ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿ ಗೆದ್ದ ವೆಸ್ಟ್ ಇಂಡೀಸ್
Team Udayavani, Jul 17, 2021, 1:30 PM IST
ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅಂತಿಮ ಟಿ 20 ಪಂದ್ಯದಲ್ಲೂ ಸೋಲನುಭವಿಸಿದ ಆಸ್ಟ್ರೇಲಿಯಾ ತಂಡ 4-1 ಅಂತರದಿಂದ ಸರಣಿ ಸೋಲನುಭವಿಸಿದೆ.
ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಎಂಟು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಗೆಲ್ಲಲು 200 ರನ್ ಗುರಿ ಪಡೆದ ಆಸ್ಟ್ರೇಲಿಯಾ ಒಂಬತ್ತು ವಿಕೆಟ್ ಕಳೆದುಕೊಂಡು 183 ರನ್ ಗಳಿಸಿ 16 ರನ್ ಅಂತರದ ಸೋಲನುಭವಿಸಿತು.
ವಿಂಡೀಸ್ ಪರ ಆರಂಭಿಕ ಆಟಗಾರ ಎವಿನ್ ಲೆವಿಸ್ ಕೇವಲ 34 ಎಸೆತಗಳಲ್ಲಿ 79 ರನ್ ಗಳಿಸಿದರು. ನಾಯಕ ಪೂರನ್ 18 ಎಸೆತಗಳಲ್ಲಿ 31 ರನ್, ಸಿಮನ್ಸ್ 21 ರನ್ ಗಳಿಸಿದರು. ಆಸೀಸ್ ಪರ ಟೈ ಮೂರು ವಿಕೆಟ್, ಮಿಚ್ ಮಾರ್ಶ್ ಮತ್ತು ಜಾಂಪಾ ತಲಾ ಎರಡು ವಿಕೆಟ್ ಕಿತ್ತರು.
ಇದನ್ನೂ ಓದಿ:ಮದ್ಯ ಸೇವಿಸಿ ನಿದ್ದೆಗೆ ಶರಣಾದ ಸಹಾಯಕ ಸ್ಟೇಷನ್ ಮಾಸ್ಟರ್! ರೈಲು ಸಂಚಾರ ಅಸ್ತವ್ಯಸ್ತ
ಗುರಿ ಬೆನ್ನತ್ತಿದ ಆಸೀಸ್ ಗೆ ನಾಯಕ ಫಿಂಚ್ 34 ರನ್ ಮತ್ತು ಮಾರ್ಶ್ 30 ರನ್, ಕೀಪರ್ ವೇಡ್ 26 ರನ್ ಗಳ ಕಾಣಿಕೆ ನೀಡಿದರು. ಆದರೆ ಯಾವೊಬ್ಬ ಆಟಗಾರನೂ ದೊಡ್ಡ ಇನ್ನಿಂಗ್ಸ್ ಕಟ್ಟದೇ ಮುಳುವಾಯಿತು. 20 ಓವರ್ ನಲ್ಲಿ ತಂಡ 183 ರನ್ ಮಾತ್ರ ಮಾಡಲು ಶಕ್ತವಾಯಿತು. ವಿಂಡೀಸ್ ಪರ ಕಾಟ್ರೆಲ್ ಮತ್ತು ರಸ್ಸೆಲ್ ತಲಾ ಮೂರು ವಿಕೆಟ್ ಕಿತ್ತರೆ, ಹೇಯ್ಡನ್ ವಾಲ್ಶ್ ಒಂದು ವಿಕೆಟ್ ಪಡೆದರು.
ಸರಣಿಯ ಮೊದಲು ಮೂರು ಪಂದ್ಯವನ್ನು ವಿಂಡೀಸ್ ಗೆದ್ದರೆ ನಾಲ್ಕನೇ ಪಂದ್ಯದಲ್ಲಿ ಆಸೀಸ್ ಗೆದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.