾರಿಸುವ ಮೂಲಕ ಕೇವಲ 124 ಎಸೆತಗಳಲ್ಲಿ ಔಟಾಗದೆ 154 ರನ್ ಗಳಿಸಿದ್ದ ವಿವ್ರಾಂತ್ ಐಪಿಎಲ್ ನ ಹರಾಜಿನಲ್ಲಿ ಗಮನ ಸೆಳೆದಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ವಿವ್ರಾಂತ್ 8 ಪಂದ್ಯಗಳಲ್ಲಿಒಂದು ಶತಕ ಮತ್ತು ಎರಡು ಅರ್ಧಶತಕ ಸೇರಿದಂತೆ 395 ರನ್ ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.