ಕೆರಿಬಿಯನ್ನರ ವಿರುದ್ಧ ಬಾಂಗ್ಲಾ ಪರಾಕ್ರಮ

Team Udayavani, Aug 7, 2018, 6:00 AM IST

ap862018000026b.jpg

ಲೌಡರ್‌ಹಿಲ್‌ (ಯುಎಸ್‌ಎ): ಮಳೆಯಿಂದ ಅಡಚಣೆಗೊಳಗಾದ ವೆಸ್ಟ್‌ ಇಂಡೀಸ್‌ ಎದುರಿನ ಅಂತಿಮ ಟಿ20 ಪಂದ್ಯವನ್ನು ಡಿ-ಎಲ್‌ ನಿಯಮದಂತೆ 19 ರನ್ನುಗಳಿಂದ ಗೆದ್ದ ಬಾಂಗ್ಲಾದೇಶ 3 ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗಿಗೆ ಇಳಿದ ಬಾಂಗ್ಲಾದೇಶ 5 ವಿಕೆಟಿಗೆ 184 ರನ್‌ ಪೇರಿಸಿ ಸವಾಲೊಡ್ಡಿತು. ಆದರೆ ವೆಸ್ಟ್‌ ಇಂಡೀಸ್‌ ಚೇಸಿಂಗಿಗೆ ವೇಳೆ ಮಳೆ ಅಡ್ಡಿಯಾಯಿತು. 17.1ನೇ ಓವರ್‌ ವೇಳೆ ಸುರಿದ ಮಳೆ ಮತ್ತೆ ಆಟವನ್ನು ಮುಂದುವರಿಸಲು ಅವಕಾಶ ನೀಡಲಿಲ್ಲ. ಆಗ ವಿಂಡೀಸ್‌ 7 ವಿಕೆಟಿಗೆ 135 ರನ್‌ ಮಾಡಿತ್ತು. ಡಕ್‌ವರ್ತ್‌-ಲೂಯಿಸ್‌ ನಿಯದ ಪ್ರಕಾರ ಈ ಅವಧಿಯಲ್ಲಿ ಕೆರಿಬಿಯನ್‌ ಪಡೆ 155 ರನ್‌ ಗಳಿಸಬೇಕಿತ್ತು.

ದಾಸ್‌ ಜೀವನಶ್ರೇಷ್ಠ ಬ್ಯಾಟಿಂಗ್‌
ಬಾಂಗ್ಲಾದ ಬೃಹತ್‌ ಮೊತ್ತಕ್ಕೆ ಕಾರಣರಾದವರು ಆರಂಭಕಾರ ಲಿಟನ್‌ ದಾಸ್‌. ಅವರು ಜೀವನಶ್ರೇಷ್ಠ 61 ರನ್‌ ಬಾರಿಸಿದರು (32 ಎಸೆತ, 6 ಬೌಂಡರಿ, 3 ಸಿಕ್ಸರ್‌).

ದಾಸ್‌-ತಮಿಮ್‌ ಇಕ್ಬಾಲ್‌ 4.4 ಓವರ್‌ಗಳಿಂದ 61 ರನ್‌ ಪೇರಿಸಿ ಭರ್ಜರಿ ಆರಂಭ ಒದಗಿಸಿದರು. ಬಾಂಗ್ಲಾ ಟಿ20 ಇತಿಹಾಸದಲ್ಲಿ ಆರಂಭಿಕ ವಿಕೆಟಿಗೆ ಅತೀ ವೇಗದಲ್ಲಿ 50 ರನ್‌ ಪೇರಿಸಿದ ದಾಖಲೆಯನ್ನೂ ಇವರು ಬರೆದರು (21 ಎಸೆತ). ಕೊನೆಯ ಗಳಿಗೆಯಲ್ಲಿ ಸಿಡಿದ ಮಹಮದುಲ್ಲ ಅಜೇಯ 32 ರನ್‌ ಹೊಡೆದರು (20 ಎಸೆತ, 4 ಬೌಂಡರಿ, 1 ಸಿಕ್ಸರ್‌). ಮಹಮದುಲ್ಲ-ಅರೀಫ್ ಉಲ್‌ ಹಕ್‌ (ಔಟಾಗದೆ 18) ಅಂತಿಮ 4 ಓವರ್‌ಗಳಲ್ಲಿ 38 ರನ್‌ ಸೂರೆಗೈದುದರಿಂದ ಬಾಂಗ್ಲಾ ಬೊಂಬಾಟ್‌ ಸ್ಕೋರ್‌ ದಾಖಲಿಸಿತು.

ಸಿಡಿದು ನಿಂತ ರಸೆಲ್‌
ಚೇಸಿಂಗ್‌ ವೇಳೆ ವೆಸ್ಟ್‌ ಇಂಡೀಸ್‌ ಎಡಗೈ ಮಧ್ಯಮ ವೇಗಿ ಮುಸ್ತಫಿಜುರ್‌ ದಾಳಿಗೆ ಸಿಲುಕಿತು (31ಕ್ಕೆ 3). ಆ್ಯಂಡ್ರೆ ಫ್ಲೆಚರ್‌ (6), ಸಾಮ್ಯುಯೆಲ್ಸ್‌ (2) ಬೇಗನೇ ಔಟಾದದ್ದು ದೊಡ್ಡ ಹೊಡೆತ ನೀಡಿತು. ರಿಕಾರ್ಡೊ ಪೊವೆಲ್‌ (23), ದಿನೇಶ್‌ ರಾಮದಿನ್‌ (21), ಚಾಡ್ವಿಕ್‌ ವಾಲ್ಟನ್‌ (19) ಕೂಡ ಕ್ರೀಸ್‌ ಆಕ್ರಮಿಸಲು ವಿಫ‌ಲರಾದರು.

ಈ ಹಂತದಲ್ಲಿ ಸಿಡಿದು ನಿಂತ ಆ್ಯಂಡ್ರೆ ರಸೆಲ್‌ ಬಾಂಗ್ಲಾ ಬೌಲರ್‌ಗಳ ಮೇಲೆರಗಿ ಹೋದರು. ಕೇವಲ 21 ಎಸೆತಗಳಿಂದ 47 ರನ್‌ ಸಿಡಿಸಿನ ಭೀತಿಯೊಡ್ಡಿದರು (6 ಸಿಕ್ಸರ್‌, 1 ಬೌಂಡರಿ). ಆದರೆ 17.1ನೇ ಓವರಿನಲ್ಲಿ ರಸೆಲ್‌ ವಿಕೆಟ್‌ ಬಿದ್ದೊಡನೆಯೇ ಮಳೆ ಆರಂಭಗೊಂಡಿತು. ಪಂದ್ಯ ಇಲ್ಲಿಗೇ ನಿಂತಿತು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-5 ವಿಕೆಟಿಗೆ 184 (ಲಿಟನ್‌ ದಾಸ್‌ 61, ಮಹಮದುಲ್ಲ ಔಟಾಗದೆ 32, ಪೌಲ್‌ 26ಕ್ಕೆ 2, ಬ್ರಾತ್‌ವೇಟ್‌ 32ಕ್ಕೆ 2). ವೆಸ್ಟ್‌ ಇಂಡೀಸ್‌-17.1 ಓವರ್‌ಗಳಲ್ಲಿ 7 ವಿಕೆಟಿಗೆ 135 (ರಸೆಲ್‌ 47, ಪೊವೆಲ್‌ 23, ಮುಸ್ತಫಿಜುರ್‌ 31ಕ್ಕೆ 3). ಪಂದ್ಯಶ್ರೇಷ್ಠ: ಲಿಟನ್‌ ದಾಸ್‌. ಸರಣಿಶ್ರೇಷ್ಠ: ಶಕಿಬ್‌ ಅಲ್‌ ಹಸನ್‌.

ಟಾಪ್ ನ್ಯೂಸ್

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್‌ ನಾಮಿನೇಷನ್‌ ವೋಟಿಂಗ್ ವಿಸ್ತರಣೆ

4-aryabhata

ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು

3-koratagere

Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್‌ ಮಾಡಿದ ಯಶ್‌ ʼಟಾಕ್ಸಿಕ್‌ʼ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.