West Indies: ಕಿವೀಸ್‌ಗೆ ಕಾದಿದೆ ವಿಂಡೀಸ್ ಟೆಸ್ಟ್
Team Udayavani, Jun 12, 2024, 11:20 PM IST
ಟರೂಬ: ಅಫ್ಘಾನಿಸ್ಥಾನ ವಿರುದ್ಧ 75ಕ್ಕೆ ಕುಸಿದು ಆಘಾತಕಾರಿ ಸೋಲುಂಡ ನ್ಯೂಜಿಲ್ಯಾಂಡ್‌ಗೆ ಗುರುವಾರ ವೆಸ್ಟ್ ಇಂಡೀಸ್ ಟೆಸ್ಟ್ ಕಾದಿದೆ. ಟರೂಬದಲ್ಲಿ ಈ ಪಂದ್ಯ ನಡೆಯಲಿದ್ದು, ಬೇಗನೇ ನಿರ್ಗಮಿಸುವ ಸಂಕಟದಿಂದ ಪಾರಾಗಬೇಕಾದರೆ ಕೇನ್ ವಿಲಿಯಮ್ಸನ್ ಪಡೆ ಇಲ್ಲಿ ಗೆಲ್ಲುವುದು ಅನಿವಾರ್ಯ.
“ಸಿ’ ವಿಭಾಗದಲ್ಲಿ ಅಫ್ಘಾನಿಸ್ಥಾನ ಮತ್ತು ವೆಸ್ಟ್ ಇಂಡೀಸ್ ಆಡಿದ ಎರಡೂ ಪಂದ್ಯ ಗಳನ್ನು ಗೆದ್ದು ಮುಂದಿನ ಸುತ್ತಿಗೇರುವ ನೆಚ್ಚಿನ ತಂಡಗಳಾಗಿ ಗೋಚರಿಸುತ್ತಿವೆ. 5.225ರಷ್ಟು ಉತ್ಕೃಷ್ಟ ರನ್‌ರೇಟ್ ಹೊಂದಿರುವ ಕಾರಣ ಅಫ್ಘಾನ್ ಅಗ್ರಸ್ಥಾನ ಅಲಂಕರಿಸಿದೆ. ಈ ಕೂಟ ದಲ್ಲಿ ಐದಕ್ಕಿಂತ ಹೆಚ್ಚಿನ ರನ್‌ರೇಟ್ ಹೊಂದಿರುವ ಮತ್ತೂಂದು ತಂಡವಿಲ್ಲ. ವಿಂಡೀಸ್ ರನ್‌ರೇಟ್ 3.574.
ಏಕದಿನ ಸೇರಿದಂತೆ ಕಳೆದ ಆರೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ನ್ಯೂಜಿಲ್ಯಾಂಡ್‌ನದ್ದು ಈ ಬಾರಿ ಆಘಾತಕಾರಿ ಆರಂಭ. ಆದರೆ ಟಿ20 ಸ್ಪೆಷಲಿಸ್ಟ್ ಗಳನ್ನು ಹೊಂದಿರುವ ಅದಿನ್ನೂ 3 ಪಂದ್ಯಗಳನ್ನು ಆಡಲಿಕ್ಕಿದೆ. ಮೂರನ್ನೂ ಗೆದ್ದರೆ ಸೂಪರ್-8 ಟಿಕೆಟ್ ಸಿಗಲಿದೆ. ಆದರೆ ಆತಂಕಕ್ಕೆ ಕಾರಣವಾಗಿರುವುದು, ಅಫ್ಘಾನ್ ವಿರುದ್ಧ ಆಡಿದ ರೀತಿ.
ಅಫ್ಘಾನ್ ವಿರುದ್ಧ ನ್ಯೂಜಿಲ್ಯಾಂಡ್‌ನ
ಬ್ಯಾಟಿಂಗ್ ಮಾತ್ರವಲ್ಲ, ಫೀಲ್ಡಿಂಗ್ ಕೂಡ ಕಳಪೆ ಆಗಿತ್ತು. ಸ್ಟಂಪಿಂಗ್, ರನೌಟ್ ಅವಕಾಶಗಳನ್ನೂ ವ್ಯರ್ಥಗೊಳಿ ಸಿತ್ತು. ಗುರ್ಬಜ್-ಜದ್ರಾನ್ ಆರಂಭಿಕ ವಿಕೆಟಿಗೆ 103 ರನ್ ಪೇರಿಸಿ ಮೆರೆದಿದ್ದರು.
ವಿಂಡೀಸ್‌ಗೂ ದೊಡ್ಡ ಪಂದ್ಯ
ವೆಸ್ಟ್ ಇಂಡೀಸ್ ಈವರೆಗೆ ಎದುರಿಸಿದ್ದು ಪಪುವಾ ನ್ಯೂ ಗಿನಿಯ (ಪಿಎನ್‌ಜಿ) ಮತ್ತು ಉಗಾಂಡದಂಥ ಸಾಮಾನ್ಯ ತಂಡಗಳನ್ನು ಮಾತ್ರ. ಪಿಎನ್‌ಜಿ ವಿರುದ್ಧ ಸಾಕಷ್ಟು ಪರದಾಟ ನಡೆಸಿ ಜಯಿಸಿತ್ತು. ಆದರೆ ಉಗಾಂಡ ವಿರುದ್ಧ 134 ರನ್ನುಗಳ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಉಗಾಂಡವನ್ನು 39 ರನ್ನಿಗೆ ಉದುರಿಸಿದ ವಿಂಡೀಸ್‌ಗೆ ಮೊದಲ ಸಲ ಕಠಿನ ಸವಾಲು ಎದುರಾಗಿದೆ ಎನ್ನಬಹುದು. ಗೆದ್ದರೆ ಪೊವೆಲ್ ಪಡೆ ಮುಂದಿನ ಸುತ್ತು ಪ್ರವೇಶಿಸಲಿದೆ. ಒಂದು ವೇಳೆ ನ್ಯೂಜಿಲ್ಯಾಂಡ್ ಲಯಕ್ಕೆ ಮರಳಿದರೆ ಸ್ಪರ್ಧೆ ತೀವ್ರಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.