ಐಪಿಎಲ್‌ ಹರಾಜು ಜೋರು ಕೋಟಿ ವೀರರು ಯಾರು ?


Team Udayavani, Feb 20, 2017, 3:45 AM IST

koti.jpg

- ಬೆಂಗಳೂರಿನಲ್ಲಿಂದು ಐಪಿಎಲ್‌ ಆಟಗಾರರ ಹರಾಜು
-  8 ತಂಡಗಳ ಫ್ರಾಂಚೈಸಿಗಳು ಹರಾಜಿನಲ್ಲಿ ಭಾಗಿ
– ದೇಶಿ ಕ್ರಿಕೆಟಿಗರ ಮೇಲೆ ಫ್ರಾಂಚೈಸಿಗಳ ಹದ್ದಿನ ಕಣ್ಣು
- ಆಟಗಾರರನ್ನು ಖರೀದಿಸಲು ಚಿಂತನ-ಮಂಥನ

ಬೆಂಗಳೂರು: ಹತ್ತನೇ ಆವೃತ್ತಿಯ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ ಬೆಂಗಳೂರಿನಲ್ಲಿ ನಡೆಯಲಿದೆ. ದೇಶಿ, ವಿದೇಶಿ ಸಹಿತ ಒಟ್ಟು 357 ಆಟಗಾರರು ಹರಾಜಿನಲ್ಲಿದ್ದಾರೆ. 8 ಫ್ರಾಂಚೈಸಿಗಳು ತೀವ್ರ ಲೆಕ್ಕಾಚಾರಕ್ಕೆ ಇಳಿದಿವೆ. ಆಟಗಾರರನ್ನು ಖರೀದಿಸುವ ಚಿಂತನ ಮಂಥನದಲ್ಲಿ ತೊಡಗಿವೆ. 

ಗುಣಮಟ್ಟದ ಆಟಗಾರರನ್ನು ತಮ್ಮತ್ತ ಸೆಳೆದು ಕೊಳ್ಳುವುದು, ಬಲಿಷ್ಠ ತಂಡವನ್ನು ಕಟ್ಟುವುದು, ಐಪಿಎಲ್‌ ಪ್ರಶಸ್ತಿ ಗೆಲ್ಲುವುದು… ಇವು ಫ್ರಾಂಚೈಸಿಗಳ ಮುಖ್ಯ ಗುರಿ. ಆದರೆ ಯಾರ ಲೆಕ್ಕಾಚಾರ ಹೇಗಿದೆ? ಬಲಿಷ್ಠ ಆಟಗಾರರಿಗೆ ಹಣ ಹೂಡುವ ಫ್ರಾಂಚೈಸಿ ಯಾರು? ಹರಾಜಿನಲ್ಲಿ ಅತೀ ಹೆಚ್ಚಿನ ಮೊತ್ತವನ್ನು ಪಡೆದು ಯಾರಾಗ್ತಾರೆ ಕೋಟಿ ವೀರರು? ಇವೆಲ್ಲ ತೀವ್ರ ಕುತೂಹಲದ ಪ್ರಶ್ನೆಗಳು. ಅಭಿಮಾನಿಗಳ ಎಲ್ಲ ಕೌತುಕಕ್ಕೂ ಸೋಮವಾರ ಸಂಜೆ ವೇಳೆ ಉತ್ತರ ಸಿಗಲಿದೆ.

ಹರಾಜಿನಲ್ಲಿ 8 ಫ್ರಾಂಚೈಸಿಗಳು  
ಡೆಲ್ಲಿ ಡೇರ್‌ಡೆವಿಲ್ಸ್‌, ಗುಜರಾತ್‌ ಲಯನ್ಸ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಕೋಲ್ಕತಾ ನೈಟ್‌ರೈಡರ್, ಮುಂಬೈ ಇಂಡಿಯನ್ಸ್‌, ರೈಸಿಂಗ್‌ ಪುಣೆ ಸೂಪರ್‌ ಜಯಂಟ್ಸ್‌, ರಾಯಲ್‌ ಚಾಲೆಂಜರ್ ಬೆಂಗಳೂರು,  ಸನ್‌ರೈಸರ್ ಹೈದರಾಬಾದ್‌ ತಂಡಗಳ ಫ್ರಾಂಚೈಸಿಗಳು ಹರಾಜಿನಲ್ಲಿ ಪಾಲ್ಗೊಳ್ಳಲಿವೆ.

ರಾಷ್ಟ್ರೀಯ ಕ್ರಿಕೆಟಿಗರ ಮೇಲೆ ಗಮನ
ಈ ಬಾರಿ ಹರಾಜಿನಲ್ಲಿ ಫ್ರಾಂಚೈಸಿಗಳು ವಿದೇಶಿ ಮತ್ತು ಸ್ಟಾರ್‌ ಕ್ರಿಕೆಟಿಗರ ಮೇಲೆ ಹೆಚ್ಚಿನ ಬಂಡವಾಳ ಹೂಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ, ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡದ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಹರಾಜಿನಲ್ಲಿ ಅಂತಾ ರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳನ್ನು ಆಡದ 227 ಕ್ರಿಕೆಟಿಗರಿದ್ದಾರೆ. ಇವರು ಹರಾಜಿನ ಹಾಟ್‌ ಫೇವರಿಟ್‌ ಆಗುವ ಸಾಧ್ಯತೆಗಳಿವೆ.

ಗಮನ ಸೆಳೆಯುವ ವಿದೇಶಿ ಕ್ರಿಕೆಟಿಗರು
ವಿದೇಶಿ ಆಟಗಾರರ ಪೈಕಿ ಹರಾಜಿನಲ್ಲಿ ನಿರೀಕ್ಷೆಗೂ ಮೀರಿ ಹಣ ಪಡೆಯಬಹುದಾದ ಸಂಭಾವ್ಯ ಕ್ರಿಕೆಟಿಗರಿ ದ್ದಾರೆ. ಸದ್ಯ ಹರಾಜಿನಲ್ಲಿ 130 ವಿದೇಶಿ ಆಟಗಾರರು ಇದ್ದಾರೆ. ಬೆನ್‌ ಸ್ಟೋಕ್ಸ್‌, ಎವೋನ್‌ ಮಾರ್ಗನ್‌, ಏಂಜೆಲೊ ಮ್ಯಾಥ್ಯೂಸ್‌, ಪ್ಯಾಟ್ರಿಕ್‌ ಕಮಿನ್ಸ್‌, ಮಿಚೆಲ್‌ ಜಾನ್ಸನ್‌, ಕ್ರಿಸ್‌ ವೋಕ್ಸ್‌ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದು, ಭಾರೀ ನಿರೀಕ್ಷೆ ಮೂಡಿಸಿದ್ದಾರೆ.

ಅಫ್ಘಾನ್‌, ಯುಎಇ ಆಟಗಾರರ ಸರದಿ
ಸಹ ಸದಸ್ಯ ರಾಷ್ಟ್ರದ ಒಟ್ಟು 6 ಮಂದಿ ಕ್ರಿಕೆಟಿಗರು ಈ ಬಾರಿ ಐಪಿಎಲ್‌ ಹರಾಜಿನಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಅಫ್ಘಾನಿಸ್ಥಾನ ತಂಡದ ನಾಯಕ ಆಸYರ್‌ ಸ್ತಾನಿಕ್‌ಜಾಯ್‌, ಮೊಹಮ್ಮದ್‌ ನಬಿ. ಮೊಹಮ್ಮದ್‌ ಶೆಹಜಾದ್‌, ರಶೀದ್‌ ಖಾನ್‌, ದೌಲತ್‌ ಜದ್ರಾನ್‌ 50 ಲಕ್ಷ ರೂ. ಒಳಗಿನ ಮೂಲ ಬೆಲೆ ಪಡೆದಿದ್ದಾರೆ ಎನ್ನು ವುದು ವಿಶೇಷ.  ಅಂತೆಯೇ ಯುಎಇ  ತಂಡದ ಆಟಗಾರ ಚಿರಾಗ್‌ ಸೂರಿ ಕೂಡ ಹರಾಜಿನ ಪ್ರಮುಖ ಆಕರ್ಷಣೆ. ಅವರು  10  ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ.

ಹಾಟ್‌ ಫೇವರಿಟ್‌
ಅಗ್ರ 6 ವಿದೇಶಿ ಕ್ರಿಕೆಟಿಗರು ಮತ್ತು ಮೂಲ ಬೆಲೆ

ಎವೋನ್‌ ಮಾರ್ಗನ್‌ (ಇಂಗ್ಲೆಂಡ್‌-ಬ್ಯಾಟ್ಸ್‌ಮನ್‌): 2 ಕೋಟಿ ರೂ.
ಪ್ಯಾಟ್ರಿಕ್‌ ಕಮಿನ್ಸ್‌ (ಆಸ್ಟ್ರೇಲಿಯ- ಬೌಲರ್‌): 2 ಕೋಟಿ ರೂ.
ಮಿಚೆಲ್‌ ಜಾನ್ಸನ್‌ (ಆಸ್ಟ್ರೇಲಿಯ-ಬೌಲರ್‌): 2 ಕೋಟಿ ರೂ.
ಕ್ರಿಸ್‌ ವೋಕ್ಸ್‌ (ಇಂಗ್ಲೆಂಡ್‌- ಆಲ್‌ರೌಂಡರ್‌): 2 ಕೋಟಿ ರೂ.
ಬ್ರಾಡ್‌ ಹ್ಯಾಡಿನ್‌ (ಆಸ್ಟ್ರೇಲಿಯ-ವಿಕೆಟ್‌ ಕೀಪರ್‌): 1.50  ಕೋಟಿ ರೂ.
ಕ್ಯಾಗಿಸೊ ರಬಾಡ (ದಕ್ಷಿಣ ಆಫ್ರಿಕಾ-ಬೌಲರ್‌): 1 ಕೋಟಿ ರೂ.

ಭಾರತದ ಅಗ್ರ 6 ಆಟಗಾರರು ಮತ್ತು ಮೂಲ ಬೆಲೆ
ಇಶಾಂತ್‌ ಶರ್ಮ (ಬೌಲರ್‌ ): 2 ಕೋಟಿ ರೂ.
ಚೇತೇಶ್ವರ್‌ ಪೂಜಾರ (ಬ್ಯಾಟ್ಸ್‌ಮನ್‌): 50 ಲಕ್ಷ ರೂ.
ಇರ್ಫಾನ್‌ ಪಠಾಣ್‌ (ಆಲ್‌ರೌಂಡರ್‌): 50 ಲಕ್ಷ ರೂ.
ರಿಷಿ ಧವನ್‌ (ಆಲ್‌ರೌಂಡರ್‌): 30 ಲಕ್ಷ ರೂ.
ಪರ್ವೇಜ್‌ ರಸೂಲ್‌ (ಆಲ್‌ರೌಂಡರ್‌): 30 ಲಕ್ಷ ರೂ.
ಕರಣ್‌ ಶರ್ಮ (ಆಲ್‌ರೌಂಡರ್‌): 30 ಲಕ್ಷ ರೂ.

ಟಾಪ್ ನ್ಯೂಸ್

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.