1st T20 ; ಭಾರತಕ್ಕೆ ಸೋಲಿನ ಶಾಕ್: ವೆಸ್ಟ್ ಇಂಡೀಸ್ ಗೆ 4 ರನ್ ಗಳ ರೋಚಕ ಜಯ

Team Udayavani, Aug 4, 2023, 7:00 AM IST

1-dassad

ಟರೂಬ: ಐದು ಪಂದ್ಯಗಳ ಟಿ20 ಸರಣಿಯ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವು ಪ್ರವಾಸಿ ಭಾರತ ತಂಡದೆದುರು 4 ರನ್ ಗಳ ರೋಚಕ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡ ನಿಕೋಲಾಸ್‌ ಪೂರಣ್‌ ಮತ್ತು ರೋಮನ್‌ ಪೊವೆಲ್‌ ಅವರ ತಾಳ್ಮೆಯ ಆಟದಿಂದಾಗಿ 6 ವಿಕೆಟಿಗೆ 149 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಆರಂಭಿಕರಾದ ಬ್ರ್ಯಾಂಡನ್‌ ಕಿಂಗ್‌ ಮತ್ತು ಕೈಲ್‌ ಮೇಯರ್ ಎಚ್ಚರಿಕೆಯಿಂದ ಆಡಿ ಮೊದಲ ವಿಕೆಟಿಗೆ 29 ರನ್‌ ಪೇರಿಸಿದರು. ಈ ಜೋಡಿ ಮುರಿದ ಬಳಿಕ ತಂಡ ಇನ್ನೆರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ಮೇಯರ್ ಮತ್ತು ಜಾನ್ಸನ್‌ ಚಾರ್ಲ್ಸ್‌ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫ‌ಲರಾದರು.

ಆಬಳಿಕ ಬಂದ ನಾಯಕ ರೋಮನ್‌ ಪೊವೆಲ್‌ ಮತ್ತು ನಿಕೋಲಾಸ್‌ ಪೂರಣ್‌ ಜವಾಬ್ದಾರಿಯಿಂದ ಆಡಿ ದ್ದರಿಂದ ತಂಡ ಸ್ವಲ್ಪಮಟ್ಟಿಗೆ ಚೇತರಿ ಸಿಕೊಂಡಿತು. ಇವರಿಬ್ಬರು ಭಾರತೀಯ ದಾಳಿಯನ್ನು ದಿಟ್ಟವಾಗಿ ಎದುರಿಸಿ ರನ್‌ ಪೇರಿಸಲು ಪ್ರಯತ್ನಿಸಿದರು. ಅವರಿಬ್ಬರು ನಾಲ್ಕನೇ ವಿಕೆಟಿಗೆ 38 ರನ್‌ ಪೇರಿಸಿ ಬೇರ್ಪಟ್ಟರು. 34 ಎಸೆತ ಎದುರಿಸಿದ ಪೂರಣ್‌ 41 ರನ್‌ ಹೊಡೆದರು. 2 ಬೌಂಡರಿ ಮತ್ತು 2 ಸಿಕ್ಸರ್‌ ಹೊಡೆದರು. ಅವರಿಗೆ ಉತ್ತಮ ನೆರವು ನೀಡಿದ ಪೊವೆಲ್‌ 32 ಎಸೆತಗಳಿಂದ 48 ರನ್‌ ಗಳಿಸಿ ಔಟಾದರು. 3 ಬೌಂಡರಿ ಮತ್ತು 3 ಸಿಕ್ಸರ್‌ ಸಿಡಿಸಿದರು.

ಈ ಪ್ರವಾಸದಲ್ಲಿ ಮೊದಲ ಪಂದ್ಯ ವನ್ನಾಡಿದ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಹಲ್‌ 24 ರನ್ನಿಗೆ 2 ವಿಕೆಟ್‌ ಪಡೆದರು. ಅರ್ಷದೀಪ್‌ ಸಿಂಗ್‌ 31 ರನ್ನಿಗೆ 2 ವಿಕೆಟ್‌ ಉರುಳಿಸಿದರು.

ಗುರಿ ಬೆನ್ನಟ್ಟಿದ ಭಾರತ 5 ರನ್ ಆಗುವಷ್ಟರಲ್ಲಿ ಗಿಲ್ ಅವರ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಇಶಾನ್ ಕಿಶನ್ 6 ರನ್ ಗಳಿಗೆ ಔಟಾದರು. ಸೂರ್ಯಕುಮಾರ್ ಯಾದವ್ 21, ತಿಲಕ್ ವರ್ಮಾ 39 ರನ್ ಗಳಿಸಿದರು ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. 19 ರನ್ ಗಳಿಸಿದ್ದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಹೋಲ್ಡರ್ ಕ್ಲೀನ್ ಬೌಲ್ಡ್ ಮಾಡಿದರು. ಸಂಜು ಸ್ಯಾಮ್ಸನ್ 12, ಅಕ್ಷರ್ ಪಟೇಲ್ 13, ಕುಲದೀಪ್ ಯಾದವ್ 3, ಅರ್ಷದೀಪ್ ಸಿಂಗ್ 12 ರನ್ ಗಳಿಸಿದ್ದ ವೇಳೆ ರನೌಟ್ ಆದರು.

ರೊಮಾರಿಯೋ ಶೆಫರ್ಡ್ ಎಸೆದ ಕೊನೆಯ ಓವರ್ ನಲ್ಲಿ ಗೆಲ್ಲಲು 10 ರನ್ ಅಗತ್ಯವಿತ್ತು. ಭಾರತ 2 ವಿಕೆಟ್ ಕಳೆದುಕೊಂಡಿತು, 5 ರನ್ ಮಾತ್ರ ಗಳಿಸಲು ಶಕ್ತವಾಯಿತು. ಯುಜುವೇಂದ್ರ ಚಾಹಲ್ 1 ರನ್ ಗಳಿಸಿ ಔಟಾಗದೆ ಉಳಿದರು, ಕೊನೆಯ ಎಸೆತದಲ್ಲಿ 6 ರನ್ ಅಗತ್ಯವಿತ್ತು , ಆದರೆ ಮುಖೇಶ್ ಕುಮಾರ್ ಅವರಿಗೆ ಕೊನೆಯ ಎಸೆತದಲ್ಲಿ ಗೆಲುವು ತಂದು ಕೊಡುವುದು ಅಸಾಧ್ಯವಾಯಿತು.

ವಿಂಡೀಸ್ ಪರ ಬಿಗಿ ದಾಳಿ ನಡೆಸಿದ ಒಬೆಡ್ ಮೆಕಾಯ್, ಜೇಸನ್ ಹೋಲ್ಡರ್ ಮತ್ತು ರೊಮಾರಿಯೋ ಶೆಫರ್ಡ್ ತಲಾ 2 ವಿಕೆಟ್, ಅಕೇಲ್ ಹೊಸೈನ್ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಜೇಸನ್ ಹೋಲ್ಡರ್ ಪಂದ್ಯ ಶ್ರೇಷ್ಠ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್‌ 6 ವಿಕೆಟಿಗೆ 149 (ಬ್ರ್ಯಾಂಡನ್‌ ಕಿಂಗ್‌ 28, ನಿಕೋಲಾಸ್‌ ಪೂರಣ್‌ 41, ರೋಮನ್‌ ಪೊವೆಲ್‌ 48, ಯಜುವೇಂದ್ರ ಚಹಲ್‌ 24ಕ್ಕೆ 2, ಅರ್ಷದೀಪ್‌ ಸಿಂಗ್‌ 31ಕ್ಕೆ 2).
ಭಾರತ :9 ವಿಕೆಟಿಗೆ 145 (20 ಓವರ್)

ಟಾಪ್ ನ್ಯೂಸ್

17-mng-dasara

Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ

ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ

ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

15-nalin

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

ಅ*ತ್ಯಾಚಾರ ಪ್ರಕರಣ:ಶಾಸಕ ಮುನಿರತ್ನ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ-14 ದಿನ ನ್ಯಾಯಾಂಗ ಬಂಧನ

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

2500 Cops: ಗ್ವಾಲಿಯರ್‌ ಟಿ20 ಪಂದ್ಯಕ್ಕೆ 2,500 ಪೊಲೀಸರ ನಿಯೋಜನೆ

2500 Cops: ಗ್ವಾಲಿಯರ್‌ ಟಿ20 ಪಂದ್ಯಕ್ಕೆ 2,500 ಪೊಲೀಸರ ನಿಯೋಜನೆ

Women’s T20 World Cup 2024: ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ ಆಘಾತ

Women’s T20 World Cup 2024: ನ್ಯೂಜಿಲ್ಯಾಂಡ್‌ ವಿರುದ್ಧ ಭಾರತಕ್ಕೆ ಆಘಾತ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Gwalior T20: ಪಂದ್ಯಕ್ಕೆ2,500 ಪೊಲೀಸರ ನಿಯೋಜನೆ

Shanghai Masters 2024: ಬೋಪಣ್ಣ ಜೋಡಿಗೆ ಜಯ

Shanghai Masters 2024: ಬೋಪಣ್ಣ ಜೋಡಿಗೆ ಜಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

17-mng-dasara

Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ

ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ

ನನ್ನಂತ ದಲಿತರಿಗೆ ಒಳ್ಳೆಯದಾಗದಿದ್ದರೆ ಮುಂದೆ ಯಾವ ದಲಿತರಿಗೂ ಒಳ್ಳೆದಾಗಲ್ಲ: ಜಿಗಜಿಣಗಿ ಭಾವುಕ

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

ಈ ಬಾರಿಯ ದುರ್ಗಾ ಪೂಜೆಗೆ ಬಂಗಾಳದ ಕೈದಿಗಳಿಗೆ ಮಟನ್, ಚಿಕನ್ ಬಿರಿಯಾನಿ ಜೊತೆಗೆ ವಿಶೇಷ ಖಾದ್ಯ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

15-nalin

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.