ಟೆಸ್ಟ್ ತಂಡದಲ್ಲೂ ಅಶ್ವಿನ್ ರನ್ನೇಕೆ ಕಡೆಗಣಿಸಲಾಗುತ್ತಿದೆ?
Team Udayavani, Sep 4, 2021, 8:40 AM IST
ಲಂಡನ್: ವಿಶ್ವಶ್ರೇಷ್ಠ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತ ಕ್ರಿಕೆಟ್ ತಂಡದ ಮೂರೂ ತಂಡಗಳಲ್ಲಿ 2017ರವರೆಗೆ ಆಡುತ್ತಿದ್ದರು. ಅಲ್ಲಿಂದ ನಂತರ ಇದ್ದಕ್ಕಿದ್ದಂತೆ ಟೆಸ್ಟ್ ತಂಡಗಳಿಗೆ ಮಾತ್ರ ಆಯ್ಕೆಯಾಗ ತೊಡಗಿದರು. ಈಗವರು ಟೆಸ್ಟ್ ತಂಡದಲ್ಲೂ ಜಾಗ ಪಡೆಯಲು ಒದ್ದಾಡುತ್ತಿದ್ದಾರೆ. ಅತ್ಯುತ್ತಮ ಲಯದಲ್ಲಿದ್ದೂ ಸಲ್ಲದ ಕಾರಣಗಳಿಂದ ಜಾಗ ಕಳೆದುಕೊಳ್ಳುತ್ತಿದ್ದಾರೆ. ಇದೇಕೆ ಎನ್ನುವುದು ಪ್ರಶ್ನೆ ಹುಟ್ಟಿಸಿದೆ.
ಪ್ರಸ್ತುತ ಅವರು 79 ಟೆಸ್ಟ್ ಪಂದ್ಯಗಳಿಂದ 413 ವಿಕೆಟ್ ಗಳಿಸಿದ್ದಾರೆ. ಇದು ನಿಜಕ್ಕೂ ಅದ್ಭುತ ಸಾಧನೆ. ಇತ್ತೀಚೆಗೆ ಮುಗಿದ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಉಳಿದವರೆಲ್ಲ ವಿಫಲರಾಗಿದ್ದಾಗ ಅಶ್ವಿನ್ ಸಮಾಧಾನಕರ ಪ್ರದರ್ಶನ ನೀಡಿದ್ದರು.
ಆದರೆ ಇಂಗ್ಲೆಂಡ್ ವಿರುದ್ಧದ ನಾಲ್ಕೂ ಟೆಸ್ಟ್ ಪಂದ್ಯಗಳಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಅವರ ಬದಲು ರವೀಂದ್ರ ಜಡೇಜಗೆ ಸ್ಥಾನ ಸಿಕ್ಕಿದೆ. ಜಡೇಜ ಬ್ಯಾಟಿಂಗ್ ಚೆನ್ನಾಗಿ ಮಾಡುತ್ತಾರೆನ್ನುವುದು ಇಲ್ಲಿನ ಕಾರಣ. ಆದರೆ ಅಶ್ವಿನ್ ಇದುವರೆಗೆ 5 ಶತಕ ಹೊಡೆದಿದ್ದಾರೆ, ಜಡೇಜ ಬಾರಿಸಿರುವುದು ಕೇವಲ ಒಂದು ಶತಕ. ವಿಕೆಟ್ ಗಳಿಕೆಯಲ್ಲಂತೂ ಜಡೇಜ ಬಹಳ ಕಡಿಮೆಯೇ ಇದ್ದಾರೆ. ಹೀಗಿದ್ದರೂ ಅಶ್ವಿನ್‌ರನ್ನು ಕೈಬಿಡುತ್ತಲೇ ಇರುವುದು ಗೊಂದಲ ಮೂಡಿಸಿದೆ.
ಇದನ್ನೂ ಓದಿ:ಭಾರತ ಟೇಬಲ್ ಟೆನಿಸ್ ತಂಡದ ಕೋಚ್ ರಾಯ್ ವಿರುದ್ಧ ಮಣಿಕಾ ಬಾತ್ರಾ ಫಿಕ್ಸಿಂಗ್ ಆರೋಪ!
2019ರಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಶ್ವಿನ್, ತಾನು 5 ವಿಕೆಟ್ ಪಡೆಯಬೇಕು, ಇಲ್ಲ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬೇಕು. ಇಷ್ಟೇ ತನ್ನ ಮುಂದಿರುವ ಆಯ್ಕೆ ಎಂದಿದ್ದರು. ಅಶ್ವಿನ್ ಅವರ ಈ ಹೇಳಿಕೆಯಲ್ಲೇ ಪ್ರಸ್ತುತ ಎಲ್ಲ ಸಮಸ್ಯೆಗಳಿಗೆ ಉತ್ತರವಿದೆಯಾ ಎಂಬ ಅನುಮಾನಗಳಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.