ಕೊಹ್ಲಿ,ರಾಹುಲ್,ರೋಹಿತ್ ಅಲ್ಲ: ಈ ಭಾರತೀಯ ಆಟಗಾರ ಪಾಕ್‌ಗೆ ಅಪಾಯಕಾರಿ: ವಾಸಿಂ ಅಕ್ರಂ
Team Udayavani, Aug 23, 2022, 6:30 PM IST
ನವದೆಹಲಿ: ಏಷ್ಯಾಕಪ್ ನ 15ನೇ ಆವೃತಿಗೆ ದಿನಗಣನೆ ಆರಂಭವಾಗಿದೆ. ಇಂಡೋ – ಪಾಕ್ ಹಣಾಹಣೆ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ನಾಯಕ, ವೇಗಿ ವಾಸಿಂ ಅಕ್ರಂ ಏಷ್ಯಾ ಕಪ್ ನಲ್ಲಿ ಬ್ಯಾಟ್ ನಿಂದ ಅಪಾಯಕಾರಿ ಆಟವನ್ನಾಡಿ ತಂಡಕ್ಕೆ ಸವಾಲಾಗುವ ಭಾರತೀಯ ಆಟಗಾರನ ಬಗ್ಗೆ ಮಾತಾನಾಡಿದ್ದಾರೆ.
ಸ್ಟಾರ್ ಸ್ಪೋಟ್ಸ್ ನ ಪ್ರತಿಕಾಗೋಷ್ಟಿಯಲ್ಲಿ ಮಾತಾನಾಡಿದ ಅವರು, ಈ ಬಾರಿ ಏಷ್ಯಾ ಕಪ್ ನಲ್ಲಿ ಭಾರತ ತಂಡಕ್ಕೆ ನಿರ್ಣಾಯ ಹಾಗೂ ಇತರ ತಂಡಗಳಿಗೆ ಅಪಾಯಕಾರಿಯಾಗಿ ಪರಿಣಮಿಸುವ ಆಟಗಾರನೆಂದರೆ ನನ್ನ ಪ್ರಕಾರ ಅದು ಸೂರ್ಯಕುಮಾರ್ ಯಾದವ್. ಅವರು 23 ಟಿ-20 ಪಂದ್ಯದಲ್ಲಿ 37.33 ಸರಾಸರಿಯಂತೆ, 5 ಅರ್ಧಶತಕ ಹಾಗೂ 1 ಶತಕದೊಂದಿಗೆ 672 ರನ್ ಗಳನ್ನು ಗಳಿಸಿದ್ದಾರೆ. ತಂಡದಲ್ಲಿ ರೋಹಿತ್ ಶರ್ಮಾ,ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ ಇದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ಟಿ-20 ಮಾದರಿಲ್ಲಿ ನನ್ನ ಮೆಚ್ಚಿನ ಆಟಗಾರನೆಂದರೆ ಅದು ಸೂರ್ಯಕುಮಾರ್ ಯಾದವ್. ನಾನು ಅವರನ್ನು ಕೆಕೆಆರ್ ತಂಡದಲ್ಲಿ ಆಯ್ಕೆಯಾದ ಶುರುವಿನ ದಿನಗಳಲ್ಲಿ ನೋಡಿದ್ದೇನೆ ಅವರೊಬ್ಬ ಅದ್ಭುತ ಆಟಗಾರ ಎಂದಿದ್ದಾರೆ.
ಭಾರತ ತಂಡಕ್ಕೆ ಬಂದಾಗಿನಿಂದ ಸೂರ್ಯಕುಮಾರ್ ಆಟ ಅಮೋಘವಾಗಿದೆ. ಸ್ಪಿನ್ನ್ ಹಾಗೂ ವೇಗದ ಬೌಲಿಂಗ್ ನಲ್ಲಿ ಅವರೊಬ್ಬ ಅಪಾಯಕಾರಿ ಆಟಗಾರ. ಒಮ್ಮೆ ಕ್ರೀಸ್ ನಲ್ಲಿ ಸೆಟ್ ಆಗಿ ನಿಂತರೆ ಅವರು, 360 ಡಿಗ್ರಿ ಮಾದರಿ ಆಟಗಾರ. ಪಾಕಿಸ್ತಾನಕ್ಕೆ ಮಾತ್ರ ಅಪಾಯಕಾರಿ ಆಟಗಾರನಲ್ಲ, ಏಷ್ಯಾಕಪ್ ನ ಉಳಿದ ತಂಡಕ್ಕೂ ಸೂರ್ಯಕುಮಾರ್ ಡೇಜರಸ್ ಪ್ಲೇಯರ್ ಎಂದು ವಾಸಿಂ ಅಕ್ರಂ ಹೇಳಿದರು.
ಏಷ್ಯಾಕಪ್ ಆ.27 ರಿಂದ ಆರಂಭವಾಗಲಿದೆ. ಭಾರತ ತನ್ನ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆ.28 ರಂದು ಆಡಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.