ಕ್ರೀಡಾಲೋಕಕ್ಕೆ ಕಾಡಿದ್ದ ಸ್ಪ್ಯಾನಿಷ್‌ ಫ್ಲೂ


Team Udayavani, May 18, 2020, 5:40 AM IST

ಕ್ರೀಡಾಲೋಕಕ್ಕೆ ಕಾಡಿದ್ದ ಸ್ಪ್ಯಾನಿಷ್‌ ಫ್ಲೂ

ಮಾಸ್ಕ್ ಧರಿಸಿ ಬೇಸ್‌ಬಾಲ್‌ ಆಡಿದ ಆಟಗಾರರು.

ಕೋವಿಡ್-19 ವೈರಸ್‌ ಉಂಟುಮಾಡಿದ ಹಾನಿಯಿಂದ ವಿಶ್ವವೇ ತತ್ತರಿಸಿ ಹೋಗಿದ್ದು ಕ್ರೀಡಾಲೋಕ ಸ್ತಬ್ಧಗೊಂಡಿದೆ. ಆದರೆ ಕ್ರೀಡೆ ಈ ರೀತಿ ಸ್ತಬ್ಧಗೊಂಡಿರುವುದು ಇದೇ ಮೊದಲೇನಲ್ಲ. ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ನೋಡಿದರೆ ಇಂತಹದ್ದೇ ಘಟನೆಯೊಂದು ನಮ್ಮ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಹೌದು. ಅದುವೇ 1918ರಲ್ಲಿ ಕಾಣಿಸಿಕೊಂಡ ಸ್ಪ್ಯಾನಿಷ್‌ ಫ್ಲೂ ಎಂಬ ವೈರಸ್‌ ಜ್ವರ. ಮೊದಲನೇ ಜಾಗತಿಕ ಯುದ್ಧ ಮುಗಿಯುವ ಹಂತದಲ್ಲಿ ಜಗತ್ತು ನಿಟ್ಟುಸಿರು ಬಿಡುತ್ತಿರುವಾಗಲೇ ಎರಗಿದ ಈ ಸ್ಪ್ಯಾನಿಷ್‌ ಫ್ಲೂ ಎಂಬ ಜ್ವರ ಕೋಟಿಗಟ್ಟಲೆ ಜನರ ಜೀವವನ್ನು ಬಲಿಪಡೆದುಕೊಂಡಿತಲ್ಲದೆ ಕ್ರೀಡಾಲೋಕದ ಮೇಲೂ ತನ್ನ ಕರಿಛಾಯೆಯನ್ನು ಚೆಲ್ಲಿತ್ತು.

ಬೇಸ್‌ಬಾಲ್‌ ತಂದ ಆಪತ್ತು
ಸ್ಪ್ಯಾನಿಷ್‌ ಫ್ಲೂ ಹೆಚ್ಚು ಕಾಡಿದ್ದು ಬೇಸ್‌ಬಾಲ್‌ ಕ್ರೀಡೆಯನ್ನು. 1918ರ ಸಾಲಿನ ಬೇಸ್‌ಬಾಲ್‌ ಲೀಗ್‌ ಎಪ್ರಿಲ್‌ ತಿಂಗಳಲ್ಲೇ ಆರಂಭಗೊಂಡಿದ್ದವು. ಇದೇ ವೇಳೆಗೆ ಸ್ಪ್ಯಾನಿಷ್‌ ಫ್ಲೂ ವೈರಸ್‌ ಜನ್ಮತಾಳಿತ್ತು. ಆದರೂ ಅಧಿಕಾರಿಗಳು ಲೀಗ್‌ ಆರಂಭಿಸಲು ನಿರ್ಧರಿಸಿದ್ದರು. ದುರಂತವೆಂದರೆ ಫೈನಲ್‌ ಪಂದ್ಯ ವೀಕ್ಷಿಸಿದ ಸಾವಿರಾರು ಮಂದಿಯಲ್ಲಿ ಈ ಜ್ವರ ಕಾಣಿಸಿಕೊಂಡಿತು. ಅಮೆರಿಕದಲ್ಲಿ ವೈರಾಣು ಹರಡಲು ಆ ಪಂದ್ಯವೇ ಪ್ರಮುಖ ಕಾರಣವಾಯಿತು. ಫೈನಲ್‌ ಪಂದ್ಯದಲ್ಲಿ ಆಡಿದ ಕೆಲವು ಆಟಗಾರರಿಗೂ ಜ್ವರ ಬಾಧಿಸಿದರೂ ಪ್ರಾಣಾಪಾಯದಿಂದ ಪಾರಾದರು. ಆದರೆ ಇತರ ಕೆಲವು ಆಟಗಾರರು ಜೀವ ಕಳೆದುಕೊಂಡರು. ಈ ಪಂದ್ಯದ ಅಂಪಾಯರ್‌ ಆಗಿ ಕಾರ್ಯನಿರ್ವಹಿಸಿದ ಫ್ರಾನ್ಸಿಸ್‌ ಸಿಲ್ಕ್ ಲಾಲಿ ಅವರನ್ನೂ ಬೇಸ್‌ಬಾಲ್‌ ಜಗತ್ತು ಕಳೆದುಕೊಂಡಿತು.

ಉತ್ತರ ಅಮೆರಿಕದ ಸ್ಟಾನ್ಲಿ ಕಪ್‌ ಐಸ್‌ ಹಾಕಿಯ 1919ರ ಆವೃತ್ತಿ ಕೂಡ ಸ್ಪ್ಯಾನಿಷ್‌ ಫ್ಲೂಗೆ ತತ್ತರಿಸಿತು. ಸಿಯಾಟಲ್‌ ಮೆಟ್ರೊಪಾಲಿಟನ್ಸ್‌ ಮತ್ತು ಮಾಂಟ್ರಿಯಲ್‌ ಕೆನೆಡಿಯನ್ಸ್‌ ಫೈನಲ್‌ ಪ್ರವೇಶಿಸಿದ್ದವು. ಬೆಸ್ಟ್‌ ಆಫ್ ಫೈವ್‌’ ಪಂದ್ಯಗಳ ಹಣಾಹಣಿಯಾಗಿತ್ತು. ಸಿಯಾಟಲ್‌ ಐಸ್‌ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಎರಡು ಜಯ, ಎರಡು ಸೋಲು ಕಂಡಿದ್ದವು. ನಿರ್ಣಾಯಕ ಐದನೇ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿತು. ಆದ್ದರಿಂದ ವಿಜೇತರನ್ನು ನಿರ್ಣಯಿಸಲು ಆರನೇ ಪಂದ್ಯ ಆಡಿಸಬೇಕಾಯಿತು. ಅಷ್ಟರಲ್ಲಿ ಎರಡೂ ತಂಡಗಳ ಅನೇಕ ಆಟಗಾರರು ಜ್ವರದಿಂದ ಬಳಲಿ ಆಸ್ಪತ್ರೆ ಸೇರಿದರು. ಇದರಲ್ಲಿ ಹೆಚ್ಚಿನವರು ಕೆನೆಡಿಯನ್ಸ್‌ ತಂಡದ ಆಟಗಾರರಾಗಿದ್ದರು. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

ಸಿಯಾಟಲ್‌ ತಂಡಕ್ಕೆ ಪ್ರಶಸ್ತಿ ನೀಡಬೇಕು ಎಂಬ ಎದುರಾಳಿ ತಂಡದ ಸಲಹೆಯನ್ನು ಸಿಯಾಟಲ್‌ ತಂಡದ ಕೋಚ್‌ ವಿನಯದಿಂದ ನಿರಾಕರಿಸಿದರು. ಜಗತ್ತನ್ನೇ ನುಂಗಿದ ಮಹಾರೋಗದ ಕಾರಣಕ್ಕೆ ಯಾರೂ ಸೋಲುವುದು ಸರಿಯಲ್ಲ ಎಂಬುದು ಅವರ ವಾದವಾಗಿತ್ತು. ಹೀಗಾಗಿ ಆ ವರ್ಷ ಪ್ರಶಸ್ತಿ ಯಾರಿಗೂ ಸಲ್ಲಲಿಲ್ಲ. ಕೆನಡಿಯನ್‌ ತಂಡದ ಜೋ ಹಾಲ್‌ ಜ್ವರಕ್ಕೆ ಬಲಿಯಾದರು. ತಂಡದ ಮ್ಯಾನೇಜರ್‌ ಕೆನೆಡಿ ಆಸ್ಪತ್ರೆಯಿಂದ ಮರಳಿದ ಕೆಲವು ತಿಂಗಳ ಅನಂತರ ತೀರಿಕೊಂಡರು. 1948ರಲ್ಲಿ ಪ್ರಶಸ್ತಿಯನ್ನು ಮರುವಿನ್ಯಾಸಗೊಳಿಸಿದಾಗ ಎರಡೂ ತಂಡಗಳ ಹೆಸರನ್ನು ಸೇರಿಸಲಾಯಿತು. ಈ ವೈರಸ್‌ ಕಾಟ ಭಾರತಕ್ಕೂ ವಕ್ಕರಿಸಿತ್ತು. ಅದರಂತೆ ಬೆಂಗಳೂರಿಗೆ ರೈಲಿನಲ್ಲಿ ಬಂದ ಪ್ರಯಾಣಿಕರನ್ನು ಇಂದು ಕೋವಿಡ್-19 ತಡೆಗೆ ಹೇಗೆ ಕ್ವಾರಂಟೈನ್‌ ಮಾಡಲಾಗುತ್ತಿತ್ತೋ ಅದೇ ರೀತಿ ಬ್ರಿಟೀಷ್‌ ಮೂಲಕ ವೈಸ್‌ರಾಯ್‌ಗಳು ಟೆಂಟ್‌ಗಳನ್ನು ನಿರ್ಮಿಸಿ ವೈರಸ್‌ ಹರಡದಂತೆ ನಿಗಾ ವಹಿಸಿದ್ದರು.

ಸ್ಪ್ಯಾನಿಷ್‌ ಫ್ಲೂ ಹರಡುವ ವೇಳೆ ಹೆಚ್ಚಿನ ಮುಂಜಾಗೃತಾ ಕ್ರಮ ವಹಿಸದಿರುವುದು ಆದರ ತೀವ್ರತೆಯನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವುದು ಗೊತ್ತಾಗುತ್ತಲೇ ಇಡೀ ಕ್ರೀಡಾ ಲೋಕ ಬಹಳಷ್ಟು ಮುಂಜಾಗೃತಾ ಕ್ರಮ ತೆಗೆದುಕೊಂಡಿದ್ದರಿಂದ ವಿಶ್ವದೆಲ್ಲೆಡೆ ಕ್ರೀಡಾಪಟುಗಳು ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನೆಲ್ಲ ಕೂಟಗಳನ್ನು ಮುಂದೂಡುವುದು ಅಥವಾ ರದ್ದುಗೊಳಿಸುವ ಮೂಲಕ ಕ್ರೀಡಾಪಟುಗಳು ವೈರಸ್‌ಗೆ ತುತ್ತಾಗುವುದನ್ನು ತಪ್ಪಿಸಲು ಪ್ರಯತ್ನಿಸಲಾಗಿದೆ.

ಕೋವಿಡ್-19 ವೈರಸ್‌ನಿಂದ ವಿಶ್ವದಾದ್ಯಂತ 45 ಕ್ರೀಡಾಪಟುಗಳು ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ. ಆದರೆ ಬಹುತೇಕ ಮಂದಿ 60 ಪ್ಲಸ್‌ ವಯೋಮಾನದವರು. ಹದಿಹರೆಯದವರು ಮೃತಪಟ್ಟಿರುವುದು ಬಹಳ ಕಡಿಮೆ. ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಜಾಫ‌ರ್‌ ಸಫ‌ರಾಜ್‌ (50), ಚೈನೀಸ್‌ ಬಾಡಿಬಿಲ್ಡರ್‌ ಕ್ವಿ ಜುನ್‌ (72), ಸ್ಪ್ಯಾನಿಷ್‌ ಫ‌ುಟ್ಬಾಲ್‌ ಕೋಚ್‌ ಫ್ರಾನ್ಸಿಸ್ಕೊ ಗಾರ್ಸಿಯ (21), ಇಟಾಲಿಯನ್‌ ಫ‌ುಟ್ಬಾಲರ್‌ ಇನ್ನೊಸೆಂಜೊ ಡೊನಿನಾ (81), ಸೋಮಾಲಿಯಾದ ಫ‌ುಟ್ಬಾಲರ್‌ ಮೊಹಮ್ಮದ್‌ ಫ‌ರಾಹ್‌ (59), ಪಾಕಿಸ್ಥಾನದ ಸ್ಕ್ವಾಷ್‌ ಆಟಗಾರ ಅಜಂ ಖಾನ್‌ (95) ಸಹಿತ 45 ಕ್ರೀಡಾಪಟುಗಳು ಇಷ್ಟರವರೆಗೆ ಕೋವಿಡ್-19ಗೆ ಮೃತಪಟ್ಟಿದ್ದಾರೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.