ನಿಷೇಧಕ್ಕೂ ಮುನ್ನ ಐಪಿಎಲ್‌ ನಾಯಕತ್ವದಿಂದ ವಾರ್ನರ್‌ ವಜಾ


Team Udayavani, Mar 29, 2018, 7:05 PM IST

David-Warner,-IPL.jpg

ಡೇವಿಡ್‌ ವಾರ್ನರ್‌ ಅವರನ್ನು 2018ರ ಐಪಿಎಲ್‌ನಿಂದ ನಿಷೇಧಿಸುವ ಮುನ್ನ ಸನ್‌ರೈಸರ್ ಹೈದರಾಬಾದ್‌ ತಂಡದ ನಾಯಕತ್ವದಿಂದ ಕೆಳಗಿಳಿಸ ಲಾಗಿತ್ತು. ಐಪಿಎಲ್‌ನ ಹೈದರಾಬಾದ್‌ ಫ್ರಾಂಚೈಸಿಯ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೆ. ಷಣ್ಮುಗಂ ಬುಧವಾರ ತಂಡದ ಅಧಿಕೃತ ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದರು.

“ಇತ್ತೀಚಿನ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ಘಟನಾವಳಿಯನ್ನು ಗಮನಿಸಿ ಡೇವಿಡ್‌ ವಾರ್ನರ್‌ ಅವರನ್ನು ನಮ್ಮ ಸನ್‌ರೈಸರ್ ಹೈದರಾಬಾದ್‌ ತಂಡದ ನಾಯಕತ್ವದಿಂದ ಕೈಬಿಡಲು ನಿರ್ಧರಿಸಿದ್ದೇವೆ. ನೂತನ ನಾಯಕನನ್ನು ಶೀಘ್ರದಲ್ಲೇ ನೇಮಿಸಲಾಗುವುದು’ ಎಂದು ಷಣ್ಮುಗಂ ತಿಳಿಸಿದ್ದಾರೆ.

2016ರಲ್ಲಿ ಹೈದರಾಬಾದ್‌ ತಂಡ ವನ್ನು ಯಶಸ್ವಿಯಾಗಿ ಮುನ್ನಡೆಸಿ, ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಗ್ಗಳಿಕೆ ವಾರ್ನರ್‌ ಪಾಲಿಗಿದೆ. ಕಳೆದ ವರ್ಷವೂ ಉತ್ತಮ ನಿರ್ವಹಣೆ ಕಾಯ್ದುಕೊಂಡು ಬಂದ ಸನ್‌ರೈಸರ್ ತಂಡ ಎಲಿಮಿನೇಟರ್‌ ಸುತ್ತಿನ ತನಕ ಸಾಗಿತ್ತು. ವಾರ್ನರ್‌ ಗೈರು ತಂಡಕ್ಕೆ ಭಾರೀ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ.ಇದರೊಂದಿಗೆ 2018ರ ಐಪಿಎಲ್‌ ತಂಡದ ನಾಯಕತ್ವದಿಂದ ಆಸ್ಟ್ರೇಲಿಯದ ಇಬ್ಬರು ನಾಯಕರನ್ನು ಈ ಹುದ್ದೆ ಯಿಂದ ಕೆಳಗಿಳಿಸಿದಂತಾಯಿತು. 

ಮಂಗಳವಾರವಷ್ಟೇ ಸ್ಟೀವನ್‌ ಸ್ಮಿತ್‌ ಅವರನ್ನು ರಾಜಸ್ಥಾನ್‌ ರಾಯಲ್ಸ್‌ ತಂಡದ ಕ್ಯಾಪ್ಟನ್ಸಿಯಿಂದ ಕೈಬಿಡಲಾಗಿತ್ತು. ಇವ ರಿಬ್ಬರೂ ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ಬಾಲ್‌ ಟ್ಯಾಂಪರಿಂಗ್‌ ಪ್ರಕರಣದ “ಪಾಲುದಾರ’ರಾಗಿದ್ದು, “ಕ್ರಿಕೆಟ್‌ ಆಸ್ಟ್ರೇಲಿಯ’ದಿಂದ ಒಂದು ವರ್ಷದ ನಿಷೇಧಕ್ಕೊಳಗಾಗಿದ್ದಾರೆ. 

ರಾಜಸ್ಥಾನ್‌ ಫ್ರಾಂಚೈಸಿ ಸ್ಟೀವನ್‌ ಸ್ಮಿತ್‌ ಅವರನ್ನು ಉಚ್ಚಾಟಿಸಿದ ಬೆನ್ನಲ್ಲೇ ಅಜಿಂಕ್ಯ ರಹಾನೆ ಅವರನ್ನು ನೂತನ ನಾಯಕನೆಂದು ಘೋಷಿಸಿತ್ತು. ಆದರೆ ಸನ್‌ರೈಸರ್ ಈ ಆಯ್ಕೆ ಯನ್ನು ಕಾದಿರಿಸಿದೆ. ಭಾರತೀಯ ನಾಯಕನಾದರೆ ಇದು ಶಿಖರ್‌ ಧವನ್‌ ಪಾಲಾಗುವ ಸಾಧ್ಯತೆ ಇದೆ. ವಿದೇಶಿ ಆಟಗಾರರಲ್ಲಿ ವಿಲಿಯಮ್ಸನ್‌, ಶಕಿಬ್‌ , ಬ್ರಾತ್‌ವೇಟ್‌ಮುಂಚೂಣಿಯಲ್ಲಿದ್ದಾರೆ.

ಟಾಪ್ ನ್ಯೂಸ್

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.