ಉದ್ದೀಪನ: ಸ್ವಚ್ಛ ಕ್ರೀಡಾ ಅಭಿಯಾನಕ್ಕೆ ಹಿನ್ನಡೆ
Team Udayavani, Jul 25, 2018, 6:00 AM IST
ಹೊಸದಿಲ್ಲಿ: ಉದ್ದೀಪನ ದ್ರವ್ಯಗಳಿಲ್ಲದ ಸ್ವಚ್ಛ ಕ್ರೀಡೆಯ ಭಾರತದ ಅಭಿಯಾನ ಕೊಂಚ ಹಿನ್ನಡೆ ಕಂಡಿದೆ. 2017ರಲ್ಲಿ ನಾಡಾ ನಡೆಸಿದ 3,174 ಮಾದರಿಗಳ ಪರೀಕ್ಷೆಯಲ್ಲಿ 71 ಕ್ರೀಡಾಪಟುಗಳು ಉದ್ದೀಪನ ದ್ರವ್ಯ ಸೇವಿಸಿದ್ದು ಪತ್ತೆಯಾಗಿತ್ತು. ಈ ಪೈಕಿ 9 ಮಾದರಿಗಳ ಹೆಚ್ಚುವರಿ ಪರೀಕ್ಷೆ ಅಗತ್ಯವಿದೆ ಎಂದೂ ಸೂಚಿಸಿದೆ. ಆದರೆ, 71ರಲ್ಲಿ 21 ಪ್ರಕರಣಗಳಲ್ಲಿ ಉದ್ದೀಪನ ದ್ರವ್ಯ ಸೇವನೆ ದೃಢಪಟ್ಟಿದೆ ಎಂದು ವಾಡಾ ಘೋಷಿಸಿದೆ.
ಆದರೆ, 2015ಕ್ಕೆ ಹೋಲಿಸಿದರೆ ಈ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಎರಡು ವರ್ಷಗಳ ಹಿಂದೆ 110 ಮಾದರಿಗಳಲ್ಲಿ ಉದ್ದೀಪನ ದ್ರವ್ಯದ ಅಂಶ ಪತ್ತೆಯಾಗಿತ್ತು. ಆಗ 4,734 ಕ್ರೀಡಾಪಟುಗಳ ಪರೀಕ್ಷೆ ನಡೆದಿತ್ತೆಂಬುದೂ ಗಮನಾರ್ಹ.
815 ಆ್ಯತ್ಲೀಟ್ಗಳ ಮಾದರಿ
2017ರಲ್ಲಿ 815 ಆ್ಯತ್ಲೀಟ್ಗಳ ಮಾದರಿ ಸಂಗ್ರಹಿಸಲಾಗಿತ್ತು. ಇದರಲ್ಲಿ 84 ರಕ್ತದ ಮಾದರಿಗಳೇ ಆಗಿದ್ದವು. 2ನೇ ಅತಿ ಹೆಚ್ಚು ಪರೀಕ್ಷೆಗಳು ಪವರ್ ಲಿಫ್ಟಿಂಗ್ ವಿಭಾಗದಲ್ಲಿ ನಡೆದಿವೆ. ಈ ಪೈಕಿ 14 ಮಾದರಿಗಳಲ್ಲಿ ನಿಷೇಧಿತ ದ್ರವ್ಯ ಪತ್ತೆಯಾಗಿತ್ತು. ವೇಟ್ ಲಿಫ್ಟಿಂಗ್ ವಿಭಾಗದಲ್ಲೂ 11 ಮಾದರಿಗಳಲ್ಲಿ ನಿಷೇಧಿತ ದ್ರವ್ಯ ಇರುವುದನ್ನು ಗುರುತಿಸಲಾಗಿತ್ತು. ದೇಹದಾಡ್ಯì ಕ್ರೀಡಾಪಟುಗಳಲ್ಲಿ 18 ಜನರ ಸ್ಯಾಂಪಲ್ಗಳು ಪಾಸಿಟಿವ್ ಆಗಿದ್ದವು.
ಫುಟ್ಬಾಲ್, ಹಾಕಿಯಲ್ಲಿ ತಲಾ ಒಂದು ಮಾದರಿ ನಿಷೇಧಿತ ದ್ರವ್ಯ ಒಳಗೊಂಡಿತ್ತು. ಕುಸ್ತಿಯಲ್ಲಿ ನಾಲ್ವರು ಸಿಕ್ಕಿಬಿದ್ದಿದ್ದರು. ವಾಲಿಬಾಲ್, ಜೂಡೋ ಸ್ಪರ್ಧೆಗಳಲ್ಲಿ ಎರಡು, ಬಾಕ್ಸಿಂಗ್ನಲ್ಲಿ ನಾಲ್ವರು ದೋಷಿಗಳೆಂದು ಗುರುತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.