ಆಸೀಸ್ ಏಕದಿನ ಸರಣಿಯಲ್ಲಿ ಧವನ್ ಜತೆಗಾರ ಯಾರು? ಇಬ್ಬರು ಯುವ ಆಟಗಾರರ ನಡುವೆ ಸ್ಪರ್ಧೆ
Team Udayavani, Nov 25, 2020, 9:59 AM IST
ಹೊಸದಿಲ್ಲಿ: ಆಸ್ಟ್ರೇಲಿಯ ಪ್ರವಾಸದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮ ಗೈರಿನಿಂದಾಗಿ ಭಾರತ ತಂಡ ಹೊಸ ಆರಂಭಿಕನನ್ನು ಕಣಕ್ಕಿಳಿಸಬೇಕಾದ ಸವಾಲೊಂದನ್ನು ಎದುರಿಸುತ್ತಿದೆ.
ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್‌ಗೆ ಆರಂಭಿಕ ಜತೆಗಾರರಾಗಲು ಕನ್ನಡಿಗ ಮಾಯಾಂಕ್ ಅಗರ್ವಾಲ್ ಮತ್ತು ಯುವ ಆಟಗಾರ ಶುಭಮನ್ ಗಿಲ್ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದರೂ ತಪ್ಪಿಲ್ಲ.
ಕಳೆದ ಐಪಿಎಲ್ ಟೂರ್ನಿಯಲ್ಲಿ ಅಗರ್ವಾಲ್ ಮತ್ತು ಗಿಲ್ ಇಬ್ಬರೂ ಉತ್ತಮ ನಿರ್ವಹಣೆ ತೋರಿದ್ದರು. ಹೀಗಾಗಿ ಇವರಿಬ್ಬರಲ್ಲಿ ಯಾರನ್ನು ಆಡಿಸುವುದು ಎಂಬ ಬಗ್ಗೆ ಕೋಚ್ ರವಿಶಾಸ್ತ್ರೀ ಮತ್ತು ನಾಯಕ ವಿರಾಟ್ ಕೊಹ್ಲಿ ಸಹಿತ ಟೀಮ್ ಮ್ಯಾನೆಜ್‌ಮೆಂಟ್ ಗೊಂದಲಕ್ಕೆ ಸಿಲುಕಿರುವುದು ಸುಳ್ಳಲ್ಲ.
ಐಪಿಎಲ್ ಯಶಸ್ಸು
ಐಪಿಎಲ್‌ನಲ್ಲಿ ಪಂಜಾಬ್ ಪರ ಆಡಿದ ಅಗರ್ವಾಲ್ 11 ಪಂದ್ಯಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳ ಸಹಿತ 38.54ರ ಸರಾಸರಿಯಲ್ಲಿ 424 ರನ್ ಬಾರಿಸಿದ್ದರು. ಮತ್ತೂಂದೆಡೆ ಕೆಕೆಆರ್ ಪರ ಆಡಿದ್ದ ಗಿಲ್, 14 ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳ ಸಹಿತ 33.84ರ ಸರಾಸರಿಯಲ್ಲಿ 440 ರನ್ ಗಳಿಸಿದ್ದರು. ಆದರೆ ಗಿಲ್‌ಗೆ ಹೋಲಿಸಿದರೆ, ಅಗರ್ವಾಲ್ ಸ್ಟ್ರೈಕ್‌ರೇಟ್ ಉತ್ತಮವಾಗಿದೆ. ಈ ಕಾರಣದಿಂದ ಮಯಾಂಕ್‌ಗೆ ಹೆಚ್ಚಿನ ಅವಕಾಶ ಎನ್ನಲಡ್ಡಿಯಿಲ್ಲ.
ಅಗರ್ವಾಲ್ ಮತ್ತು ಗಿಲ್ ಈ ಹಿಂದೆ ಭಾರತ ಪರ ಕ್ರಮವಾಗಿ 3 ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಇಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ವರ್ಷಾರಂಭದ ಕಿವೀಸ್ ಪ್ರವಾಸದ ಏಕದಿನ ಸರಣಿಯಲ್ಲಿ ಆಡಿದ್ದ ಅಗರ್ವಾಲ್, ಗರಿಷ್ಠ 32 ರನ್ ಸಹಿತ ಒಟ್ಟು 36 ರನ್ ಗಳಿಸಿದ್ದರು. ಗಿಲ್ ಕೂಡ 2019ರ ನ್ಯೂಜಿಲ್ಯಾಂಡ್ ಪ್ರವಾಸದಲ್ಲೇ ಏಕದಿನ ಪಂದ್ಯ ಆಡಿದ್ದರು. ಗರಿಷ್ಠ 9 ರನ್ ಸಹಿತ 16 ರನ್ ಮಾತ್ರ ಗಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.