ರೋಚ್ ವೇಗಕ್ಕೆ ತತ್ತರಿಸಿದ ಭಾರತ
Team Udayavani, Aug 23, 2019, 2:20 AM IST
ನಾರ್ತ್‌ಸೌಂಡ್ (ಆ್ಯಂಟಿಗುವಾ): ಆತಿಥೇಯ ವೆಸ್ಟ್ ಇಂಡೀಸ್ ಎದುರಿನ ‘ವಿಶ್ವಕಪ್ ಚಾಂಪಿಯನ್‌ಶಿಪ್ ಟೆಸ್ಟ್’ ಪಂದ್ಯವನ್ನು ಭಾರತ ಆತಂಕಕಾರಿಯಾಗಿಯೇ ಆರಂಭಿಸಿದೆ. ಇಲ್ಲಿನ ‘ಸರ್ ವಿವಿಯನ್ ರಿಚರ್ಡ್ಸ್‌ಸ್ಟೇಡಿಯಂ’ನಲ್ಲಿ ಗುರುವಾರ ಮೊದಲ್ಗೊಂಡ ಪಂದ್ಯದಲ್ಲಿ ತೀವ್ರ ಕುಸಿತ ಅನುಭವಿಸಿದ ಕೊಹ್ಲಿ ಪಡೆ, ಭೋಜನ ವಿರಾಮದ ವೇಳೆ 3 ವಿಕೆಟ್ ನಷ್ಟಕ್ಕೆ 68 ರನ್ ಮಾಡಿದೆ.
ಈ 3 ವಿಕೆಟ್‌ಗಳು 25 ರನ್ ಆಗುವಷ್ಟರಲ್ಲಿ ಉದುರಿ ಹೋಗಿದ್ದವು. 5ನೇ ಓವರಿನಲ್ಲಿ ಘಾತಕವಾಗಿ ಪರಿಣಮಿಸಿದ ವೇಗಿ ಕೆಮರ್ ರೋಚ್ 5 ಎಸೆತಗಳಲ್ಲಿ ಮಾಯಾಂಕ್ ಅಗರ್ವಾಲ್ (5) ಮತ್ತು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (2) ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಆಗ ಭಾರತ ಕೇವಲ 7 ರನ್ ಮಾಡಿತ್ತು.
ನಾಯಕ ವಿರಾಟ್ ಕೊಹ್ಲಿ ಅವರಿಂದಲೂ ಈ ಕುಸಿತಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. 8ನೇ ಓವರ್ ವೇಳೆ ಸ್ಕೋರ್ 25ಕ್ಕೆ ಏರಿದಾಗ ಶಾನನ್ ಗ್ಯಾಬ್ರಿಯಲ್ ಭಾರತದ ಕಪ್ತಾನನ್ನು ಕೆಡವಿದರು. ಕೊಹ್ಲಿ ಗಳಿಕೆ 9 ರನ್.
ಬಂಡೆಯಾಗಿ ನಿಂತ ರಾಹುಲ್
ಆದರೆ ಮತ್ತೂಬ್ಬ ಆರಂಭಕಾರ ಕೆ.ಎಲ್. ರಾಹುಲ್ ವಿಂಡೀಸ್ ದಾಳಿಗೆ ಬಂಡೆಯಾಗಿ ನಿಂತಿದ್ದಾರೆ. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾದ ಅವರು 37 ರನ್ ಮಾಡಿ ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ. 73 ಎಸೆತಗಳ ಈ ಜವಾಬ್ದಾರಿಯುತ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಸೇರಿದೆ.
ರಾಹುಲ್ ಅವರೊಂದಿಗೆ 10 ರನ್ ಮಾಡಿರುವ ಅಜಿಂಕ್ಯ ರಹಾನೆ ಆಡುತ್ತಿದ್ದಾರೆ. ರಕ್ಷಣಾತ್ಮಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ರಹಾನೆ 43 ಎಸೆತ ಎದುರಿಸಿದ್ದು, 2 ಬೌಂಡರಿ ಹೊಡೆದಿದ್ದಾರೆ. ಇವರಿಬ್ಬರ 16.1 ಓವರ್‌ಗಳ ಜತೆಯಾಟದಲ್ಲಿ 43 ರನ್ ಒಟ್ಟುಗೂಡಿದೆ.
ಮಳೆಯಿಂದಾಗಿ ಇಲ್ಲಿನ ಪಿಚ್ ವಿಪರೀತ ಬೌನ್ಸ್ ಆಗುತ್ತಿದ್ದು, ವೇಗಿಗಳಿಗೆ ಭಾರೀ ನೆರವು ನೀಡುತ್ತಿದೆ.
ರೋಹಿತ್‌ಗೆ ಅವಕಾಶವಿಲ್ಲ
ಭಾರತ ಈ ಪಂದ್ಯದಿಂದ ರೋಹಿತ್ ಶರ್ಮ, ಸಾಹಾ, ಅಶ್ವಿನ್, ಕುಲದೀಪ್ ಮತ್ತು ಉಮೇಶ್ ಯಾದವ್ ಅವರನ್ನು ಹೊರಗಿರಿಸಿತು. ಕರ್ನಾಟಕದ ಜೋಡಿಯಾದ ಕೆ.ಎಲ್. ರಾಹುಲ್-ಮಾಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಿತು.
ವಿಂಡೀಸ್ ಪರ ಲೆಗ್ ಸ್ಪಿನ್ನರ್ ಶಮರ್ ಬ್ರೂಕ್ಸ್ ಟೆಸ್ಟ್ ಪದಾರ್ಪಣೆ ಮಾಡಿದರು. ಇವರಿಗೆ ಕ್ರಿಕೆಟ್ ಲೆಜೆಂಡ್ ರಿಚರ್ಡ್ಸ್ ‘ಟೆಸ್ಟ್ ಕ್ಯಾಪ್’ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Perth test: ಜೈಸ್ವಾಲ್-ರಾಹುಲ್ ಅಜೇಯ ಆಟ; ಪರ್ತ್ ನಲ್ಲಿ ಭಾರತದ ಮೇಲಾಟ
Mother: ಅಮ್ಮನ ಜೀವನವೇ ಆದರ್ಶ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.