ಪತ್ನಿಗಾಗಿ ಅಥ್ಲೀಟ್ಸ್ ಹೊರಹಾಕಿದ ಕ್ರೀಡಾ ನಿರ್ದೇಶಕ?
Team Udayavani, Oct 29, 2017, 6:10 AM IST
ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರ್ವಾಲ್ ಪತ್ನಿಗೆ ಅವಮಾನಪಡಿಸಿದ
ಎನ್ನುವ ಕಾರಣದಿಂದ ರಾಜ್ಯದ ಅಥ್ಲೆಟಿಕ್ಸ್ ಕೋಚ್ ಒಬ್ಬರ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆಯೇ? ಹೀಗೊಂದು ಆರೋಪವನ್ನು ರಾಜ್ಯದ ಅಥ್ಲೆಟಿಕ್ಸ್ ಕೋಚ್ ಯತೀಶ್ ಕುಮಾರ್ ಮಾಡಿದ್ದಾರೆ.
ಯತೀಶ್ ಕುಮಾರ್ ತಮ್ಮ ವಿದ್ಯಾರ್ಥಿಗಳೊಂದಿಗೆ ಕಂಠೀರವ ಕ್ರೀಡಾಂಗಣಕ್ಕೆ ಶನಿವಾರ ಬೆಳಗ್ಗೆ ಅಭ್ಯಾಸಕ್ಕೆ ತೆರಳಿದ್ದಾರೆ. ಈ ವೇಳೆ ಅವರಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಬೇರೆ ದಾರಿ ಕಾಣದೆ ಯತೀಶ್ ಕುಮಾರ್ ಅಥ್ಲೀಟ್‌ಗಳನ್ನು ಕರೆದುಕೊಂಡು ಕಬ್ಬನ್‌ಪಾರ್ಕ್‌ಗೆ ತೆರಳಿ ಅಭ್ಯಾಸ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿಂದೆ ಇಲಾಖೆ ನಿರ್ದೇಶಕ ಅನುಪಮ್ ಇದ್ದಾರೆ ಎನ್ನುವುದು ಯತೀಶ್ ಅವರ ನೇರ ಆರೋಪವಾಗಿದೆ.
ಯಾರಿವರು ಯತೀಶ್?: ಯತೀಶ್ ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನವರು. ಇವರು 400 ಮೀ. ಓಟದ ಅಥ್ಲೀಟ್ ಆಗಿದ್ದರು. ರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಂಡಿರುವ ಅನುಭವ ಇದೆ. ಅಥ್ಲೀಟ್ ಆಗಿ ಟ್ರ್ಯಾಕ್‌ಗೆ ವಿದಾಯ ಹೇಳಿದ ಬಳಿಕ ಅವರು ಆಸ್ಟ್ರೇಲಿಯಾಕ್ಕೆ ತೆರಳಿದರು. ಅಲ್ಲಿನ “ಎ1′ ದರ್ಜೆಯ ಕೋಚ್ ತರಬೇತಿ ಪಡೆದು ರಾಜ್ಯಕ್ಕೆ ಬಂದರು. ಸದ್ಯ ಬೆಂಗಳೂರಿನಲ್ಲಿ ಕೋಚ್ ಆಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಬಳಿ ಒಟ್ಟಾರೆ 15 ಮಂದಿ ಅಥ್ಲೀಟ್‌ಗಳು ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರು ಅಂತಾರಾಷ್ಟ್ರೀಯ ಅಥ್ಲೀಟ್‌ಗಳಾಗಿದ್ದಾರೆ. ಉಳಿದಂತೆ 9 ಮಂದಿ ರಾಷ್ಟ್ರೀಯ, 4 ಮಂದಿ ರಾಜ್ಯ ಮಟ್ಟದ ಅಥ್ಲೀಟ್‌ಗಳಿದ್ದಾರೆ.
ಅನುಪಮ್ ಜತೆಗೆ ಏನಿದು ವಿವಾದ?: ಸೆ.18ರಂದು ನಡೆದ ಘಟನೆಯೊಂದಿಗೆ ಯತೀಶ್ ಹಾಗೂ ಅನುಪಮ್ ನಡುವೆ ಮನಸ್ತಾಪ ಉಂಟಾ ಗಿತ್ತು. ಇದನ್ನು ಸ್ವತಃ ಉದಯವಾಣಿಗೆ ಯತೀಶ್ ಕುಮಾರ್ ವಿವರಿಸಿದರು. ಸಾರಾಂಶ ಹೀಗಿದೆ.
“ಸೆ.18ರಂದು ರಾಷ್ಟ್ರೀಯ ಕೂಟಕ್ಕಾಗಿ ವಿದ್ಯಾರ್ಥಿಗಳಿಗೆ ನಾನು ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ನೀಡುತ್ತಿದ್ದೆ. ಈ ವೇಳೆ
ಅನುಪಮ್ ಅಗರ್ವಾಲ್ ಪತ್ನಿ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಮೇಲೆ ವಾಕಿಂಗ್ ಮಾಡು ತ್ತಿದ್ದರು. ಈ ಸಂದರ್ಭ ನಮ್ಮ ತಂಡದ ವಿದ್ಯಾರ್ಥಿನಿ ಯೊಬ್ಬರಿಗೆ ಅವರ ಪತ್ನಿ ಅಡ್ಡ ಬಂದಿದ್ದರಿಂದ ಸ್ವಲ್ಪ ಬದಿಗೆ ಸರಿಯುವಂತೆ ಕ್ರೀಡಾ ಪಟು ಹೇಳಿದ್ದಾರೆ. ಇದನ್ನು ಗಮನಿಸಿದ ಅನು ಪಮ್ ಅಗರ್ವಾಲ್ ನನ್ನ ಬಳಿಗೆ ಬಂದು ಮನಬಂದಂತೆ ಬೈದರು. ನನ್ನ ಪತ್ನಿ ಜತೆ ನೀನು ಅನುಚಿತ ವರ್ತನೆ ತೋರಿದ್ದೀಯಾ. ಯಾರು ನಿನಗೆ ಇಲ್ಲಿ ಅಭ್ಯಾಸ ನಡೆಸಲು ಅವಕಾಶ ನೀಡಿದ್ದು? ಇಲಾಖೆಗೆ ನೀನು μàಸ್ ಕಟ್ಟುತ್ತಿದ್ದೀಯಾ? ಎಲ್ಲಿದೆ ನಿನ್ನ ಅರ್ಹತಾ ಪತ್ರ? ಎಂದೆಲ್ಲ ಏರು ಧ್ವನಿಯಲ್ಲಿ ಮಾತನಾಡಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ನಯವಾಗಿಯೇ ಮಾತನಾಡಿದೆ. ಅವರೊಂದಿಗೆ ಅನುಚಿತ ವರ್ತನೆ ತೋರಿಲ್ಲ.
ನಮ್ಮ ಮಹಿಳಾ ಅಥ್ಲೀಟ್ ಮಾತನಾಡಿದ್ದಾರೆ ಅಷ್ಟೇ ಎಂದು ಹೇಳಿದೆ. ಆದರೆ ಅವರು ಕೇಳಲಿಲ್ಲ. ಈ ವೇಳೆ ಜಗದೀಶ್ ಎನ್ನುವ ಭದ್ರತಾ ಸಿಬ್ಬಂದಿ ನನಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಸೆ.20ರಂದು ನಾನು ಅರ್ಹತಾ ಪ್ರಮಾಣ ಪತ್ರವನ್ನು ಸಲ್ಲಿಸಲು ಇಲಾಖೆ ನನಗೆ ನೋಟಿಸ್ ಜಾರಿ ಮಾಡಿತು. ನಾನು ಪ್ರಮಾಣ ಪತ್ರ ಸಲ್ಲಿಸಿದೆ. ಆದರೆ ಅದಕ್ಕೆ ಇಲಾಖೆಯಿಂದ ಪ್ರತಿಕ್ರಿಯೆ ಬರಲಿಲ್ಲ. ಇದಾದ ಬಳಿಕ ಕಂಠೀರವದಲ್ಲಿ ನಮಗೆ ಅಭ್ಯಾಸ ನಡೆಸಲು ಬಿಡಲಿಲ್ಲ. ಗೇಟ್ ನಿಂದ ಹೊರಗೆ ಕಳುಹಿಸಿದರು. ಇದರ ವಿರುದಟಛಿ ಪೊಲೀಸ್ ದೂರು ನೀಡಿದೆ. ಅದನ್ನು ಪೊಲೀಸರು ಸ್ವೀಕರಿಸಲಿಲ್ಲ. ಕ್ರೀಡಾ ಸಚಿವರು ಬಳಿ ಹೋದೆ. ಅವರಿಂದಲೂ ನ್ಯಾಯ ಸಿಗಲಿಲ್ಲ.ಬಳಿಕ ಇಲಾಖೆ ನಿರ್ದೇಶಕರ ಬಳಿ ಹೋಗಿ ಕ್ಷಮೆ ಕೇಳಿದೆವು.ಅದನ್ನು ಅವರು ಪುರಸ್ಕರಿಸಿದರು. ಆದರೆ ಈಗ ಮತ್ತೆ ಅಭ್ಯಾಸ ನಡೆಸಲು ಅವಕಾಶ ನಿರಾಕರಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
India Cricket: ಸೀಮಿತ ಓವರ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Udupi: ಇನ್‌ಸ್ಟಾಗ್ರಾಂ ಲಿಂಕ್ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ
Bajpe: ಗುರುಪುರ ಪೇಟೆಯ ಹಲವೆಡೆ ಕಳವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.