![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Apr 14, 2021, 6:39 PM IST
ಬಾಲಿವುಡ್ ನಟಿ ಊರ್ವಶಿ ರೌಟೆಲಾ ಹಾಗೂ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ರಿಲೆಷನ್‍ಶಿಪ್‍ನಲ್ಲಿದ್ದದ್ದು ಈಗ ಹಳೇಯ ವಿಚಾರ. ಹೊಸ ಮ್ಯಾಟರ್ ಏನಪ್ಪಾ ಅಂದ್ರೆ ಬಿಟೌನ್‍ನ ಈ ಚೆಂದುಳ್ಳಿ ಚೆಲುವೆಗೆ ಯಾವ ಕ್ರಿಕೆಟಿಗರ ಬಗ್ಗೆಯೂ ಗೊತ್ತಿಲ್ಲವಂತೆ.
ಹೌದು, ಅದು 2018ರ ಸಮಯ. ಪಂತ್ ಹಾಗೂ ಊರ್ವಶಿ ಕುರಿತು ರೂಮರೊಂದು ದಟ್ಟವಾಗಿ ಹಬ್ಬಿತ್ತು. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಟಾಕ್ ಕೇಳಿ ಬಂದಿತ್ತು. ಒಬ್ಬರ ಕಿವಿಯಿಂದ ಮತ್ತೊಬ್ಬರ ಕಿವಿಗೆ ಈ ಗುಸುಗುಸು ಗುಟ್ಟು ಹರಡುತ್ತಿರುವಾಗಲೇ ಪಂತ್, ಊರ್ವಶಿಯಿಂದ ಅಂತರ ಕಾಯ್ದುಕೊಂಡು ಬಿಟ್ಟರು. ವಾಟ್ಸಾಪ್‍ನಲ್ಲಿ ತನ್ನಾಕೆಯನ್ನು ಬ್ಲಾಕ್ ಮಾಡಿಬಿಟ್ಟರು. ‘They are in love’ ಎನ್ನುವ ಸದ್ದಿನ ನಡುವೆಯೇ ಇಶಾ ನೆಗಿ ಜತೆಗಿನ ತಮ್ಮ ಪ್ರೀತಿಯನ್ನು ರಿಷಭ ಅಧಿಕೃತವಾಗಿ ಘೋಷಿಸಿಬಿಟ್ಟರು.
ಪಂತ್ ಹಾಗೂ ಊರ್ವಶಿಯ ಈ ಓಲ್ಡ್ ಲವ್ ಕಹಾನಿ ಈಗೇಕೆ ಮುನ್ನೆಲೆಗೆ ಬಂತು ಎನ್ನುವ ಪ್ರಶ್ನೆಗೆ ಕಾರಣ, ಆಕೆ ನೀಡಿರುವ ಒಂದು ಸ್ಟೇಟ್‍ಮೆಂಟ್.
ಇತ್ತೀಚಿಗೆ ಸೋಷಿಯಲ್ ಮೀಡಿಯಾ ಲೈವ್‍ನಲ್ಲಿ ‘ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು’ ಎಂದು ಊರ್ವಶಿಗೆ ಆಕೆಯ ಅಭಿಮಾನಿಯೋರ್ವ ಪ್ರಶ್ನೆ ಹಾಕಿದ್ದ. ಇದಕ್ಕೆ ಉತ್ತರಿಸಿದ ಆಕೆ, ನನಗೆ ಯಾವ ಕ್ರಿಕೆಟರ್ ಬಗ್ಗೆಯೂ ಗೊತ್ತಿಲ್ಲ,ಯಾಕಂದರೆ ನಾನು ಕ್ರಿಕೆಟ್ ನೋಡುವುದಿಲ್ಲ ಎಂದಿದ್ದಾರೆ. ಮುಂದುವರೆದು ಮಾತಾಡಿದ ಆಕೆ, ಸಚಿನ್ ತೆಂಡೊಲ್ಕರ್ ಹಾಗೂ ವಿರಾಟ್ ಕೊಹ್ಲಿ ಬಗ್ಗೆ ತುಂಬಾ ಗೌರವ ಇದೆ ಎಂದು ಹೇಳಿದ್ದಾರೆ.
ಊರ್ವಶಿಯ ಈ ಉತ್ತರದಿಂದ ಗೊಂದಲಕ್ಕೆ ಒಳಗಾದ ಅಭಿಮಾನಿಗಳು, ಯಾವ ಕ್ರಿಕೆಟರ್ ಗಳ ಬಗ್ಗೆಯೂ ಗೊತ್ತಿಲ್ಲವೆಂದ ಮೇಲೆ ವಿರಾಟ್ ಹಾಗೂ ತೆಂಡೊಲ್ಕರ್ ಕುರಿತು ಗೌರವ ಹೇಗೆ ಬಂತು ? ಬಹುಶಃ ರಿಷಭ್ ಪಂತ್ ಮೇಲಿನ ಕೋಪಕ್ಕೆ ಹಾಗೆ ಹೇಳಿರಬಹುದೆಂದು ತಮ್ಮಲ್ಲೆ ಪ್ರಶ್ನೆ ಹಾಕಿಕೊಂಡಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.