ಕಿಟಕಿ ಗಾಜು ಒಡೆದ ರೋಹಿತ್ ವಿರುದ್ಧ ಪೊಲೀಸ್ ದೂರು!
Team Udayavani, Dec 24, 2017, 6:25 AM IST
ಮುಂಬಯಿ: ಶುಕ್ರವಾರವಷ್ಟೇ ಟಿ20 ಶತಕದ ವಿಶ್ವದಾಖಲೆ ಸರಿಗಟ್ಟಿದ ರೋಹಿತ್ ಶರ್ಮ ವಿರುದ್ಧ ಪೊಲೀಸ್ ದೂರೇ… ಎಂದು ಅಚ್ಚರಿಗೊಳ್ಳಬೇಡಿ. ಇದು ರೋಹಿತ್ ಅವರ ಬಾಲ್ಯದ ಘಟನೆ!
ಗೌರವ್ ಕಪೂರ್ ನಡೆಸಿಕೊಡುವ “ಬ್ರೇಕ್‌ಫಾಸ್ಟ್ ವಿದ್ ಚಾಂಪಿಯನ್ಸ್’ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮ ತಮ್ಮ ಬಾಲ್ಯದ ಕಿತಾಪತಿಗಳನ್ನು ಬಿಡಿಸಿಟ್ಟಿದ್ದಾರೆ.”ನನ್ನ ಕುಟುಂಬದವರೆಲ್ಲರಿಗೂ ಕ್ರಿಕೆಟ್ ಅಂದರೆ ಜೀವ.
ದಿನದಲ್ಲಿ ಕನಿಷ್ಠ 16 ಗಂಟೆಯಾದರೂ ಕ್ರಿಕೆಟ್ ವೀಕ್ಷಿಸುತ್ತಿದ್ದರು. ಕುಟುಂಬದ ಹಿರಿಯರೆಲ್ಲ ಕ್ರಿಕೆಟ್ ಆಡುತ್ತಿದ್ದರು. ಅವರು ನನಗೂ ಅವಕಾಶ ನೀಡುತ್ತಿದ್ದರು. ನಮ್ಮ ಕಟ್ಟಡದಲ್ಲೇ ಆಡುತ್ತಿದ್ದಾಗ ನಾನು ಅಕ್ಕಪಕ್ಕದವರ ಮನೆಯ ಅನೇಕ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದೆ. ಒಮ್ಮೆ ಇದೇ ಕಾರಣಕ್ಕಾಗಿ ನನ್ನ ವಿರುದ್ದ ಪೊಲೀಸ್ ದೂರು ದಾಖಲಿಸಲಾಯಿತು. ಒಮ್ಮೆ ಪೊಲೀಸ್ ಒಬ್ಬ ಬಂದು, ಇನ್ನು ಕಿಟಕಿ ಗಾಜು ಒಡೆದರೆ ನಿನ್ನನ್ನು ಜೈಲಿಗೆ ಹಾಕುತ್ತೇನೆ ಎಂದು ಹೆದರಿಸಿ ಹೋದ! ಬಳಿಕ ನಾವು ಮೈದಾನದಲ್ಲಿ ಆಡಲಾರಂಭಿಸಿದೆವು…’ ಎಂದು ರೋಹಿತ್ ನೆನಪಿಸಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.