ವಿಂಡೀಸ್ ತಂಡದಲ್ಲಿ ಇನ್ನೂ 5 ಕೋವಿಡ್ ಕೇಸ್: ಏಕದಿನ ಸರಣಿ ಮುಂದಕ್ಕೆ
Team Udayavani, Dec 17, 2021, 6:26 AM IST
ಕರಾಚಿ: ಪಾಕಿಸ್ಥಾನ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲಿ ಇನ್ನೂ 5 ಕೊರೊನಾ ಕೇಸ್ ಕಂಡುಬಂದ ಕಾರಣ 3 ಪಂದ್ಯಗಳ ಏಕದಿನ ಸರಣಿಯನ್ನು 2022ರ ಜೂನ್ ತಿಂಗಳಿಗೆ ಮುಂದೂಡಲಾಗಿದೆ. ಗುರುವಾರದ 3ನೇ ಟಿ20 ಪಂದ್ಯದೊಂದಿಗೆ ಈ ಸರಣಿ ಕೊನೆಗೊಂಡಿದೆ ಎಂಬುದಾಗಿ ಎರಡೂ ಮಂಡಳಿಗಳು ಜಂಟಿ ಪ್ರಕಟನೆ ಹೊರಡಿಸಿವೆ.
ಗುರುವಾರ ವೆಸ್ಟ್ ಇಂಡೀಸ್ ತಂಡದ ಮೂವರು ಆಟಗಾರರಲ್ಲಿ, ಇಬ್ಬರು ಸಹಾಯಕ ಸಿಬಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂತು. ವಿಕೆಟ್ ಕೀಪರ್ ಶೈ ಹೋಪ್, ಸ್ಪಿನ್ನರ್ ಅಖೀಲ್ ಹೊಸೇನ್ ಮತ್ತು ಆಲ್‌ರೌಂಡರ್ ಜಸ್ಟಿನ್ ಗ್ರೀವ್ಸ್ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇವರ ಸಾಲಿಗೆ ಸಹಾಯಕ ಕೋಚ್ ರಾಡಿ ಎಸ್ಟ್‌ವಿಕ್ ಮತ್ತು ಫಿಸಿಯೋ ಅಕ್ಷಯ್ ಮಾನ್‌ಸಿಂಗ್ ಕೂಡ ಸೇರಿದ್ದಾರೆ.
ಇದಕ್ಕೂ ಮುನ್ನ ವೇಗಿ ಶೆಲ್ಡನ್ ಕಾಟ್ರೆಲ್, ಆಲ್‌ರೌಂಡರ್‌ಗಳಾದ ರೋಸ್ಟನ್ ಚೇಸ್ ಮತ್ತು ಕೈಲ್ ಮೇಯರ್ ಅವರಿಗೂ ಕೊರೊನಾ ಅಂಟಿತ್ತು. ಇದರೊಂದಿಗೆ ವಿಂಡೀಸ್ ತಂಡದ ಕೊರೊನಾಪೀಡಿತರ ಸಂಖ್ಯೆ ಆರಕ್ಕೆ ಏರಿದೆ. ಎಲ್ಲರೂ 10 ದಿನಗಳ ಕಾಲ ಅಥವಾ ನೆಗೆಟಿವ್ ಫಲಿತಾಂಶ ಬರುವ ತನಕ ಐಸೊಲೇಶನ್‌ನಲ್ಲಿ ಇರಬೇಕಾಗುತ್ತದೆ. ಕೊರೊನಾ ಆಘಾತದ ಹೊರತಾಗಿಯೂ ಇತ್ತಂಡಗಳ ನಡುವಿನ 3ನೇ ಟಿ20 ಪಂದ್ಯ ಗುರುವಾರ ಕರಾಚಿಯಲ್ಲಿ ಆರಂಭಗೊಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 3 ವಿಕೆಟಿಗೆ 207 ರನ್ ಪೇರಿಸಿ ಸವಾಲೊಡ್ಡಿದೆ. ಪಾಕ್ ಮೊದಲ ಎರಡೂ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.