ಮೊಮ್ಮಗ ಗಾವಸ್ಕರ್‌ನಂಥ ಬ್ಯಾಟ್ಸ್‌ಮನ್ ಆಗಬೇಕು: ಜೆಫ್ ಬಾಯ್ಕಟ್ ಅಭಿಲಾಷೆ
Team Udayavani, Nov 4, 2019, 5:13 AM IST
ಲಂಡನ್: ಇಂಗ್ಲೆಂಡಿನ ಲೆಜೆಂಡ್ರಿ ಆರಂಭಕಾರ ಜೆಫ್ ಬಾಯ್ಕಟ್ ಈಗ ಅಜ್ಜನಾಗಿದ್ದಾರೆ. ಕಳೆದ ತಿಂಗಳು ಯಾರ್ಕಶೈರ್‌ನಲ್ಲಿ ಅವರ ಪುತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊಮ್ಮಗನ ಹೆಸರು ಜೋಶುವ. ಅಜ್ಜನಾಗಿರುವ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಾಯ್ಕಟ್, ಮೊಮ್ಮಗನೊಂದಿಗಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
“79ರ ಹರೆಯದಲ್ಲಿ ಅಜ್ಜನಾಗುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ನನ್ನ ಮೊಮ್ಮಗ ಜೋಶುವ ಕೂಡ ಕ್ರಿಕೆಟ್ ಕ್ಷೇತ್ರದಲ್ಲಿ ಮುಂದೆ ಬರಬೇಕು, ಸುನೀಲ್ ಗಾವಸ್ಕರ್‌ನಂಥ ಬ್ಯಾಟ್ಸ್‌ಮನ್ ಆಗಬೇಕು’ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ ಜೆಫ್ ಬಾಯ್ಕಟ್. ಇನ್ನೂ ಮುಂದುವರಿದು, “ಮೊಮ್ಮಗ ವಯಸ್ಸಿಗೆ ಬಂದ ಬಳಿಕ ಆತನನ್ನು ಗಾವಸ್ಕರ್ ಬಳಿ ಅಭ್ಯಾಸಕ್ಕೆ ಕರೆದೊಯ್ಯುವೆ. ಸನ್ನಿ ನನ್ನ ಗೆಳೆಯ. ಖಂಡಿತ ಇದನ್ನು ಅಲ್ಲಗಳೆಯಲಾರರು’ ಎಂದೂ ಹೇಳಿದ್ದಾರೆ.
ಜೆಫ್ ಬಾಯ್ಕಟ್ ಮತ್ತು ಸುನೀಲ್ ಗಾವಸ್ಕರ್ ಸಮಕಾಲೀನ ಕ್ರಿಕೆಟಿಗ ರಾಗಿದ್ದು, ಇಬ್ಬರೂ ಮಹಾನ್ ಆರಂಭಿಕರೆಂಬುದನ್ನು ಮರೆಯುವಂತಿಲ್ಲ. 1977ರ ಟೆಸ್ಟ್ ಪಂದ್ಯವೊಂದರಲ್ಲಿ ಎಲ್ಲ 5 ದಿನ ಅಂಗಳದಲ್ಲಿ ಕಳೆದ ಬಾಯ್ಕಟ್, 629 ನಿಮಿಷಗಳ ಕಾಲ ಕ್ರೀಸಿನಲ್ಲಿ ಉಳಿದಿದ್ದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.