ಕೊಹ್ಲಿ ಮದುವೆಯಲ್ಲಿ ಹಾಜರಿದ್ದ ಆ ಒಬ್ಬ ಕ್ರಿಕೆಟಿಗ ಯಾರು ಗೊತ್ತಾ?
Team Udayavani, Dec 13, 2017, 11:51 AM IST
ನವದೆಹಲಿ: ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ದೂರದ ಇಟಲಿಯಲ್ಲಿ ಸೋಮವಾರ ದಾಂಪತ್ಯ ಜೀವನಕ್ಕೆ ಅಡಿಯಿರಿಸಿದರು. ಎಲ್ಲರನ್ನೂ ಕಾಡುತ್ತಿದ್ದ ಕುತೂಹಲವೊಂದಕ್ಕೆ ತೆರೆ ಬಿತ್ತು. ಭಾರತ ತಂಡದ ಈಗಿನ ಕ್ರಿಕೆಟಿಗರ್ಯಾರಿಗೂ ಈ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಎಲ್ಲರೂ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ವ್ಯಸ್ತರಾಗಿದ್ದಾಗಲೇ ಕೊಹ್ಲಿ ಮದುವೆ ನಡೆದಿದೆ. ಹಾಗಾದರೆ ಮಾಜಿ ಕ್ರಿಕೆಟಿಗರ್ಯಾರಾದರೂ ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆಯೇ ಎಂಬ ಕುತೂಹಲ ಸಹಜ.
ಕೊಹ್ಲಿ ಮದುವೆಗೆ ಕೇವಲ ಇಬ್ಬರು ಮಾಜಿಗಳಿಗಷ್ಟೇ ಆಹ್ವಾನ ನೀಡಲಾಗಿದೆ, ಇವರೆಂದರೆ ಸಚಿನ್ ತೆಂಡುಲ್ಕರ್ ಮತ್ತು ಯುವರಾಜ್ ಸಿಂಗ್ ಎಂಬುದು ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ ಸಚಿನ್ ಮತ್ತು ಯುವರಾಜ್ ಈ ಮದುವೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕೊಹ್ಲಿ-ಅನುಷ್ಕಾ ವಿವಾಹಕ್ಕೆ ಸಾಕ್ಷಿಯಾದದ್ದು ಕೇವಲ ಒಬ್ಬ ಕ್ರಿಕೆಟಿಗ ಎಂಬುದಾಗಿ ತಿಳಿದು ಬಂದಿದೆ. ಆದರೆ ಈತನ ಹೆಸರನ್ನು
ಈವರೆಗೆ ಯಾರೂ ಕೇಳಿಲ್ಲ ಎಂಬುದೊಂದು ಸ್ವಾರಸ್ಯ! ಈ ಕ್ರಿಕೆಟಿಗನ ಹೆಸರು ವರ್ತಿಕ್ ತಿಹಾರಾ! ಇವರು ಕೊಹ್ಲಿಯ ಬಾಲ್ಯದ ಕ್ರಿಕೆಟ್ ತಂಡದ ನಾಯಕರಾಗಿದ್ದರು. 12 ವರ್ಷಗಳ ಹಿಂದೆ ವರ್ತಿಕ್ ಸಾರಥ್ಯದಲ್ಲೇ ಕೊಹ್ಲಿ 17 ವಯೋಮಿತಿಯೊಳಗಿನ ತಂಡದಲ್ಲಿ ಆಡಿದ್ದರು. ವಿರಾಟ್ ಹಾಗೂ ವರ್ತಿಕ್ ಆತ್ಮೀಯ ಗೆಳೆಯರು. ಕೊಹ್ಲಿ ಕುಟುಂಬದ ಎಲ್ಲ ಸಮಾರಂಭಗಳಲ್ಲೂ ವರ್ತಿಕ್ ತಪ್ಪದೇ ಹಾಜರಿರುತ್ತಾರೆ.
ಈಗ ಕೊಹ್ಲಿ ಮದುವೆಗೂ ವಿಶೇಷ ಆಮಂತ್ರಣದ ಮೇರೆಗೆ ಆಗಮಿಸಿ ಗೆಳೆಯನನ್ನು ಹರಸಿದ್ದಾರೆ.
“ಮೆಹೂºಬಾ ಖಯಾಮತ್ ಹೋಗಿ’ ಹಾಡಿದ ಕೊಹ್ಲಿ
ತಮ್ಮ ಮದುವೆಯ ದಿನ ವಿರಾಟ್ ಕೊಹ್ಲಿ ಹಾಡಿದ್ದಾರೆ. ಅದೀಗ ಯೂಟ್ಯೂಬ್‌ನಲ್ಲಿ ಹಬ್ಬಿ ಹರಿದಾಡುತ್ತಿದೆ. ಬಾಲಿವುಡ್‌ನ ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರು ಮಿಸ್ಟರ್ ಎಕ್ಸ್ ಇನ್ ಮುಂಬೈ ಎಂಬ ಸಿನಿಮಾಕ್ಕೆ ಹಾಡಿದ್ದ ಮೆಹೂºಬಾ ಖಯಾಮತ್ ಹೋಗಿ ಗೀತೆಯನ್ನು ಹಾಡುವ ಮೂಲಕ ಕೊಹ್ಲಿ ಗಾಯಕರಾಗಿ ಬದಲಾಗಿದ್ದಾರೆ! ಇವರ ಹಾಡಿಗೆ ಸ್ವತಃ ಅನುಷ್ಕಾ ತಲೆದೂಗಿ ಚಪ್ಪಾಳೆ ತಟ್ಟಿದ್ದಾರೆ.
ನವ ದಂಪತಿಗೆ ಪಾಕ್ ಕ್ರಿಕೆಟಿಗರ ಶುಭಾಶಯ
ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಇಟಲಿಯಲ್ಲಿ ಗೃಹಸ್ಥಾ ಶ್ರಮಕ್ಕೆ ಕಾಲಿಟ್ಟಿರುವ
ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಗಣ್ಯರು ಶುಭಾಶಯಗಳ ಮಳೆಯನ್ನೇ ಸುರಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟಿಗರು ಕೂಡ
ಇದಕ್ಕೆ ಹೊರತಾಗಿಲ್ಲ. ಹೌದು, ಪಾಕಿಸ್ತಾನ ಅನುಭವಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ವೇಗಿ ಮೊಹಮ್ಮದ್ ಅಮೀರ್, ಮಾಜಿ ಕ್ರಿಕೆಟಿಗ
ಶೋಯಿಬ್ ಅಖ್ತರ್, ಉಮರ್ ಅಕ್ಮಲ್, ಅಜರ್ ಮೊಹಮ್ಮದ್ ಸೇರಿದಂತೆ ಪಾಕ್ ಕ್ರಿಕೆಟ್‌ನ ಹಲವು ಗಣ್ಯರು ಕೊಹ್ಲಿ ದಂಪತಿಗೆ
ಶುಭಾಶಯ ತಿಳಿಸಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಪಾಕ್ ಕ್ರಿಕೆಟ್ ನಾಯಕರಾಗಿದ್ದ ಅಫ್ರಿದಿಗೆ ಜೆರ್ಸಿ ಮೇಲೆ ಭಾರತೀಯ
ಆಟಗಾರರ ಸಹಿ ಹಾಕಿ ಕಳುಹಿಸಿಕೊಟ್ಟಿದ್ದರು. ಆ ಬಳಿಕ ಉಭಯ ರಾಷ್ಟ್ರಗಳ ಕ್ರಿಕೆಟ್ ಅಭಿಮಾನಿಗಳ ನಡುವೆ ಬಾಂಧವ್ಯ
ಹೆಚ್ಚಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಾಜಿ ಪ್ರಿಯತಮೆ ಡೇನಿಯೆಲ್ ವ್ಯಾಟ್ ಶುಭಾಶಯ!
ಮಿಲಾನ್ (ಇಟಲಿ): ಭಾರತ ಕ್ರಿಕೆಟ್ ತಂಡದ ನಾಯಕ ಕೊಹ್ಲಿ-ಬಾಲಿವುಡ್ ನಟಿ ಅನುಷ್ಕಾ ಶರ್ಮ ವಿವಾಹ
ಮುಕ್ತಾಯವಾಗುವುದರೊಂದಿಗೆ ಒಂದೊಂದೇ ಸಂಗತಿಗಳು ಮಹತ್ವ ಪಡೆಯತೊಡಗಿವೆ. ಕೊಹ್ಲಿಗೆ ಸಾರ್ವಜನಿಕವಾಗಿ ಪ್ರೇಮ ನಿವೇದನೆ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಡೇನಿಯೆಲ್ ವ್ಯಾಟ್ ಅವರ ಶುಭ ಹಾರೈಕೆ ಇದರಲ್ಲೊಂದು. 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ 72 ಬಾರಿಸಿದ್ದಾಗ ವ್ಯಾಟ್, ಕೊಹ್ಲಿಯ ಅಭಿಮಾನಿ ಯಾಗಿ ಬದಲಾಗಿದ್ದರು. ಆಗ ಅವರು ಸಾರ್ವಜನಿಕ ನನ್ನ ಮದುವೆಯಾಗ್ತಿàಯಾ ಎಂದು ಕೊಹ್ಲಿಗೆ ಕೇಳಿದ್ದರು. ಅದಕ್ಕೆ ಕೊಹ್ಲಿ ಗಮನ ಕೊಟ್ಟಿರಲಿಲ್ಲ. ಎರಡೂ ಕುಟುಂಬದವರು ಅದಕ್ಕೆ ಮಹತ್ವ ನೀಡಿರಲಿಲ್ಲ. ಇದೀಗ ಕೊಹ್ಲಿ ಮದುವೆಯಾಗಿರುವಾಗ ವ್ಯಾಟ್ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಅಭಿಮಾನಿಗಳ ಕುತೂಹಲವಾಗಿತ್ತು. ಇಂತಹ ಸಂದರ್ಭದಲ್ಲಿ ತಣ್ಣಗೆ ಪ್ರತಿಕ್ರಿಯಿಸಿರುವ ವ್ಯಾಟ್, ಶುಭಾಶಯಗಳು ಅನುಷ್ಕಾ-ಕೊಹ್ಲಿ ಜೋಡಿಗೆ ಎಂದಷ್ಟೇ ಹೇಳಿದ್ದಾರೆ. ಇದಕ್ಕೆ ಕೆಲವೇ ನಿಮಿಷದಲ್ಲಿ ಸಾವಿರಾರು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೂ ಮಾತ್ರವಲ್ಲ
ಕೆಲವರು ಕಾಲೆಳೆಯಲು ಪ್ರಯತ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.