ದೈತ್ಯ ಶಕ್ತಿಯಾಗಿ ರೂಪುಗೊಳ್ಳುತ್ತಿದೆ ವಿಂಡೀಸ್: ಐತಿಹಾಸಿಕ ವಿಜಯಕ್ಕೆ ಒಂದೇ ಮಟ್ಟಿಲು!
Team Udayavani, Jul 16, 2020, 10:30 AM IST
ಕಳೆದ 32 ವರ್ಷಗಳಿಂದ, ಅಂದರೆ 1988ರ ಬಳಿಕ ಕೆರಿಬಿಯನ್ನರಿಗೆ ಆಂಗ್ಲರ ನೆಲದಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ದೊಡ್ಡದೊಂದು ಕೊರಗು ಕಾಡುತ್ತಲೇ ಇತ್ತು ಇದೀಗ ಜಾಸನ್ ಹೋಲ್ಡರ್ ಪಡೆ ಇದನ್ನು ನೀಗಿಸಿಕೊಳ್ಳಲು ಮುಂದಾಗಿದೆ. ಹೌದು… ಕೋವಿಡ್ ಕಾಲದ ಮೊದಲ ಸೌತಾಂಪ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಪ್ರವಾಸಿ ವೆಸ್ಟ್ ಇಂಡೀಸ್ 4 ವಿಕೆಟ್‌ಗಳಿಂದ ಹೆಡೆಮುರಿ ಕಟ್ಟಿದೆ. ಮೂರು ಪಂದ್ಯಗಳ ಟೆಸ್ಟ್ ಸರಯಲ್ಲಿ 1-0 ಮುನ್ನಡೆ ಸಾಧಿಸಿಕೊಂಡಿರುವ ವಿಂಡೀಸ್ ಈಗ ಪೂರ್ಣ ಸರಣಿ ಜಯಿಸುವ ಆತ್ಮವಿಶ್ವಾಸದಲ್ಲಿದ್ದು ದೈತ್ಯ ತಂಡವಾಗಿ ರೂಪುಗೊಳ್ಳುವ ಸೂಚನೆಯೊಂದನ್ನು ನೀಡಿದೆ.
ಭಾನುವಾರ ತಡರಾತ್ರಿ ಹೊರಬಂದ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶದಲ್ಲಿ ಆತಿಥೇಯರನ್ನು ನೆಲಕ್ಕುರುಳಿಸಿದ್ದ ಕೆರಿಬಿಯನ್ಸ್ ಹೊಸ ಇತಿಹಾಸವೊಂದನ್ನು ಬರೆಯುವ ಹೊಸ್ತಿಲಲ್ಲಿದ್ದಾರೆ. ಹೌದು, ಬಾಕಿ ಉಳಿದಿರುವ 2 ಟೆಸ್ಟ್ ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಸಾಕು ಆಂಗ್ಲರ ನೆಲದಲ್ಲಿ ಟೆಸ್ಟ್ ಗೆದ್ದ ಐತಿಹಾಸಿಕ ಸಾಧನೆಗೆ ವಿಂಡೀಸ್ ಪಾತ್ರವಾಗಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿರುವುದರಿಂದ ಸುಲಭವಾಗಿಯೇ ವಿಂಡೀಸ್ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿದಂತಾಗಿದೆ. ಇಂದಿನಿಂದ ಮ್ಯಾಂಚೆಸ್ಟರ್‌ನಲ್ಲಿ 2ನೇ ಟೆಸ್ಟ್ ನಡೆಯಲಿದ್ದು ಅಲ್ಲೂ ಇದೇ ಪ್ರದರ್ಶನವನ್ನೂ ಮುಂದುವರಿಸುವ ವಿಶ್ವಾಸವನ್ನು ವಿಂಡೀಸ್ ನಾಯಕ ಜಾಸನ್ ಹೋಲ್ಡರ್ ಹೊಂದಿದ್ದಾರೆ.
ಸಣ್ಣ ಸಾಧನೆಯಲ್ಲ!
ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೋವಿಡ್ ವೈರಸ್‌ನಿಂದಾಗಿ ವಿಶ್ವದಾದ್ಯಂತ ಕ್ರಿಕೆಟ್ ಚಟುವಟಿಕೆಗಳು ನಿಂತು ಹೋಗಿದ್ದವು. ಇಂತಹ ಕ್ಲಿಷ್ಟಕರವಾದ ಸಂದರ್ಭದಲ್ಲಿ ಆಟಗಾರರು ಮೈದಾನಕ್ಕೆ ಇಳಿದಾಗ ಫಿಟ್ನೆಸ್ ಸಮಸ್ಯೆಗಳು ಎದುರಾಗಬಹುದು, ಕಳಪೆ ಫಾರ್ಮ್ ಪ್ರದರ್ಶಿಸಿದರೆ ಕ್ರಿಕೆಟ್‌ನ ಗುಣಮಟ್ಟ ಕುಸಿಯಬಹುದು. ಅದರಲ್ಲೂ ಟೆಸ್ಟ್ ಕ್ರಿಕೆಟ್ ಐದು ದಿನದ ಆಟ, ಕ್ರಿಕೆಟಿಗರ ಸಾಮರ್ಥ್ಯಕ್ಕೆ ಪರೀಕ್ಷೆ ಎದುರಾಗಬಹುದು ಎನ್ನುವ ಚರ್ಚೆಗಳು ಕೂಡ ನಡೆದಿದ್ದವು. ಇವೆಲ್ಲವನ್ನು ಮೀರಿ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಆಂಗ್ಲರನ್ನು ಅವರದ್ದೇ ನೆಲದಲ್ಲಿ ಸೋಲಿಸಿದರು. ಇದು ಸಣ್ಣ ಸಾಧನೆಯಲ್ಲ, ಇಂಗ್ಲೆಂಡ್ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸುವುದು ಅಷ್ಟು ಸುಲಭದ ವಿಷಯವಲ್ಲ. ಪ್ರಮುಖ ಆಟಗಾರರ ಅನುಪಸ್ಥಿತಿ ಹೊರತಾಗಿಯೂ ಹೋಲ್ಡರ್ ನಾಯಕತ್ವದಲ್ಲಿ ಪ್ರಚಂಡ ಸಾಧನೆ ಮೂಡಿ ಬಂದಿರುವುದು ವಿಶೇಷ.
ಕೆರಿಬಿಯನ್ನರದ್ದು ಸೊಗಸಾದ ಆಟ
ತಂಡವೊಂದು ಸ್ವದೇಶದಲ್ಲಿ ಆಡುವುದು ಹಾಗೂ ವಿದೇಶಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಆಡುವುದು ಇದೆರಡರ ನಡುವೆ ಅಜಗಜಾಂತರವಿದೆ. ಎಷ್ಟೋ ಸಲ ಇದು ಹೌದು ಎನ್ನುವುದು ಸಾಬೀತಾಗಿರುವ ಅನೇಕ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಆತಿಥೇಯ ತಂಡ ಪಿಚ್ ಅನ್ನು ತನಗಿಷ್ಟ ಬಂದಂತೆ ಸಿದ್ಧಪಡಿಸಿಕೊಂಡಿರುತ್ತದೆ, ಇದರಿಂದ ಪ್ರವಾಸಿ ತಂಡಗಳು ಸಂಕಷ್ಟಕ್ಕೆ ಈಡಾಗುವ ಎಲ್ಲ ಸಾಧ್ಯತೆಗಳು ಇರುತ್ತವೆ. ಅಂತಹುದೇ ಸನ್ನಿವೇಶ ಸೌತಾಂಪ್ಟನ್‌ನಲ್ಲೂ ಇತ್ತು. ಆದರೆ ವಿಂಡೀಸ್ ಹುಡುಗರು ಸಲೀಸಾಗಿ ಜವಾಬ್ದಾರಿ ನಿರ್ವಹಿಸಿದರು, ವಿಂಡೀಸ್ ತಂಡವನ್ನು ಅನಾಯಾಸವಾಗಿ ಗೆಲ್ಲಿಸಿದರು. ಲಾಕ್‌ಡೌನ್ ಇದ್ದರೂ ಕ್ರಿಕೆಟ್ ಮರೆತಿಲ್ಲ, ಕ್ರಿಕೆಟ್ ರಕ್ತದಲ್ಲೇ ಕರಗತವಾಗಿದೆ ಎನ್ನುವುದು ವಿಂಡೀಸ್ ತಂಡ ನಿರೂಪಿಸಿ ತೋರಿಸಿತು.
ಬೌಲಿಂಗ್‌ನಲ್ಲಿ ಜಾಸನ್ ಹೋಲ್ಡರ್, ಶಾನಾನ್ ಗ್ಯಾಬ್ರಿಯಲ್ ಮೊನಚು ಕಳೆದುಕೊಂಡಿಲ್ಲ. ಲಾಕ್‌ಡೌನ್ ಬಳಿಕ ಮತ್ತಷ್ಟು ಹರಿತಗೊಂಡಿದೆ ಎನ್ನುವುದು ಎದ್ದು ಕಂಡಿದೆ. ಬ್ಯಾಟಿಂಗ್‌ನಲ್ಲಿ ಜೆರ್ಮೆನ್ ಬ್ಲ್ಯಾಕ್‌ವುಡ್ ಎರಡನೇ ಇನಿಂಗ್ಸ್‌ನಲ್ಲಿ ಮಾಡಿದ ಸಾಹಸ ನೋಡಿದರೆ ವಿಂಡೀಸ್ ಬ್ಯಾಟಿಂಗ್ ಕೆಳ ಕ್ರಮಾಂಕದವರೆಗೆ ಭದ್ರವಾಗಿದೆ ಎನ್ನುವ ಸೂಚನೆ ದೊರಕಿದೆ. ಒಟ್ಟಾರೆಯಾಗಿ ವಿಂಡೀಸ್ ತಂಡ ಇನ್ನುಳಿದ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೆ ಇತಿಹಾಸ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಜತೆಗೆ ಕೆಲ ವರ್ಷಗಳಿಂದ ಕ್ರಿಕೆಟ್ ಎಂದರೆ ಮೋಜು ಮಸ್ತಿಯಂತೆ ಆಡುತ್ತಿದ್ದ ವಿಂಡೀಸ್ ಇದೀಗ 2020ರ ಕೋವಿಡ್ ಯುಗದಲ್ಲಿ ಹೊಸ ಆಟಗಾರರು ಮತ್ತು ಹೊಸ ಆಲೋಚನೆಯೊಂದಿಗೆ ಕಣಕ್ಕಿಳಿದಿದ್ದು 80ರ ದಶಕದ ವಿಂಡೀಸ್ ತಂಡವನ್ನು ಮತ್ತೆ ಕ್ರಿಕೆಟ್ ವಲಯದಲ್ಲಿ ಗುರುತಿಸುವಂತೆ ಮಾಡಲು ಮುಂದಾಗಿದ್ದಾರೆ ಎನ್ನುವ ಎಚ್ಚರಿಕೆಯೊಂದನ್ನು ಹೋಲ್ಡರ್ ಪಡೆ ನೀಡಿದೆ ಎಂದರು ತಪ್ಪಾಗಲಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಬೆಂಗಳೂರು ಬುಲ್ಸ್ ಗೆ 18ನೇ ಸೋಲು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.