T20; ನೋ ಬಾಲ್ ಗೆ ರಿಂಕು ಸಿಂಗ್ ಹೊಡೆದ ಸಿಕ್ಸರ್ ಪರಿಗಣಿಸಲಿಲ್ಲ ಏಕೆ?
ಐಸಿಸಿ ನಿಯಮದಲ್ಲಿ ಏನಿದೆ ?
Team Udayavani, Nov 24, 2023, 4:54 PM IST
ವಿಶಾಖಪಟ್ಟಣ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ನಡೆದ ಟಿ 20 ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ವೇಳೆ 209 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಹೀರೋ ಆಗಿ ಹೊರಹೊಮ್ಮಿದರು. ಆದರೆ ಅವರು ಕೊನೆಯ ಎಸೆತದಲ್ಲಿ ನೋ ಬಾಲ್ ಗೆ ಬಾರಿಸಿದ ಸಿಕ್ಸರ್ ಅನ್ನು ಪರಿಗಣಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ ಮತ್ತು ಹಲವರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಸೀನ್ ಅಬಾಟ್ ಎಸೆದ ಕೊನೆಯ ಬಾಲ್ ಗೆ ಕೇವಲ ಒಂದು ರನ್ ಅಗತ್ಯವಿತ್ತು. ಈ ವೇಳೆ ರಿಂಕು ಸಿಂಗ್ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ್ದರು. ಆದಾಗ್ಯೂ, ಆರು ರನ್‌ಗಳನ್ನು ಎಣಿಕೆ ಮಾಡಲಾಗಿಲ್ಲ ಏಕೆಂದರೆ ಕ್ಷಣದಲ್ಲೇ ಮೂರನೇ ಅಂಪೈರ್ ಬೌಲರ್ ಅತಿಕ್ರಮಿಸಿದ್ದನ್ನು ದೃಢಪಡಿಸಿ ನೋ-ಬಾಲ್ ನೀಡಿ ಯಾಗಿತ್ತು. ನೋ ಬಾಲ್ ನ ಒಂದು ರನ್ ನಿಂದಾಗಿ ಭಾರತ ಗೆಲುವು ಸಾಧಿಸಿತ್ತು.
ಐಸಿಸಿ ನಿಯಮವೇನು?
ಐಸಿಸಿ ಪುರುಷರ ಟಿ 20 ಆಟದ ನಿಯಮ 16.5.1 ರ ಪ್ರಕಾರ: “16.1, 16.2 ಅಥವಾ 16.3.1 ಷರತ್ತುಗಳಲ್ಲಿ ವ್ಯಾಖ್ಯಾನಿಸಲಾಗಿದ್ದು, ಫಲಿತಾಂಶವನ್ನು ತಲುಪಿದ ತತ್ ಕ್ಷಣ, ಪಂದ್ಯವು ಅಂತ್ಯಗೊಳ್ಳುತ್ತದೆ. ಷರತ್ತು 41.17.2 (ಪೆನಾಲ್ಟಿ ರನ್‌ಗಳು) ಹೊರತುಪಡಿಸಿ ನಂತರ ಬರುವ ಯಾವುದನ್ನೂ ಅದರ ಭಾಗವಾಗಿ ಪರಿಗಣಿಸಲಾಗುವುದಿಲ್ಲ.
ಬ್ಯಾಟ್ಸ್ ಮ್ಯಾನ್ ಪಂದ್ಯವನ್ನು ಗೆಲ್ಲಲು ಸಾಕಷ್ಟು ರನ್‌ಗಳನ್ನು ಪೂರ್ಣಗೊಳಿಸುವ ಮೊದಲು ಬೌಂಡರಿ ಗಳಿಸಿದರೆ, ಸಂಪೂರ್ಣ ಬೌಂಡರಿ ಭತ್ಯೆಯನ್ನು ತಂಡದ ಮೊತ್ತಕ್ಕೆ ಮತ್ತು ಬ್ಯಾಟ್‌ನಿಂದ ಹೊಡೆದ ಸಂದರ್ಭದಲ್ಲಿ ಸ್ಟ್ರೈಕರ್‌ನ ಸ್ಕೋರ್‌ಗೆ ಸಲ್ಲುತ್ತದೆ.
ಆಸೀಸ್ ನೀಡಿದ 208 ರನ್ ಗುರಿ ಬೆನ್ನಟ್ಟಿದ ಭಾರತ 19.5 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು. ಕುತೂಹಲ ಕಾರಿ ಕೊನೆಯ ಓವರ್ ನಲ್ಲೇ ಮೂರು ವಿಕೆಟ್ ಗಳನ್ನೂ ಕಳೆದುಕೊಂಡಿತ್ತು.ಕೊನೆಯ ಎಸೆತ ನೋ ಬಾಲ್ ಆಗಿ ಜಯ ಸಾಧಿಸಿತ್ತು. ರಿಂಕು ಸಿಂಗ್ ಔಟಾಗದೆ 14 ಎಸೆತಗಳಲ್ಲಿ 22 ರನ್ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.