ಸೋಲಿನ ದಾಖಲೆ ಬರೆದ ವೆಸ್ಟ್ ಇಂಡೀಸ್
Team Udayavani, Aug 8, 2019, 5:01 AM IST
ಪ್ರೊವಿಡೆನ್ಸ್ (ಗಯಾನ): ಟಿ20 ವಿಶ್ವ ಚಾಂಪಿಯನ್ ಖ್ಯಾತಿಯ ವೆಸ್ಟ್ ಇಂಡೀಸ್ ಅತೀ ಹೆಚ್ಚು ಪಂದ್ಯಗಳನ್ನು ಸೋತ “ದಾಖಲೆ’ ಬರೆದಿದೆ. ಮಂಗಳವಾರ ರಾತ್ರಿ ಭಾರತದೆದುರಿನ 3ನೇ ಹಾಗೂ ಅಂತಿಮ ಪಂದ್ಯವನ್ನು 7 ವಿಕೆಟ್‌ಗಳಿಂದ ಸೋಲುವ ಮೂಲಕ ವಿಂಡೀಸ್ ಈ ಅವಮಾನಕ್ಕೆ ಸಿಲುಕಿತು.
ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 6 ವಿಕೆಟಿಗೆ 146 ರನ್ ಹೊಡೆದರೆ, ಭಾರತ 19.1 ಓವರ್‌ಗಳಲ್ಲಿ ಮೂರೇ ವಿಕೆಟ್ ಕಳೆದುಕೊಂಡು 150 ರನ್ ಬಾರಿಸಿ ಗೆದ್ದು ಬಂದಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಂಡು ಮೆರೆದಾಡಿತು.
ಇದು ವೆಸ್ಟ್ ಇಂಡೀಸ್ ಅನುಭವಿಸಿದ 58ನೇ ಸೋಲು. ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಲಾ 57 ಪಂದ್ಯಗಳಲ್ಲಿ ಸೋಲನುಭವಿಸಿ ದ್ವಿತೀಯ ಸ್ಥಾನದಲ್ಲಿವೆ. ಅನಂತರದ ಸ್ಥಾನದಲ್ಲಿರುವ ತಂಡಗಳೆಂದರೆ ನ್ಯೂಜಿಲ್ಯಾಂಡ್ (56), ಆಸ್ಟ್ರೇಲಿಯ (54), ಪಾಕಿಸ್ಥಾನ (52), ಜಿಂಬಾಬ್ವೆ/ಇಂಗ್ಲೆಂಡ್ (50), ದಕ್ಷಿಣ ಆಫ್ರಿಕಾ (44) ಮತ್ತು ಭಾರತ (41).
ಮಿಂಚಿದ ಚಹರ್, ಪಂತ್, ಕೊಹ್ಲಿ
ಸೀಮರ್ ದೀಪಕ್ ಚಹರ್ ಅದ್ಭುತ ಸ್ಪೆಲ್ ಮೂಲಕ ವಿಂಡೀಸ್ ಅಗ್ರ ಕ್ರಮಾಂಕದ ಮೇಲೆರಗಿದರು. ಚಹರ್ ಸಾಧನೆ 4 ರನ್ನಿಗೆ 3 ವಿಕೆಟ್. 3 ಓವರ್ ಎಸೆದ ಅವರು ಒಂದನ್ನು ಮೇಡನ್ ಕೂಡ ಮಾಡಿದ್ದರು.
ವಿಂಡೀಸ್ ಸರದಿಯಲ್ಲಿ ಕೈರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ ನಡೆಸಿ 45 ಎಸೆತಗಳಿಂದ 58 ರನ್ ಸಿಡಿಸಿದರು.
ಚೇಸಿಂಗ್ ವೇಳೆ ಭಾರತ ಶಿಖರ್ ಧವನ್ (3) ಅವರನ್ನು ಬೇಗನೇ ಕಳೆದುಕೊಂಡಿತು. ರೋಹಿತ್ ಶರ್ಮ ಬದಲು ಆರಂಭಿಕನಾಗಿ ಇಳಿದ ಕೆ.ಎಲ್. ರಾಹುಲ್ ಗಳಿಕೆ 20 ರನ್. 3ನೇ ವಿಕೆಟಿಗೆ ಜತೆಗೂಡಿದ ವಿರಾಟ್ ಕೊಹ್ಲಿ-ರಿಷಭ್ ಪಂತ್ 106 ರನ್ ಪೇರಿಸಿ ಭಾರತಕ್ಕೆ ಯಾವುದೇ ಅಪಾಯವಾಗದಂತೆ ನೋಡಿಕೊಂಡರು.
ಕೊಹ್ಲಿ 45 ಎಸೆತ ಎದುರಿಸಿ 59 ರನ್ ಹೊಡೆದರು (6 ಬೌಂಡರಿ). ಗೆಲುವಿಗೆ 14 ರನ್ ಬೇಕಿದ್ದಾಗ ಕೊಹ್ಲಿ ವಿಕೆಟ್ ಬಿತ್ತು. ಹಿಂದಿನೆರಡೂ ಪಂದ್ಯಗಳಲ್ಲಿ ವಿಫಲರಾಗಿದ್ದ ಪಂತ್ ಇಲ್ಲಿ ಆಕ್ರಮಣಕಾರಿ ಆಟಕ್ಕಿಳಿದು 42 ಎಸೆತಗಳಿಂದ ಅಜೇಯ 65 ರನ್ ಬಾರಿಸಿದರು. ಸಿಡಿಸಿದ್ದು 4 ಸಿಕ್ಸರ್, 4 ಬೌಂಡರಿ.
ಸ್ಕೋರ್ ಪಟ್ಟಿ
ವೆಸ್ಟ್ ಇಂಡೀಸ್
ಎವಿನ್ ಲೆವಿಸ್ ಎಲ್‌ಬಿಡಬ್ಲ್ಯು ಬಿ ದೀಪಕ್ 10
ಸುನೀಲ್ ನಾರಾಯಣ್ ಸಿ ಸೈನಿ ಬಿ ದೀಪಕ್ 2
ಶಿಮ್ರನ್ ಹೆಟ್‌ಮೈರ್ ಎಲ್‌ಬಿಡಬ್ಲ್ಯು ಬಿ ದೀಪಕ್ 1
ಕೈರನ್ ಪೊಲಾರ್ಡ್ ಬಿ ಸೈನಿ 58
ನಿಕೋಲಸ್ ಪೂರನ್ ಸಿ ಪಂತ್ ಬಿ ಸೈನಿ 17
ರೋವ¾ನ್ ಪೊವೆಲ್ ಔಟಾಗದೆ 32
ಬ್ರಾತ್‌ವೇಟ್ ಸಿ ಸುಂದರ್ ಬಿ ಚಹರ್ 10
ಫ್ಯಾಬಿಯನ್ ಅಲೆನ್ ಔಟಾಗದೆ 8
ಇತರ 8
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 146
ವಿಕೆಟ್ ಪತನ: 1-4, 2-13, 3-14, 4-80, 5-105, 6-119.
ಬೌಲಿಂಗ್: ಭುವನೇಶ್ವರ್ 3-0-19-0
ದೀಪಕ್ ಚಹರ್ 3-1-4-3
ನವದೀಪ್ ಸೈನಿ 4-0-34-2
ರಾಹುಲ್ ಚಹರ್ 3-0-27-1
ವಾಷಿಂಗ್ಟನ್ ಸುಂದರ್ 3-0-23-0
ಕೃಣಾಲ್ ಪಾಂಡ್ಯ 4-0-35-0
ಭಾರತ
ಕೆ.ಎಲ್. ರಾಹುಲ್ ಸಿ ಪೂರನ್ ಬಿ ಅಲೆನ್ 20
ಶಿಖರ್ ಧವನ್ ಸಿ ಕಾಟ್ರೆಲ್ ಬಿ ಥಾಮಸ್ 3
ವಿರಾಟ್ ಕೊಹ್ಲಿ ಸಿ ಲೆವಿಸ್ ಬಿ ಥಾಮಸ್ 59
ರಿಷಭ್ ಪಂತ್ ಔಟಾಗದೆ 65
ಮನೀಷ್ ಪಾಂಡೆ ಔಟಾಗದೆ 2
ಇತರ 1
ಒಟ್ಟು (19.1 ಓವರ್‌ಗಳಲ್ಲಿ 3 ವಿಕೆಟಿಗೆ) 150
ವಿಕೆಟ್ ಪತನ: 1-10, 2-27, 3-113.
ಬೌಲಿಂಗ್: ಶೆಲ್ಡನ್ ಕಾಟ್ರೆಲ್ 4-0-26-0
ಒಶೇನ್ ಥಾಮಸ್ 4-0-29-2
ಫ್ಯಾಬಿಯನ್ ಅಲೆನ್ 3-0-18-1
ಸುನೀಲ್ ನಾರಾಯಣ್ 4-0-29-0
ಕಾರ್ಲೊಸ್ ಬ್ರಾತ್‌ವೇಟ್ 2.1-0-25-0
ಕಿಮೊ ಪೌಲ್ 2-0-23-0
ಪಂದ್ಯಶ್ರೇಷ್ಠ: ದೀಪಕ್ ಚಹರ್
ಸರಣಿಶ್ರೇಷ್ಠ: ಕೃಣಾಲ್ ಪಾಂಡ್ಯ
ಎಕ್ಸ್‌ಟ್ರಾ ಇನ್ನಿಂಗ್ಸ್
– ಭಾರತ 3 ಪಂದ್ಯಗಳ ದ್ವಿಪಕ್ಷೀಯ ಟಿ20 ಸರಣಿಯಲ್ಲಿ 4ನೇ ಸಲ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ 2ನೇ ಸಲ 3-0 ಕ್ಲೀನ್‌ಸಿÌàಪ್ ಸಾಧಿಸಿತು. ಇದಕ್ಕೂ ಮುನ್ನ ಆಸ್ಟ್ರೇಲಿಯ (2016), ಶ್ರೀಲಂಕಾ (2017) ಮತ್ತು ಕಳೆದ ವರ್ಷ ವಿಂಡೀಸ್ ವಿರುದ್ಧ ಈ ಸಾಧನೆ ಮಾಡಿತ್ತು.
– ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸತತ 6 ಟಿ20 ಪಂದ್ಯಗಳಲ್ಲಿ ಜಯ ಸಾಧಿಸಿತು. ಇದು ವಿಂಡೀಸ್ ವಿರುದ್ಧ ತಂಡವೊಂದು ಸಾಧಿಸಿದ ಸತತ ಗೆಲುವಿನ ದಾಖಲೆ. 2016-17ರಲ್ಲಿ ಪಾಕಿಸ್ಥಾನ ಸತತ 5 ಪಂದ್ಯಗಳಲ್ಲಿ ವಿಂಡೀಸನ್ನು ಮಣಿಸಿದ ದಾಖಲೆ ಪತನಗೊಂಡಿತು.
– ವೆಸ್ಟ್ ಇಂಡೀಸ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ 58 ಸೋಲನುಭವಿಸಿದ ತಂಡವೆನಿಸಿತು. 57 ಪಂದ್ಯಗಳಲ್ಲಿ ಸೋತ ಶ್ರೀಲಂಕಾ ಮತ್ತು ಬಾಂಗ್ಲಾದೇಶ ದ್ವಿತೀಯ ಸ್ಥಾನಕ್ಕಿಳಿದವು.
– ರಿಷಭ್ ಪಂತ್ ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತದ ಕೀಪರ್ ಎನಿಸಿದರು (ಅಜೇಯ 65). ಇಂಗ್ಲೆಂಡ್ ಎದುರಿನ 2017ರ ಬೆಂಗಳೂರು ಪಂದ್ಯದಲ್ಲಿ ಧೋನಿ 56 ರನ್ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು.
– ವಿರಾಟ್ ಕೊಹ್ಲಿ ಟಿ20 ಪಂದ್ಯಗಳಲ್ಲಿ ಅತ್ಯಧಿಕ 50 ಪ್ಲಸ್ ರನ್ ಬಾರಿಸಿದ ರೋಹಿತ್ ಶರ್ಮ ದಾಖಲೆಯನ್ನು ಸರಿದೂಗಿಸಿದರು (21). ಮಾರ್ಟಿನ್ ಗಪ್ಟಿಲ್ 2ನೇ ಸ್ಥಾನದಲ್ಲಿದ್ದಾರೆ (16).
– ದೀಪಕ್ ಚಹರ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತೀ ಕಡಿಮೆ ರನ್ ವೆಚ್ಚದಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತು ನುವಾನ್ ಕುಲಶೇಖರ ಜತೆ ಜಂಟಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡರು (4 ರನ್ನಿಗೆ 3 ವಿಕೆಟ್). ನ್ಯೂಜಿಲ್ಯಾಂಡ್ ಎದುರಿನ 2014ರ ಪಂದ್ಯದಲ್ಲಿ ರಂಗನ ಹೆರಾತ್ 3 ರನ್ನಿಗೆ 5 ವಿಕೆಟ್ ಹಾರಿಸಿದ್ದು ದಾಖಲೆ.
– ಚಹರ್ ವಿಂಡೀಸ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಭಾರತೀಯ ಬೌಲರ್. 2018ರ ಕೋಲ್ಕತಾ ಪಂದ್ಯದಲ್ಲಿ ಕುಲದೀಪ್ ಯಾದವ್ 13 ರನ್ನಿಗೆ 3 ವಿಕೆಟ್ ಕಿತ್ತ ದಾಖಲೆ ಪತನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.