ಹಾಕಿ: ಒಲಿಂಪಿಕ್‌ ಚಿನ್ನವಿಲ್ಲದೆ 40 ವರ್ಷ! ; 1980ರ ಮಾಸ್ಕೊ ಕೂಟದ ಬಂಗಾರವೇ ಕೊನೆಯದು…

Team Udayavani, Jul 29, 2020, 11:41 PM IST

ಹಾಕಿ: ಒಲಿಂಪಿಕ್‌ ಚಿನ್ನವಿಲ್ಲದೆ 40 ವರ್ಷ! ; 1980ರ ಮಾಸ್ಕೊ ಕೂಟದ ಬಂಗಾರವೇ ಕೊನೆಯದು…

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಒಲಿಂಪಿಕ್ಸ್‌ ಹಾಕಿಯೆಂದರೆ ಭಾರತವೇ ಕಿಂಗ್‌ ಎಂಬ ಕಾಲ ಒಂದಿತ್ತು.

1928ರಿಂದ ಮೊದಲ್ಗೊಂಡು ಎಂಟು ಚಿನ್ನ, ಒಂದು ಬೆಳ್ಳಿ, ಎರಡು ಕಂಚು ಹೆದ್ದ ಹೆಗ್ಗಳಿಕೆ ಭಾರತದ್ದು.

ಇದರಲ್ಲಿ 1928-1956ರ ಅವಧಿಯಲ್ಲಿ ಸತತ ಆರು ಸಲ ಕಿರೀಟ ಏರಿಸಿಕೊಂಡದ್ದು ಭಾರತದ ಅಸಾಮಾನ್ಯ ಸಾಧನೆಯೇ ಆಗಿದೆ.

ಆದರೆ 1980ರ ಬಳಿಕ ಭಾರತೀಯ ಹಾಕಿಗೆ ಪದಕದ ತೀವ್ರ ಬರಗಾಲ ಬಡಿದಿದೆ.

ಅಂದಿನ ಮಾಸ್ಕೊ ಒಲಿಂಪಿಕ್ಸ್‌ ಬಳಿಕ ಚಿನ್ನವಿರಲಿ, ಕನಿಷ್ಠ ಕಂಚು ಕೂಡ ಗೆಲ್ಲಲು ಭಾರತಕ್ಕೆ ಸಾಧ್ಯವಾಗಿಲ್ಲ.

1980ರಲ್ಲಿ ಸ್ಪೇನ್‌ ತಂಡವನ್ನು 4-3 ಅಂತರದಿಂದ ಮಣಿಸುವ ಮೂಲಕ ಭಾರತ ಬಂಗಾರಕ್ಕೆ ಮುತ್ತಿಕ್ಕಿತ್ತು. 1980ರ ಜುಲೈ 29ರಂದು ಭಾರತಕ್ಕೆ ಈ ಪದಕ ಒಲಿದಿತ್ತು. ಬುಧವಾರ ಇದಕ್ಕೆ ಭರ್ತಿ 40 ವರ್ಷ ತುಂಬಿತು.

ಆರೇ ತಂಡಗಳ ಸ್ಪರ್ಧೆ
ಆದರೆ ಇದೇನೂ ಹೆಗ್ಗಳಿಕೆಯ ಪದಕವಾಗಿರಲಿಲ್ಲ. ಅಂದಿನ ಮಾಸ್ಕೊ ಕೂಟಕ್ಕೆ ಬಹಳಷ್ಟು ದೇಶಗಳು ಬಹಿಷ್ಕಾರ ಹಾಕಿದ್ದವು. ಹಾಕಿಯಲ್ಲಿ ಕಣಕ್ಕಿಳಿದದ್ದು 6 ತಂಡಗಳು ಮಾತ್ರ! ಭಾರತ, ಸ್ಪೇನ್‌ ಹೊರತುಪಡಿಸಿ ಉಳಿದೆಲ್ಲವೂ ಲೆಕ್ಕದ ಭರ್ತಿಯ ತಂಡಗಳಾಗಿದ್ದವು. ಇವುಗಳೆಂದರೆ ಪೋಲೆಂಡ್‌, ಕ್ಯೂಬಾ, ತಾಂಜಾನಿಯಾ ಮತ್ತು ಆತಿಥೇಯ ರಶ್ಯ.

ದುರ್ಬಲ ತಾಂಜಾನಿಯಾವನ್ನು 18-0 ಗೋಲುಗಳಿಂದ ಮಣಿಸಿದ ಭಾರತ ಭರ್ಜರಿ ಆರಂಭ ಮಾಡಿತು. ಆದರೆ ಪೋಲೆಂಡ್‌ ಮತ್ತು ಸ್ಪೇನ್‌ ವಿರುದ್ಧ ಡ್ರಾ ಸಾಧಿಸಿತು. ಬಳಿಕ ಕ್ಯೂಬಾವನ್ನು 13-0 ಅಂತರದಿಂದ, ರಶ್ಯವನ್ನು 4-2ರಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿತು.

ರೋಚಕ ಹಣಾಹಣಿ
ಫೈನಲ್‌ ಹಣಾಹಣಿಯ ಮೊದಲಾರ್ಧದಲ್ಲಿ 2-0 ಮುನ್ನಡೆ ಸಾಧಿಸಿದ ಭಾರತ 16 ವರ್ಷಗಳ ಬಳಿಕ ಚಿನ್ನವನ್ನು ಖಾತ್ರಿಪಡಿಸಿತು. ಎರಡೂ ಗೋಲುಗಳನ್ನು ಸುರೀಂದರ್‌ ಸಿಂಗ್‌ ಸೋಧಿ ಬಾರಿಸಿದ್ದರು. ವಿರಾಮದ ಆರಂಭದಲ್ಲೇ ಎಂ.ಕೆ. ಕೌಶಿಕ್‌ ಮತ್ತೂಂದು ಗೋಲು ಸಿಡಿಸಿದರು. ಬಳಿಕ ಸ್ಪೇನ್‌ ನಾಯಕ ಜುವಾನ್‌ ಅಮಟ್‌ 2 ಗೋಲು ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರು. ಬಳಿಕ ಮೊಹಮ್ಮದ್‌ ಶಾಹಿದ್‌ 4ನೇ ಗೋಲಿನ ಕಾಣಿಕೆ ನೀಡಿದರು. ಅಮಟ್‌ ಹ್ಯಾಟ್ರಿಕ್‌ ಪೂರೈಸಿದರು. ಆದರೆ ಅದೃಷ್ಟ ವಿ. ಭಾಸ್ಕರನ್‌ ಬಳಗಕ್ಕೆ ಒಲಿದಿತ್ತು!

ಟೋಕಿಯೊದಲ್ಲಿ ಭಾರತದ ಹಾಕಿ ಸುವರ್ಣ ಯುಗ ಮರುಕಳಿಸೀತೇ ಎಂಬ ನಿರೀಕ್ಷೆಯೀಗ ಒಂದು ವರ್ಷ ಮುಂದೂಡಲ್ಪಟ್ಟಿದೆ.

ಟಾಪ್ ನ್ಯೂಸ್

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Dangerous Stunt: ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಬಾಲಕನನ್ನು ಕೂರಿಸಿ ರೀಲ್ಸ್…

Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಏಕದಿನ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಏಕದಿನ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

3rd ODI ವನಿತಾ ಏಕದಿನ: ವಿಂಡೀಸ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ಗೆ ಭಾರತ ಸಜ್ಜು

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ  211ಕ್ಕೆ ಆಲೌಟ್‌

PAK Vs SA: ಸೆಂಚುರಿಯನ್‌ ಟೆಸ್ಟ್‌ ಪಾಕಿಸ್ಥಾನ 211ಕ್ಕೆ ಆಲೌಟ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ‌

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

saavu

New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.