ವಿಲಿಯಮ್ಸನ್ ಶತಕ: ರೋಚಕ ಘಟ್ಟದಲ್ಲಿ ವೆಲ್ಲಿಂಗ್ಟನ್ ಟೆಸ್ಟ್
Team Udayavani, Feb 28, 2023, 6:10 AM IST
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್-ಇಂಗ್ಲೆಂಡ್ ನಡುವಿನ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಕಿವೀಸ್ ಪಡೆ ಸರಣಿಯನ್ನು ಸಮಬಲಕ್ಕೆ ತರಲು ದಿಟ್ಟ ಹೋರಾಟ ನಡೆಸುತ್ತಿದೆ. ಗೆಲುವಿಗೆ 258 ರನ್ ಪಡೆದಿರುವ ಸ್ಟೋಕ್ಸ್ ಬಳಗ 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 48 ರನ್ ಮಾಡಿದೆ.
ಮಂಗಳವಾರ ಪಂದ್ಯದ ಅಂತಿಮ ದಿನ. ಇಂಗ್ಲೆಂಡ್ ಜಯಕ್ಕೆ ಇನ್ನೂ 210 ರನ್ ಅಗತ್ಯವಿದೆ. ಕಿವೀಸ್ ಬೌಲಿಂಗ್ ಮ್ಯಾಜಿಕ್ ಮಾಡಿ ಸರಣಿಯನ್ನು 1-1 ಸಮಬಲಕ್ಕೆ ತಂದೀತೇ ಅಥವಾ ಇಂಗ್ಲೆಂಡ್ ಎಚ್ಚರಿಕೆಯ ಬ್ಯಾಟಿಂಗ್ ಮೂಲಕ ಸರಣಿಯನ್ನು 2-0 ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಂಡೀತೇ ಎಂಬುದೊಂದು ಕುತೂಹಲ.
ವಿಲಿಯಮ್ಸನ್ 132
ಫಾಲೋಆನ್ ಪಡೆದ ನ್ಯೂಜಿಲ್ಯಾಂ ಡ್‌ಗೆ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಮೋಘ ಶತಕದ ಮೂಲಕ ರಕ್ಷಣೆ ಒದಗಿಸಿದರು. ಕೇನ್ ಕೊಡುಗೆ 132 ರನ್. 282 ಎಸೆತಗಳನ್ನು ನಿಭಾಯಿಸಿದ ಅವರು 12 ಬೌಂಡರಿ ಹೊಡೆದರು.
ಡ್ಯಾರಿಲ್ ಮಿಚೆಲ್ ಮತ್ತು ಕೀಪರ್ ಟಾಮ್ ಬ್ಲಿಂಡೆಲ್ ಕೂಡ ಉತ್ತಮ ಹೋರಾಟ ಸಂಘಟಿಸಿದರು. ಮಿಚೆಲ್ ಎಸೆತಕ್ಕೊಂದರಂತೆ 54 ರನ್ ಮಾಡಿದರೆ (5 ಬೌಂಡರಿ, 1 ಸಿಕ್ಸರ್), ಬ್ಲಿಂಡೆಲ್ 166 ಎಸೆತಗಳನ್ನು ಎದುರಿಸಿ 90 ರನ್ ಹೊಡೆದರು (9 ಬೌಂಡರಿ). ಇವರ ಶತಕಕ್ಕೆ ಜಾಕ್ ಲೀಚ್ ಅಡ್ಡಗಾಲಿಕ್ಕಿದರು. ಇವರೆಲ್ಲರ ಬ್ಯಾಟಿಂಗ್ ಹೋರಾಟದಿಂದ ನ್ಯೂಜಿಲ್ಯಾಂಡ್ ಒಂದು ಹಂತದಲ್ಲಿ 5 ವಿಕೆಟಿಗೆ 455 ರನ್ ಪೇರಿಸಿತ್ತು. ಆದರೆ 28 ರನ್ ಅಂತರದಲ್ಲಿ ಕೊನೆಯ 5 ವಿಕೆಟ್ ಉರುಳಿತು.ಜಾಕ್ ಲೀಚ್ 5 ವಿಕೆಟ್ ಕೆಡವಿ ಹೆಚ್ಚಿನ ಯಶಸ್ಸು ಸಾಧಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್-8 ವಿಕೆಟಿಗೆ 435 ಡಿಕ್ಲೇರ್ ಮತ್ತು ಒಂದು ವಿಕೆಟಿಗೆ 48. ನ್ಯೂಜಿಲ್ಯಾಂಡ್-209 ಮತ್ತು 483 (ವಿಲಿಯಮ್ಸನ್ 132, ಬ್ಲಿಂಡೆಲ್ 90, ಲ್ಯಾಥಂ 83, ಕಾನ್ವೇ 61, ಮಿಚೆಲ್ 54, ಲೀಚ್ 157ಕ್ಕೆ 5).
ವಿಲಿಯಮ್ಸನ್ ಗರಿಷ್ಠ ರನ್ ದಾಖಲೆ
ತಮ್ಮ 26ನೇ ಟೆಸ್ಟ್ ಶತಕದ ವೇಳೆ ಕೇನ್ ವಿಲಿಯಮ್ಸನ್ ನೂತನ ಮೈಲುಗಲ್ಲೊಂದನ್ನು ನೆಟ್ಟರು. ಅವರು ನ್ಯೂಜಿಲ್ಯಾಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಸರ್ವಾಧಿಕ ರನ್ ಬಾರಿಸಿದ ಆಟಗಾರನೆನಿಸಿದರು. ಈ ಸಂದರ್ಭದಲ್ಲಿ ರಾಸ್ ಟೇಲರ್ ದಾಖಲೆ ಪತನಗೊಂಡಿತು.
29 ರನ್ ಗಳಿಸಿದ ವೇಳೆ ಬ್ಯಾಟ್ ಮೇಲೆತ್ತುವ ಮೂಲಕ ವಿಲಿಯಮ್ಸನ್ ಸಂಭ್ರಮವನ್ನಾಚರಿಸಿದರು. ಆಗ ಟೇಲರ್ ಅವರ 7,683 ರನ್ ದಾಖಲೆಯನ್ನು ಕೇನ್ ಮೀರಿ ನಿಂತರು. ಸ್ಟೀಫನ್ ಫ್ಲೆಮಿಂಗ್ ತೃತೀಯ ಸ್ಥಾನದಲ್ಲಿದ್ದಾರೆ (7,172 ರನ್). ಇದು ವಿಲಿಯಮ್ಸನ್ ಅವರ 92ನೇ ಟೆಸ್ಟ್ ಪಂದ್ಯದ 161ನೇ ಇನ್ನಿಂಗ್ಸ್. ಟೇಲರ್‌ಗಿಂತ ಬೇಗ ಅವರು ಈ ಸಾಧನೆಗೈದರು. ಟೇಲರ್ 112 ಟೆಸ್ಟ್, 196 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಗರಿಷ್ಠ ಟೆಸ್ಟ್ ರನ್ ಸಾಧಕರ ಯಾದಿಯಲ್ಲಿ ವಿಲಿಯಮ್ಸನ್‌ಗೆ ಈಗ 35ನೇ ಸ್ಥಾನ.
ಗರಿಷ್ಠ ರನ್ ಸಾಧನೆಯ ಬಳಿಕ ರಾಸ್ ಟೇಲರ್ ವಿಲಿಯಮ್ಸನ್‌ಗೆ ಅಭಿನಂದನೆ ಸಲ್ಲಿಸಿದರು. “ಕಂಗ್ರಾಟ್ಸ್ ಕೇನ್. ಈ ಸಾಧನೆ ನಿಮ್ಮ ಕಠಿನ ದುಡಿಮೆ ಮತ್ತು ಬದ್ಧತೆಗೆ ಸಂದ ಪ್ರತಿಫಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.