ಟೋಕಿಯೊ ಒಲಿಂಪಿಕ್ ನಲ್ಲಿ ಅಶಿಸ್ತು ಪ್ರದರ್ಶನ : ಕುಸ್ತಿಪಟು ಪೋಗಟ್ ಅಮಾನತು
Team Udayavani, Aug 10, 2021, 8:30 PM IST
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಿಂದ ಹಿಂದುರಿಗಿರುವ ಕುಸ್ತಿಪಟು ವಿನೇಶಾ ಪೋಗಟ್ ಅವರಿಗೆ ಆಘಾತ ಎದುರಾಗಿದೆ. ಒಲಿಂಪಿಕ್ಸ್ ನಲ್ಲಿ ಅಶಿಸ್ತು ತೋರಿದ ಆರೋಪದ ಮೇಲೆ ಈಕೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಭಾರತ ಕುಸ್ತಿ ಫೆಡರೇಷನ್ ಆದೇಶ ಹೊರಡಿಸಿದೆ.
ಪೋಗಟ್ ಅವರಿಗೆ ನೋಟಿಸ್ ನೀಡಿರುವ ಡಬ್ಲೂಎಫ್ಐ ಇದಕ್ಕೆ ಇದೇ ಆಗಸ್ಟ್ 16ರೊಳಗೆ ಉತ್ತರ ನೀಡುವಂತೆಯೂ ಖಡಕ್ ವಾರ್ನಿಂಗ್ ಕೊಟ್ಟಿದೆ. ನೋಟಿಸ್‌ಗೆ ಉತ್ತರಿಸುವವರೆಗೂ ಕುಸ್ತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಅವರ ವಿಚಾರದಲ್ಲಿ ಡಬ್ಲ್ಯುಎಫ್‌ಐ ಅಂತಿಮ ನಿರ್ಧಾರ ಕೈಗೊಳ್ಳುವವರೆಗೂ ರಾಷ್ಟ್ರೀಯ ಮತ್ತು ಇತರ ದೇಶಿ ಟೂರ್ನಿಗಳಲ್ಲೂ ಸ್ಪರ್ಧಿಸುವಂತಿಲ್ಲ’ ಎಂದು ಡಬ್ಲ್ಯುಎಫ್‌ಐ ಮೂಲಗಳು ತಿಳಿಸಿವೆ.
ಅಶಿಸ್ತು ತೋರಿದ ಆರೋಪ :
ಟೋಕಿಯೋ ಒಲಿಂಪಿಕ್ ನಲ್ಲಿ ಅಶಿಸ್ತು ತೋರಿದ ಆರೋಪಕ್ಕೆ ವಿನೇಶಾ ಗುರಿಯಾಗಿದ್ದಾರೆ. ಒಲಿಂಪಿಕ್ ಗೂ ಮುನ್ನ ಇವರು ಹಂಗರಿಯಲ್ಲಿ ತರಬೇತಿ ಪಡೆದಿದ್ದರು. ಅಲ್ಲಿಂದ ನೇರವಾಗಿ ಟೋಕಿಯೊಗೆ ಪ್ರಯಾಣಿಸಿದ್ದರು. ಕ್ರೀಡಾ ಗ್ರಾಮದಲ್ಲಿ ಉಳಿದುಕೊಳ್ಳಲು ತಗಾದೆ ತೆಗೆದಿದ್ದ ಅವರು ಭಾರತದ ಇತರ ಕುಸ್ತಿಪಟುಗಳ ಜೊತೆಯಲ್ಲಿ ಅಭ್ಯಾಸ ನಡೆಸಲೂ ನಿರಾಕರಿಸಿದ್ದರು.
ಪ್ರಾಯೋಜಕತ್ವದ ಪೋಷಾಕು :
ಸಹ ಆಟಗಾರರ ಜೊತೆ ಗಲಾಟೆ ಒಂದು ಕಡೆಯಾದರೆ, ಭಾರತ ತಂಡಕ್ಕೆ ಶಿವ್ ನರೇಶ್ ಸಂಸ್ಥೆ ಪ್ರಾಯೋಜಕತ್ವ ಮಾಡಿದ್ದ ಪೋಷಾಕು ಧರಿಸಿರಲಿಲ್ಲ. ಇದರ ಬದಲಾಗಿ ನೈಕಿ ಸಂಸ್ಥೆಯ ಲಾಂಛನವಿರುವ ಪೋಷಾಕು ತೊಟ್ಟಿದ್ದರು.
‘ಕ್ರೀಡಾ ಗ್ರಾಮದಲ್ಲಿ ಸೋನಮ್ ಮಲಿಕ್, ಅನ್ಶು ಮಲಿಕ್ ಮತ್ತು ಸೀಮಾ ಬಿಸ್ಲಾ ಉಳಿದುಕೊಂಡಿದ್ದ ಕೊಠಡಿಯ ಸನಿಹದಲ್ಲೇ ವಿನೇಶಾಗೂ ಕೊಠಡಿ ಕಾಯ್ದಿರಿಸಲಾಗಿತ್ತು. ನೀವೆಲ್ಲಾ ಭಾರತದಿಂದ ಬಂದಿದ್ದೀರಿ. ನಿಮ್ಮಿಂದ ನನಗೆ ಕೊರೊನಾ ಸೋಂಕು ತಗುಲಬಹುದು. ನಾನಂತೂ ಇಲ್ಲಿ ಉಳಿದುಕೊಳ್ಳುವುದಿಲ್ಲ ಎಂದು ರಾದ್ಧಾಂತ ಮಾಡಿಬಿಟ್ಟಿದ್ದರು. ಅವರ ವರ್ತನೆ ಕಂಡು ನಮಗೂ ಬೇಸರವಾಗಿತ್ತು’ ಎಂದು ಕೂಟದಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ವಿನೇಶ್ :
ವಿನೇಶಾ ಅವರ ಮೇಲೆ ಭಾರೀ ನೀರಿಕ್ಷೆ ಇತ್ತು. ಆದರೆ, ಇವರು ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದರು.
ಸೋನಂ ಮಲಿಕ್ಗೂ ನೋಟಿಸ್:
ಇನ್ನು ಟೋಕಿಯೋ ಒಲಿಂಪಿಕ್ಸ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಸೋನಮ್ ಮಲಿಕ್ಗೂ ಅನುಚಿತ ವರ್ತನೆಗಾಗಿ ನೋಟಿಸ್ ನೀಡಲಾಗಿದೆ. ಸೋನಂ ಮಲಿಕ್‌ಗೆ ಆಕೆ ಅಥವಾ ಆಕೆಯ ಕುಟುಂಬದ ಯಾರಾದರೂ ಫೆಡರೇಶನ್ ಕಚೇರಿಯಿಂದ ಪಾಸ್‌ಪೋರ್ಟ್ ತೆಗೆದುಕೊಳ್ಳಬೇಕು ಎಂದು ತಿಳಿಸಲಾಯಿತು. ಆದರೆ ಆಕೆ ತನ್ನ ಪರವಾಗಿ ಸಂಗ್ರಹಿಸಲು SAI ಅಧಿಕಾರಿಗಳಿಗೆ ಆದೇಶಿಸಿದಳು. ಇದು ಸ್ವೀಕಾರಾರ್ಹವಲ್ಲ. ಅವರು ಏನನ್ನೂ ಸಾಧಿಸಿಲ್ಲ. ಇದಾಗ್ಯೂ ಇಂತಹ ವರ್ತನೆಗಳು ಸ್ಟಾರ್ಗಿರಿಯನ್ನು ತೋರಿಸುತ್ತಿದೆ. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನೊಟೀಸ್ ನೀಡಲಾಗಿದೆ ಎಂದು ಇದನ್ನು ಸ್ವೀಕರಿಸಲಾಗುವುದಿಲ್ಲ” ಎಂದು ಭಾರತೀಯ ಕುಸ್ತಿ ಫೆಡರೇಶನ್ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.