Suyash Sharma: ಆರ್ ಸಿಬಿ ಬ್ಯಾಟರ್ ಗಳನ್ನು ಕಾಡಿದ ನೀಳಕೇಶದ ಚೆಲುವ ಯಾರು?
Team Udayavani, Apr 7, 2023, 10:01 AM IST
ಕೋಲ್ಕತ್ತಾ: ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಪಂದ್ಯದಲ್ಲಿ ಮುಗ್ಗರಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫಾಫ್ ಪಡೆ 81 ರನ್ ಅಂತರದ ಸೋಲನುಭವಿಸಿತು.
205 ರನ್ ಗುರಿ ಬೆನ್ನತ್ತಿದ ಆರ್ ಸಿಬಿಗೆ ಕೆಕೆಆರ್ ಸ್ಪಿನ್ನರ್ ಗಳು ಕಾಡಿದರು. ಅನುಭವಿಗಳಾದ ಸುನೀಲ್ ನರೈನ್, ವರುಣ್ ಚಕ್ರವರ್ತಿ ಜೊತೆ ಹೊಸ ಆಟಗಾರ ಸುಯಶ್ ಶರ್ಮಾ ಈಡನ್ ಗಾರ್ಡನ್ ನಲ್ಲಿ ಮಿಂಚಿದರು. ಈ ಮೂವರೇ ಆರ್ ಸಿಬಿಯ 9 ವಿಕೆಟ್ ಕಿತ್ತರು.
ಈ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಬದಲು ಇಂಪಾಕ್ಟ್ ಪ್ಲೇಯರಾಗಿ ಕಣಕ್ಕಿಳಿದ ಸುಯಶ್ ಶರ್ಮಾ ಎಲ್ಲರ ಗಮನ ಸೆಳೆದರು. 19 ವರ್ಷದ ಈ ನೀಳ ಕೇಶದ ಮಿಸ್ಟ್ರಿ ಸ್ಪಿನ್ನರ್ ಹೊಸದಿಲ್ಲಿಯವರು.
ಕಳೆದ ವರ್ಷ ಡಿಸೆಂಬರ್ ನಲ್ಲಿ ನಡೆದ ಮಿನಿ ಹರಾಜಿನಲ್ಲಿ ದೆಹಲಿಯ ಸುಯಶ್ ಶರ್ಮಾ ಅವರನ್ನು 20 ಲಕ್ಷ ರೂ.ಗೆ ಕೆಕೆಆರ್ ಖರೀದಿಸಿತ್ತು. ಗುರುವಾರ ಆರ್ ಸಿಬಿ ವಿರುದ್ಧ ಆಡುವ ಬಳಗದಲ್ಲಿ ಸುಯಶ್ ಹೆಸರು ಇರಲಿಲ್ಲ, ಬೌಲಿಂಗ್ ವೇಳೆ ಇಂಪಾಕ್ಟ್ ಆಟಗಾರನಾಗಿ ಐಪಿಎಲ್ ಗೆ ಪದಾರ್ಪಣೆ ಮಾಡಿದರು.
ಇದನ್ನೂ ಓದಿ:Dubai ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯನಿಗೆ 11 ಕೋಟಿ ರೂ. ಪರಿಹಾರ
ಮತ್ತೊಂದು ಗಮನಿಸಬೇಕಾದ ವಿಚಾರವೆಂದರೆ, ದೆಹಲಿಯ U-25 ತಂಡಕ್ಕಾಗಿ ಆಡುವ ಸುಯಶ್ ಇದಕ್ಕೂ ಮೊದಲು ಯಾವುದೇ ಲಿಸ್ಟ್ ಎ, ಪ್ರಥಮ ದರ್ಜೆ, ಅಥವಾ ಟಿ20 ಪಂದ್ಯಗಳನ್ನು ಆಡಿಲ್ಲ.
ಪಂದ್ಯದ ನಂತರ ಸುಯಶ್ ಬಗ್ಗೆ ಮಾತನಾಡಿದ ಕೆಕೆಆರ್ ನಾಯಕ ನಿತೀಶ್ ರಾಣಾ, “ಸುಯಶ್ ಆತ್ಮವಿಶ್ವಾಸದ ಯುವಕ ಮತ್ತು ಅವರು ತಮ್ಮ ಮೇಲೆ ನಂಬಿಕೆ ಹೊಂದಿದ್ದಾರೆ. ಅವರು ತಮ್ಮ ಅವಕಾಶವನ್ನು ಚೆನ್ನಾಗಿ ಬಳಸಿದ್ದಾರೆ, ಅವರು ಆ ರೀತಿ ಬೌಲ್ ಮಾಡುವುದನ್ನು ನೋಡುವುದು ಅದ್ಭುತವಾಗಿದೆ” ಎಂದು ಹೇಳಿದರು.
ಕೆಕೆಆರ್ ಕೋಚ್ ಚಂದ್ರಕಾಂತ್ ಪಂಡಿತ್ ಮಾತನಾಡಿ, “ವರುಣ್, ಸುನೀಲ್ ನರೈನ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಹೊಸಬರು ಬೆಂಬಲ ನೀಡಿದರು. ನಾವು ಸುಯಶ್ ನನ್ನು ಟ್ರಯಲ್ ಮ್ಯಾಚ್ ಗಳಲ್ಲಿ ನೋಡಿದ್ದೇವೆ, ಆತ ಬೌಲಿಂಗ್ ಮಾಡುವ ವಿಧಾನ ಚೆನ್ನಗಿದೆ. ವೇಗವಾಗಿ ಚೆಂಡೆಸುತ್ತಾರೆ. ಅನನುಭವಿ ಆದರೆ ಉತ್ತಮ ಆತ್ಮವಿಶ್ವಾಸದಿಂದ ಆಡುತ್ತಾರೆ” ಎಂದರು.
ಆರ್ ಸಿಬಿ ವಿರುದ್ಧ ನಾಲ್ಕು ಓವರ್ ಬೌಲಿಂಗ್ ಮಾಡಿದ ಸುಯಶ್ ಶರ್ಮಾ 30 ರನ್ ನೀಡಿ ಮೂರು ವಿಕೆಟ್ ಕಿತ್ತರು. ದಿನೇಶ್ ಕಾರ್ತಿಕ್, ಅನುಜ್ ರಾವತ್ ಮತ್ತು ಕರಣ್ ಶರ್ಮಾ ಅವರನ್ನು ಸುಯಶ್ ಔಟ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.