ಟಿ20 ವಿಶ್ವಕಪ್: ಅಭ್ಯಾಸದ ವೇಳೆ ಕೊಹ್ಲಿ ಕೈಗೆ ಏಟು: ಫ್ಯಾನ್ಸ್ ಗೆ ಶುರುವಾಯಿತು ಚಿಂತೆ
Team Udayavani, Nov 9, 2022, 7:55 PM IST
ಅಡಿಲೇಡ್: ನಾಳೆ ಟಿ-20 ವಿಶ್ವಕಪ್ ನ ಮಹತ್ವದ 2ನೇ ಸೆಮಿ ಫೈನಲ್ ನಲ್ಲಿ ಭಾರತ – ಇಂಗ್ಲೆಂಡ್ ತಂಡಗಳು ಸೆಣೆಸಾಟ ನಡೆಸಲಿದೆ. ಮೊದಲ ಸೆಮಿಯಲ್ಲಿ ಪಾಕ್ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟಿದೆ.
ಟೀಮ್ ಇಂಡಿಯಾ ಆಂಗ್ಲರ ವಿರುದ್ದ ಸೆಮಿ ಆಡಲು ನೆಟ್ ನಲ್ಲಿ ಭರ್ಜರಿ ತಯಾರಿಯನ್ನು ನಡೆಸುತ್ತಿದೆ. ಕೊಹ್ಲಿ, ಸೂರ್ಯಕುಮಾರ್, ರೋಹಿತ್ ಸೇರಿದಂತೆ ಪ್ರಮುಖ ಆಟಗಾರರು ನೆಟ್ ನಲ್ಲಿ ಬ್ಯಾಟಿಂಗ್ ಅಭ್ಯಾಸವನ್ನು ಮಾಡುತ್ತಿದ್ದಾರೆ. ರೋಹಿತ್ ಶರ್ಮಾ ಅವರಿಗೆ ಅಭ್ಯಾಸದ ವೇಳೆ ಕೈಗೆ ಏಟು ಬಿದ್ದಿತ್ತು. ಇದಾದ ಕೆಲವೇ ನಿಮಿಷದ ಬಳಿಕ ಅವರು ಚೇತರಿಸಿಕೊಂಡು ಮತ್ತೆ ಅಭ್ಯಾಸದಲ್ಲಿ ನಿರತರಾಗಿದ್ದರು.
ಈಗ ವಿರಾಟ್ ಕೊಹ್ಲಿ ಅವರಿಗೂ ಕೈಗೆ ಏಟಾಗಿದೆ. ಹರ್ಷಲ್ ಪಟೇಲ್ ಅವರು ನೆಟ್ ನಲ್ಲಿ ಬೌಲ್ ಮಾಡುತ್ತಿರುವಾಗ ಒಂದು ಎಸೆತ ವಿರಾಟ್ ಅವರ ಕೈ ಬೆರಳಿಗೆ ಬಂದು ಬಿದ್ದಿದೆ. ನೋವಾದ ಕಾರಣ ತಕ್ಷಣ ಕೊಹ್ಲಿ ಕುಳಿತುಕೊಂಡು ಕೈಯ ಏಟನ್ನು ನೋಡಿದ್ದಾರೆ. ಬೌಲ್ ಮಾಡುತ್ತಿದ್ದ ಹರ್ಷಲ್ ಕೂಡ ಗಾಬರಿಯಿಂದ ವಿರಾಟ್ ನತ್ತ ಧಾವಿಸಿದ್ದಾರೆ.
ಅದೃಷ್ಟಕ್ಕೆ ಯಾವುದೇ ಗಂಭೀರ ಸ್ವರೂಪದ ಏಟು ಬೀಳದ ಕಾರಣ ಅವರು ಮತ್ತೆ ನೆಟ್ ನಲ್ಲಿ ಕೆಲ ಸಮಯದ ಬಳಿಕ ಅಭ್ಯಾಸವನ್ನು ಆರಂಭಿಸಿದ್ದಾರೆ. ವಿರಾಟ್ ಕೈಗೆ ಏಟು ಬಿದ್ದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
SEMIFINAL से पहले KOHLI हुए चोटिल, HARSHAL PATEL की गेंद पर VIRAT को PRACTICE के दौरान लगी चोट#viratkohli #KingKohli #kohliinjury #practicematch pic.twitter.com/GYy1h6eGry
— wall18 (@wall18_) November 9, 2022
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.