ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾಗ ಆತ್ಮಹತ್ಯಗೆ ಯತ್ನಿಸಿದ್ದ ಕುಲದೀಪ್
Team Udayavani, Nov 13, 2017, 6:15 AM IST
ಹೊಸದಿಲ್ಲಿ: ತನ್ನ ಅಲ್ಪಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬಾಳ್ವೆಯಲ್ಲಿ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿದ ಹೆಗ್ಗಳಿಕೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರದ್ದು. ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಕುಲದೀಪ್ ಟೀಮ್ ಇಂಡಿಯಾದ ಅನಿವಾರ್ಯ ಆಟಗಾರನೂ ಆಗಿದ್ದಾರೆ. ಭವ್ಯ ಭವಿಷ್ಯವನ್ನೂ ಹೊಂದಿದ್ದಾರೆ.
ಇಂಥ ಕುಲದೀಪ್ ಯಾದವ್ ಬಾಲ್ಯದಲ್ಲೊಮ್ಮೆ ಆತ್ಮಹತ್ಯೆಗೆ ಮುಂದಾಗಿದ್ದರು ಅಂದರೆ ನಂಬುತ್ತೀರಾ? ಹೌದು, ಇದು ಸತ್ಯ. ಸ್ವತಃ ಕುಲದೀಪ್ ಅವರೇ ಇದನ್ನು ಹೇಳಿಕೊಂಡಿದ್ದಾರೆ. ಆಗ ಯಾದವ್ ವಯಸ್ಸು ಕೇವಲ 13 ವರ್ಷ. ಉತ್ತರಪ್ರದೇಶದ ಅಂಡರ್-15 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದೇ ಹೋದಾಗ ಯಾದವ್ ಇಂಥದೊಂದು ನಿರ್ಧಾರಕ್ಕೆ ಬಂದಿದ್ದರಂತೆ!
“ಆಯ್ಕೆಗೋಸ್ಕರ ನಾನು ನಡೆಸಿದ ಅಭ್ಯಾಸ ಅಷ್ಟಿಷ್ಟಲ್ಲ. ವಿಪರೀತ ನಿರೀಕ್ಷೆ ನನ್ನದಾಗಿತ್ತು. ಆದರೆ ಆಯ್ಕೆಯಾಗದೇ ಹೋದಾಗ ತೀವ್ರ ಹತಾಶನಾದ ನಾನು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೆ…’ ಎಂದು ಕುಲದೀಪ್ ಯಾದವ್ ಪತ್ರಿಕಾ ಸಂದರ್ಶನವೊಂದರ ವೇಳೆ ಹೇಳಿದರು.
ತಂದೆಯ ಸೂಚನೆ ಮೇರೆಗೆ…
“ನಾನು ಕಲಿಕೆಯಲ್ಲಿ ಮುಂದಿದ್ದೆ. ಮೆರಿಟ್ ವಿದ್ಯಾರ್ಥಿಯೂ ಆಗಿದ್ದೆ. ಆದರೆ ನನ್ನನ್ನು ಕ್ರಿಕೆಟಿಗನನ್ನಾಗಿ ರೂಪಿಸುವುದು ತಂದೆಯ ಉದ್ದೇಶವಾಗಿತ್ತು. ಬಾಲ್ಯದಲ್ಲಿ ಕ್ರಿಕೆಟನ್ನು ನಾನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕೇವಲ ಟೈಮ್‌ಪಾಸ್‌ಗೊàಸ್ಕರ ಆಡುತ್ತಿದ್ದೆ. ಆದರೆ ತಂದೆಯ ಉದ್ದೇಶ ಬೇರೆಯದೇ ಆಗಿತ್ತು. ಅವರು ನನ್ನನ್ನು ಕೋಚ್ ಬಳಿ ಕರೆದೊಯ್ದು ಕ್ರಿಕೆಟನ್ನು ಗಂಭೀರವಾಗಿ ಆಡುವಂತೆ ಸೂಚಿಸಿದರು. ಆಗ ಸೀಮ್ ಬೌಲರ್ ಆಗಬೇಕೆಂಬುದು ನನ್ನ ಬಯಕೆಯಾಗಿತ್ತು. ಆದರೆ ಸ್ಪಿನ್ನರ್ ಆಗುವಂತೆ ಕೋಚ್ ಬಲವಂತಪಡಿಸಿದರು. ನನ್ನ ಕೆಲವು ಚೈನಾಮನ್ ಎಸೆತಗಳನ್ನು ಕಂಡ ಕೋಚ್, ಇದೇ ಶೈಲಿಯನ್ನು ಮುಂದುವರಿಸುವಂತೆ ಸೂಚಿಸಿದರು. ಆಗ, ವಿಭಿನ್ನವಾಗಿ ಬೌಲಿಂಗ್ ಮಾಡುತ್ತಿದ್ದೇನೆ ಎಂದು ನನಗನಿಸಿರಲೇ ಇಲ್ಲ…’ ಎಂದು ಕುಲದೀಪ್ ಹೇಳಿದರು.
“ಆಸ್ಟ್ರೇಲಿಯದ ಸ್ಪಿನ್ನರ್ ಶೇನ್ ವಾರ್ನ್ ನನ್ನ ಪಾಲಿನ ಆದರ್ಶ. ಅವರ ಬೌಲಿಂಗ್ ವೀಡಿಯೋ ನೋಡುತ್ತ ಆಭ್ಯಾಸ ಮಾಡುತ್ತಿದ್ದೆ. ಕಾಕತಾಳೀಯವೆಂಬಂತೆ, ಆಸ್ಟ್ರೇಲಿಯ ವಿರುದ್ದವೇ ನನಗೆ ಟೆಸ್ಟ್‌ಕ್ಯಾಪ್ ಧರಿಸುವ ಅವಕಾಶ ಸಿಕ್ಕಿತು. ಅದು ಸರಣಿ ನಿರ್ಣಾಯಕ ಪಂದ್ಯವಾಗಿತ್ತು. ಎಲ್ಲರ ಮೇಲೂ ಒತ್ತಡವಿತ್ತು. ಅಶ್ವಿನ್, ಜಡೇಜ ಜತೆ ನಾನು ಬೌಲಿಂಗಿಗೆ ಇಳಿದಿದ್ದೆ. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಿತ್ತಾಗ ಆತ್ಮವಿಶ್ವಾಸ ಮೂಡಿತು…’ ಎಂದು ಈ ವರ್ಷದ ಧರ್ಮಶಾಲಾ ಟೆಸ್ಟ್ ಪಂದ್ಯವನ್ನು ಕುಲದೀಪ್ ನೆನಪಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.