![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Dec 3, 2022, 8:34 PM IST
ಪರ್ಥ್: ಪರ್ಥ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 498 ರನ್ನುಗಳ ಗೆಲುವಿನ ಗುರಿ ಪಡೆದಿದ್ದು, ಹೋರಾಟವೊಂದನ್ನು ಜಾರಿಯಲ್ಲಿರಿಸಿದೆ.
ನಾಯಕ ಕ್ರೆಗ್ ಬ್ರಾತ್‌ವೇಟ್ ಅವರ ಅಜೇಯ ಶತಕ ಸಾಹಸದಿಂದ 3 ವಿಕೆಟಿಗೆ 192 ರನ್ ಗಳಿಸಿದೆ. ಭಾನುವಾರ ಪಂದ್ಯದ ಅಂತಿಮ ದಿನವಾಗಿದ್ದು, ಕೆರಿಬಿಯನ್ ಪಡೆ ಕೆಲವು ವಿಕೆಟ್‌ಗಳನ್ನಾದರೂ ಉಳಿಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡೀತೇ ಎಂಬುದೊಂದು ಕುತೂಹಲ.
ಕ್ರೆಗ್ ಬ್ರಾತ್‌ವೇಟ್ 101 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ತೇಜ್‌ನಾರಾಯಣ್ ಚಂದರ್‌ಪಾಲ್ 45 ರನ್ ಮಾಡಿದರು. ಈ ಜೋಡಿಯಿಂದ ಮೊದಲ ವಿಕೆಟಿಗೆ 116 ರನ್ ಒಟ್ಟುಗೂಡಿತು. 315 ರನ್ ಲೀಡ್ ಪಡೆದರೂ ಫಾಲೋಆನ್ ಹೇರದೆ ಬ್ಯಾಟಿಂಗ್ ಮುಂದುವರಿಸಿದ ಕಾಂಗರೂ ಬಳಗ 2 ವಿಕೆಟಿಗೆ 182 ರನ್ ಪೇರಿಸಿ ಡಿಕ್ಲೇರ್ ಮಾಡಿತು. ಮಾರ್ನಸ್ ಲಬುಶೇನ್ 104 ರನ್ ಬಾರಿಸಿ ಸತತ 2ನೇ ಶತಕ ಸಂಭ್ರಮವನ್ನಾಚರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು 204 ರನ್ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-4 ವಿಕೆಟಿಗೆ 598 ಡಿಕ್ಲೇರ್ ಮತ್ತು 2 ವಿಕೆಟಿಗೆ 182 ಡಿಕ್ಲೇರ್. ವೆಸ್ಟ್ ಇಂಡೀಸ್-283 ಮತ್ತು 3 ವಿಕೆಟಿಗೆ 192.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.