![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Aug 24, 2024, 3:42 PM IST
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ICC) ಮುಂದಿನ ಅಧ್ಯಕ್ಷರಾಗಿ ಜಯ್ ಶಾ (Jay Shah) ಅವರು ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಸದ್ಯ ಬಿಸಿಸಿಐ (BCCI) ಕಾರ್ಯದರ್ಶಿಯಾಗಿರುವ ಜಯ್ ಶಾ ಅವರು ವಿಶ್ವ ಮಂಡಳಿಗೆ ಸೇರಲು ನಿರ್ಧರಿದ್ದಾರೆಯೋ ಎನ್ನುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಐಸಿಸಿ ಬೋರ್ಡ್‌ನಲ್ಲಿರುವ 16 ಸದಸ್ಯರಲ್ಲಿ 15 ಸದಸ್ಯರ ಬೆಂಬಲವನ್ನು ಶಾ ಹೊಂದಿರಬೇಕು. ಬಿಸಿಸಿಐ ಕಾರ್ಯದರ್ಶಿಯಾಗಿ ಅವರ ಸತತ ಎರಡನೇ ಅವಧಿಗೆ ಇನ್ನೂ ಒಂದು ವರ್ಷ ಉಳಿದಿದೆ.
ಹೊಸ ಐಸಿಸಿ ಅಧ್ಯಕ್ಷರು ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಧ್ಯಕ್ಷ ಹುದ್ದೆಗೆ ನಾಮನಿರ್ದೇಶನವನ್ನು ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 27 ಆಗಿದೆ.
ಒಂದು ವೇಳೆ ಜಯ್ ಶಾ ಅವರು ಐಸಿಸಿ ಹುದ್ದೆಗೇರಿದರೆ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಯಾರು ಬರಲಿದ್ದಾರೆ ಎಂಬ ಕುತೂಹಲವಿದೆ. ಇದರ ಬಗ್ಗೆ ಇಲ್ಲಿದೆ ಒಂದು ನೋಟ ಇಲ್ಲಿದೆ.
ರಾಜೀವ್ ಶುಕ್ಲಾ: ಬಿಸಿಸಿಐ ಹುದ್ದೆಗಳನ್ನು ಮರುಜೋಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿರುವ ಹಾಲಿ ಉಪಾಧ್ಯಕ್ಷ ಶುಕ್ಲಾ ಅವರನ್ನು ಒಂದು ವರ್ಷದವರೆಗೆ ಕಾರ್ಯದರ್ಶಿ ಕೆಲಸ ಮಾಡಲು ಕೇಳುವ ಸಾಧ್ಯತೆಯಿದೆ. ಬಿಸಿಸಿಐ ಉಪಾಧ್ಯಕ್ಷರು ರಬ್ಬರ್ ಸ್ಟಾಂಪ್ ನಂತೆ ಇರುವುದರಿಂದ ಶುಕ್ಲಾ ಕಾರ್ಯದರ್ಶಿಯಾಗಲು ಖಂಡಿತವಾಗಿಯೂ ಮನಸ್ಸು ಮಾಡಬಹುದು.
ಆಶಿಶ್ ಶೇಲಾರ್: ಮಹಾರಾಷ್ಟ್ರ ಬಿಜೆಪಿ ಹೆವಿವೇಟ್ ಆಶಿಶ್ ಶೇಲಾರ್ ಅವರು ರೇಸ್ ನಲ್ಲಿದ್ದಾರೆ. ಅವರು ಬಿಸಿಸಿಐ ಖಜಾಂಚಿ ಮತ್ತು ಎಂಸಿಎ ಆಡಳಿತದಲ್ಲಿ ದೊಡ್ಡ ಹೆಸರು. ಆದರೆ ಬಿಸಿಸಿಐ ಕಾರ್ಯದರ್ಶಿ ಹುದ್ದೆಯು ಸಮಯ ತೆಗೆದುಕೊಳ್ಳುವ ಕೆಲಸವಾದ ಕಾರಣ ಒಬ್ಬ ಪೂರ್ಣ ಪ್ರಮಾಣದ ರಾಜಕಾರಣಿಯಾಗಿರುವ ಶೆಲಾರ್ ಅವರು ಹುದ್ದೆ ಒಪ್ಪಿಕೊಳ್ಳುವುದು ಕಷ್ಟ ಎನ್ನಲಾಗಿದೆ.
ಅರುಣ್ ಧುಮಾಲ್: ಐಪಿಎಲ್ ಅಧ್ಯಕ್ಷರಾಗಿರುವ ಅರುಣ್ ಧುಮಾಲ್ ಮಂಡಳಿಯನ್ನು ನಡೆಸಲು ಅಗತ್ಯವಾದ ಅನುಭವವನ್ನು ಹೊಂದಿದ್ದಾರೆ. ಅವರು ಈ ಹಿಂದೆ ಬಿಸಿಸಿಐ ಕೋಶಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಜಂಟಿ ಕಾರ್ಯದರ್ಶಿ ದೇವಜಿತ್ ಲೋನ್ ಸೈಕಿಯಾ ಅವರ ಹೆಸರು ಕೂಡಾ ಈ ರೇಸ್ ನಲ್ಲಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
You seem to have an Ad Blocker on.
To continue reading, please turn it off or whitelist Udayavani.